Breaking News

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಗಳಿಂದ ಕರ್ನಾಟಕ ಸರಕಾರಕ್ಕೆಅಭಿನಂದನಾ ಪತ್ರ

A congratulatory letter from Reverend Shri Sadguru Basava Prabhu Swamiji to Government of Karnataka

ಓಂ ಶ್ರೀ ಗುರು ಬಸವ ಲಿಂಗಾಯ ನಮಃ


ಸನ್ಮಾನ್ಯ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ವಿಧಾನ ಸೌದ ಬೆಂಗಳೂರು.

ಕರ್ನಾಟಕ ಸರಕಾರಕ್ಕೆ ಶರಣು ಶರಣಾರ್ಥಿಗಳು

ಹನ್ನೆರಡನೇ ಶತಮಾನದ ವಿಶ್ವಗುರು ಬಸವಣ್ಣನವರು ಆಗಿನ ಬಿಜಾಪೂರು ಜಿಲ್ಲೆಯ ಹುನಗುಂದ ತಾಲೂಕಿನ ಬಸವನ ಬಾಗೆವಾಡಿಯ ಇಂಗಳೇಶ್ವರದ ಮಾದರಸ-ಮಾದಲಾಂಬೆಯ ಉದರದಲ್ಲಿ ಕನ್ನಡ ನಾಡಿನ ಕುವರರಾಗಿ ಜನಿಸಿದರು. ಕನ್ನಡ ಭಾಷೆಯಲ್ಲಿ ವಚನಗಳನ್ನು ಬರೆದರು ತಮ್ಮೊಟ್ಟಿನ ಶರಣರಿಗೆ ಬರೆಯಲು ಪ್ರೇರಣಾದಾಯಕರಾಗಿ ಕನ್ನಡ ನಾಡು ನುಡಿಗೆ ಅನುಭವ ಮಂಟಪದ ಮೂಲಕ ಅರಿವು-ಆಚಾರದೊಂದಿಗೆ ವಿಶ್ವದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹುಟ್ಟುಹಾಕಿದ್ದಲ್ಲದೆ, ಕಾಯಕ-ದಾಸೋಹದ ಪರಿಕಲ್ಪನೆಯನ್ನು ಜಾರಿಗೆ ತಂದು ಸರ್ವರಂಗದಲ್ಲಿಯೂ ಸಮಾನತೆಯನ್ನು ತಂದು ಸಮಾಜೋ-ಧಾರ್ಮಿಕ ಕ್ರಾಂತಿ ಗೈದು ಅದರಲ್ಲಿ ಯಶಸ್ಸನ್ನು ತಂದು ಕೊಟ್ಟರು. ಗುರು ಬಸವಣ್ಣನವರ ಈ ಮಹೋನ್ನತವಾದ ವಿಚಾರಧಾರೆಗೆ ಲಕ್ಷೋಪಲಕ್ಷ ಜನರು ಬಂದು ಸಾಂಸ್ಕೃತಿಕವಾಗಿ ತಮ್ಮ ಬದುಕನ್ನು ಕಟ್ಟಿಕೊಂಡರು ಅಲ್ಲದೆ ಎಲ್ಲಾ ಜಾತಿ ವರ್ಗದ ಮೂಲದವರು ತಮ್ಮ ಕಾಯಕದ ಜೊತೆಜೊತೆಗೆ ಅನುಭವ ಮಂಟಪದ ಸಂಚೇತಕ ಶಕ್ತಿಯಾಗಿ ನಿಂತವರು 770 ಅಮರಗಣಂಗಳು (ಸದಸ್ಯರು).

ಇಂತಹ ಸಾಮಾಜಿಕ ಸಮಾನತೆಯ ಹರಿಕಾರನಾದ ವಿಶ್ವಗುರು ಬಸವಣ್ಣನವರನ್ನು ಕನ್ನಡ ನೆಲದ ಅಂತರಂಗದ ಧ್ವನಿಯಾಗಿ, ಈ ನೆಲದ ಸಾಂಸ್ಕೃತಿಕ ನಾಯಕನನ್ನಾಗಿ ಮಾಡಿ ಘನವೆತ್ತ ಸರಕಾರ ಘೋಷಿಸಬೇಕೆಂದು 2015ರಲ್ಲಿ ಆಗಿನ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಸಿ ಎಸ್ ದ್ವಾರಕನಾಥರವರು ಅಂದಿನ ಮುಖ್ಯ ಮಂತ್ರಿಯಾಗಿದ್ದ ಸಿದ್ಧರಾಮಯ್ಯನವರಿಗೆ ಪತ್ರದ ಮೂಲಕ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪೂರಕವಾಗಿ ಬಸವಧರ್ಮ ಪೀಠದ ಅಧ್ಯಕ್ಷರಾದ ಮಹಾಜಗದ್ಗುರು ಮಾತೆ ಮಹಾದೇವಿ ತಾಯಿಯವರು ಸಿ ಎಸ್ ಧ್ವಾರಕನಾಥ ಅವರನ್ನು ಶರಣ ಮೇಳ ಕಾರ್ಯಕ್ರಮದಲ್ಲಿ ಸತ್ಕರಿಸಿ ಶರಣಮೇಳದಲ್ಲಿಯೂ ನಿರ್ಣಯವನ್ನು ತೆಗೆದುಕೊಂಡು ಸಾರ್ವಜನಿಕ ಹೋರಾಟಕ್ಕೆ ಕರೆಕೊಟ್ಟರು. ಅಂದಿನಿಂದ ಕಲ್ಯಾಣ ಪರ್ವ ಮತ್ತು ಶರಣ ಮೇಳ ಹಾಗೂ ಲಿಂಗಾಯತ ಧರ್ಮ ಮಾನ್ಯತೆ ಹೋರಾಟಗಳಲ್ಲಿ ಸಾರ್ವಜನಿಕ ನಿರ್ಣಯ ತೆಗೆದುಕೊಂಡು ನಾಡಿನ ಹೆಸರಾಂತ ಅನೇಕ ಪತ್ರಿಕೆಗಳ ಮೂಲಕ ಜಾಗೃತಿ ಮೂಡಿಸಲಾಗುತಿತ್ತು.

