The government should provide funding to the Nadaf/Pinjara Association.

ಯಲಬುರ್ಗಾ.ಮಾ.17.: ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ಅಭಿವೃದ್ಧಿ ನಿಗಮ ಮಂಡಳಿ ಇದ್ದರು ರಾಜ್ಯ ಸರಕಾರ ಇದುವರೆಗೂ ಅನುದಾನ ನೀಡಿಲ್ಲ ನದಾಫ್/ಪಿಂಜಾರ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಸಮಾಜದ ಅಭಿವೃದ್ಧಿಗೆ ರಾಜ್ಯ ಸರಕಾರ ಅನುದಾನ ನೀಡಬೇಕು ಎಂದು ಯಲಬುರ್ಗಾ ತಾಲೂಕ ನದಾಫ್/ಪಿಂಜಾರ ಸಂಘದ ಅಧ್ಯಕ್ಷರಾದ ಖಾದರಸಾಬ ತೋಳಗಲ್ ಹೇಳಿದರು.
ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನದಾಫ್/ಪಿಂಜಾರ ಸಂಘದ ಅಭಿವೃದ್ಧಿಗೆ ರಾಜ್ಯ ಸರಕಾರ ಅನುದಾನ ನೀಡುವ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. ನದಾಫ್/ಪಿಂಜಾರ ಸಮಾಜ ಅಭಿವೃದ್ಧಿಗಾಗಿ ನಿಗಮ ಮಂಡಳಿಯಾಗಿ 2ವರ್ಷ ಗತಿಸಿದೆ ಆದರೆ ಈಗಿನ ರಾಜ್ಯ ಸರಕಾರ ಅನುದಾನ ನೀಡಿಲ್ಲ ಇದರಿಂದ ತೊಂದರೆಯಾಗಿದ್ದು ಮುಂಬರುವ ರಾಜ್ಯ ಸರಕಾರದ ಬಜೆಟನಲ್ಲಿ ಅನುದಾನ ನೀಡಬೇಕು ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಆಗ್ರಹಿಸಿದರು. ನದಾಫ್/ಪಿಂಜಾರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಎಮ್ ಎಫ್ ನದಾಫ್ ಮತ್ತು ಹಸನಸಾಬ ವಕೀಲರು ಮಾತನಾಡಿ, ನದಾಫ್/ಪಿಂಜಾರ ಸಮಾಜವು ಮುಖ್ಯ ವಾಹಿನಿಗೆ ಬರಬೇಕು ಸುಮಾರು ದಶಕಗಳ ಕಾಲ ಕಡುಬಡತನದಲ್ಲಿ ಕಷ್ಟಕರ ಜೀವನ ಸಾಗಿಸುತ್ತಿದ್ದು ಈ ಸಮಾಜಕ್ಕೆ ಸರಕಾರ ಹೆಚ್ಚು ಒತ್ತನ್ನು ನೀಡಲಿ ಎಂದರು. ನದಾಫ್/ಪಿಂಜಾರ ಸಂಘದ ಯಲಬುರ್ಗಾ ತಾಲೂಕ ಪ್ರಧಾನ ಕಾರ್ಯದರ್ಶಿ ಖಾಜಾವಲಿ ಜರಕುಂಟಿ ಮತ್ತು ರಫೀಕಸಾಬ ನದಾಫ್ ಮಾತನಾಡಿ, ನದಾಫ್ ಸಮಾಜವು ಅಭಿವೃದ್ಧಿಯಿಂದ ವಂಚಿತರಾಗಿದ್ದು ಜೀವನ ಸಾಗಿಸುವಲ್ಲಿ ಊರುರು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಇದರಿಂದ ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ ನದಾಫ್ ಪಿಂಜಾರ ಸಮಾಜಕ್ಕೆ ಪ್ರವರ್ಗ 1 ರ ಮೀಸಲಾತಿ ಲಭ್ಯವಿದ್ದರೂ ಈ ಮಿಸಲಾತಿಯಿಂದ ವಂಚಿತರಾಗುತ್ತಿದ್ದಾರೆ ಕಾರಣ ರಾಜ್ಯಸರಕಾರ ಇದನ್ನ ಗಮನಕ್ಕೆ ತೆಗೆದುಕೊಂಡು ನದಾಫ್/ಪಿಂಜಾರ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಲಿ ಎಂದರು. ಇದೆ ಸಂದರ್ಭದಲ್ಲಿ ನದಾಫ್/ಪಿಂಜಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ನದಾಫ್/ಪಿಂಜಾರ ಸಂಘದ ಉಪಾಧ್ಯಕ್ಷ ಪಕೀರಸಾಬ ನದಾಫ್, ಮುಖಂಡರಾದ ಮೈಬುಸಾಬ ಬೆಟಗೇರಿ, ಅಲ್ಲಾಸಾಬ ಶಿರಗುಂಪಿ, ಮರ್ತುಜಾಸಾಬ ನದಾಫ್, ಬಾಬುಸಾಬ ಲಾಕ್ಕಲಕಟ್ಟಿ, ಅಬ್ದುಲಗನಿಸಾಬ ನೂರಭಾಷ, ಮರ್ತುಜಸಾಬ ಕಿನ್ನಳ, ಹುಸೇನಸಾಬ ಕ್ಯಾಡದ, ಅಮೀನಸಾಬ ತೋಳಗಲ್, ಖಲೀಮ್ ಹಿರೇಮನಿ, ಆಶ್ರಫಅಲಿ ನದಾಫ್, ಶೇಖಸಾಬ ನೂರಭಾಷ, ಖಾಜಾಸಾಬ ನೂರಭಾಷ, ಸೈದುಸಾಬ ನದಾಫ್, ಬಾಬುಸಾಬ ಬಡಿಗೇರ ಸೇರಿ ಇತರರು ಉಪಸ್ಥಿತರಿದ್ದರು.