ಮಾತಾಜಿಯವರ ನಂತರದಲ್ಲಿ ಬಸವತತ್ವ ಸಂಘಟನೆಗಳಾದ ಜಾಗತಿಕ ಲಿಂಗಾಯತ ಧರ್ಮ ಮಹಾಸಭೆ, ಮಠಾಧೀಶರ ವೇದಿಕೆ, ಅಖಿಲ ಭಾರತ ವೀರಶೈವ ಮಹಾಸಭೆ ಹಲವಾರು ಪತ್ರಿಕೆಯ ಹೇಳಿಕೆಯಲ್ಲಿ ಒಕ್ಕೊರಲಿನಿಂದ ಸಹಮತವನ್ನು ವ್ಯಕ್ತಪಡಿಸಿದ್ದರು ಹಾಗೂ ಇತ್ತೀಚಿಗೆ ಮಠಾದೀಶರ ನಿಯೋಗ ಇದೇ ಹೋರಾಟಕ್ಕೆ ಬೆಂಬಲ ನೀಡಿ ಮಾನ್ಯ ಮುಖ್ಯ ಮಂತ್ರಿಗಳಿಗೆ ನಿಯೋಗವೊಂದನ್ನು ತೆಗೆದುಕೊಂಡು ಬೆಂಗಳೂರಿನ ವಿಧಾನ ಸೌದಕ್ಕೆ ಹೋಗಿ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿಯನ್ನು ಕೊಟ್ಟಿರುವುದು ಸ್ಮರಿಸಬಹುದು.

ಒಟ್ಟಾರೆ ಬಸವಧರ್ಮ ಸಂಘ-ಸಂಸ್ಥೆಗಳ ಹೋರಾಟದ ಪ್ರತಿಫಲವಾಗಿ ನೂತನ ಸರಕಾರದ ಮಾನ್ಯ ಮುಖ್ಯಮಂತ್ರಿಯವರಾದ ಬಸವಪ್ರಿಯ ಸನ್ಮಾನ್ಯ ಸಿದ್ಧರಾಮಯ್ಯನವರು ಸಕರಾತ್ಮವಾಗಿ ಸ್ಪಂದಿಸಿ ನಿನ್ನೆಯ ದಿ: 18-01-2024 ರಂದು ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ವಿಶ್ವಗುರು ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಈ ಆದೇಶವು ತಕ್ಷಣದಿಂದ ಜಾರಿಗೆ ಬರುವಂತೆ ಅದಿಸೂಚನೆ ಹೊರಡಿಸಿರುವುದು ಅಪಾರ ಬಸವ ಭಕ್ತರಿಗೂ ಮತ್ತು ಕರ್ನಾಟಕ ಜನತೆಗೆ ಸಂತಸವನ್ನುಂಟು ಮಾಡಿದೆ. ಬಸವಣ್ಣನವರ ತತ್ವ ಸಂದೇಶವನ್ನು ಮೈಗೂಡಿಸಿಕೊಂಡ ಮಾನ್ಯ ಸಿದ್ದರಾಮಯ್ಯನವರು ಬಸವ ತತ್ವದ ಮೇಲೆ ಸರಕಾರವನ್ನು ಮುನ್ನೆಡೆಸುವುದಲ್ಲದೆ ಇಂತಹದ್ದೊಂದು ಐತಿಹಾಸಿಕ ನಿರ್ಣಯ ಜಾರಿಗೊಳಿಸಿದ್ದಕ್ಕಾಗಿ ಅಪಾರ ಬಸವ ಭಕ್ತರು ಈ ಪತ್ರದ ಮೂಲಕ ಅಭಿನಂದಿಸುತ್ತೇವೆ ಮತ್ತು ಬಸವತತ್ವ ನಿಷ್ಟ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಹಾಗೂ ಅವರ ಘನ ಸರಕಾರದ ಮೇಲೆ ಗುರು ಬಸವಣ್ಣನವರ ಕೃಪೆ ಸದಾ ಇರಲೆಂದು ಹೃದಯ ತುಂಬಿ ಹಾರೈಸುತ್ತೇವೆ.

ಮನೆ-ಮನೆಗೆ ಸಂಭ್ರಮ ಹಂಚಲು ಕರೆ:
ಕರ್ನಾಟಕ ಸರಕಾರದಿಂದ ವಿಶ್ವಗುರು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದ್ದಕ್ಕಾಗಿ ಬಸವಭಕ್ತರು, ಬಸವಾಭಿಮಾನಿಗಳು, ಲಿಂಗಾಯತ ಧರ್ಮಿಯರು ಮುಂಬರುವ ಬಸವ ಜಯಂತಿಯವರೆಗೆ ಮನೆ-ಮನೆಯಲ್ಲಿ “ಕರ್ನಾಟಕ ಸಾಂಸ್ಕೃತಿಕ ಜ್ಯೋತಿ ವಿಶ್ವಗುರು ಬಸವಣ್ಣನವರು” ಎಂಬ ಹೆಸರಿನಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮಾನ್ಯ ಸಿದ್ಧರಾಮಯ್ಯ ಸರಕಾರಕ್ಕೆ ಅಭಿನಂಧನೆ ಸಲ್ಲಿಸೋಣ.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.