Breaking News

ನಾರಾಯಣಗುರು ಸಮಾಜ ಸುಧಾರಣೆಯ ಹರಿಕಾರರು: ಹನುಮಂತಪ್ಪ ಅಂಡಗಿ

Narayanaguru was the pioneer of social reform: Hanumanthappa Andagi

ಜಾಹೀರಾತು

ಅಳವಂಡಿ: ನಾರಾಯಣ ಗುರು ಸಮಾಜ ಸುಧಾರಣೆಯ ಸಾಮಾಜಿಕ ಸುಧಾರಣೆಯ ಕ್ರಾಂತಿಗೆ ಕಾರಣರಾದ ನಾರಾಯಣ ಗುರು ಅವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಲೋಕ ಗುರು. ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ಬಾಲ್ಯವಿವಾಹ ,ಜೀತ ಪದ್ಧತಿ, ವಿರುದ್ಧ ಹೋರಾಟ ಮಾಡಿ , ಸಮಾಜದೊಂದಿಗೆ ಬದುಕಿನ ಪಾಠ ಕಲಿತು, ಬ್ರಹ್ಮ ಜ್ಞಾನವನ್ನು ಪಡೆದು, ನಾರಾಯಣ ಗುರುವಾದರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಇದುವರೆಗೆ ನಾರಾಯಣ ಗುರುಗಳಂತಹ ಮಹಾತ್ಮನನ್ನು ಲೋಕ ತಿಳಿಯದೆ ಹೋಯಿತಲ್ಲ ಎಂದು ಇಂದ್ರ ಗಾಂಧಿಯವರು ಹೇಳಿರುವುದು ಅವರ ವ್ಯಕ್ತಿತ್ವದ ಆಕರ್ಷಣೆಗೆ ನಿದರ್ಶನವಾಗಿದೆ ಎಂದು ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು. ಅವರು ಅಳವಂಡಿ ಸಮೀಪದ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯ ವಿಭಾಗದಲ್ಲಿ ಹಮ್ಮಿಕೊಂಡ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದರು. ಅವರು ಮುಂದುವರೆದ ಮಾತನಾಡುತ್ತಾ, 12ನೇ ಶತಮಾನದ ಶರಣರಲ್ಲಿಯೇ ಪ್ರಮುಖ ಸ್ಥಾನಪಡೆದ ನುಲಿಯ ಚಂದಯ್ಯನು ತನ್ನ ಕಾಯಕ ಮತ್ತು ದಾಸೋಹದ ಮೂಲಕ ಪ್ರಸಿದ್ಧರಾದವರು. ಬಸವಾದಿ ಶರಣರಲ್ಲಿಯೇ ಕಾಯಕ ಸಿದ್ಧಾಂತಕ್ಕೆ ಮಹತ್ವ ನೀಡಿ ಅದರ ಮೌಲ್ಯವನ್ನು ಹೆಚ್ಚಿಸಿದವರು. ನುಲಿಯ ಚಂದಯ್ಯ ಬಸವಾದಿ ಶರಣರಲ್ಲಿಯೇ ವಿಶಿಷ್ಟ ಸ್ವಭಾವ ಹಾಗೂ ವ್ಯಕ್ತಿತ್ವವನ್ನು ಹೊಂದಿದ ಸ್ವಚ್ಛ ಮನದ ಸ್ವತಂತ್ರ ವಿಚಾರವಾದಿಯಾಗಿದ್ದರು ಎಂದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ದೇವಪ್ಪ ಬಚ್ಚಕ್ಕನವರ ಅವರು ಮಾತನಾಡುತ್ತಾ, ಕೇರಳ ರಾಜ್ಯದಲ್ಲಿ ಜಾತಿ, ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರು ಎಂಬ ಸಮಾಜ ಸುಧಾರಕ ಉದಯಿಸಿದರು. ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮೀಸಲಾಗಿಟ್ಟಿದ್ದರು. ಅಸ್ಪೃಶ್ಯರ ಮೇಲೆ ನಡೆದ ದೌರ್ಜನ್ಯವನ್ನು ಹತ್ತಿಕ್ಕಲು ಇವರ ಶ್ರಮ ಸಾರ್ಥಕವಾಯಿತು. ಶರಣ ನುಲಿಯ ಚಂದಯ್ಯ ನವರು ತಮ್ಮ ಇಷ್ಟಲಿಂಗದ ಕೈಯಿಂದಲೇ ಹಗ್ಗ ಮಾರುವ ಕಾಯಕ ಮಾಡಿಸಿದವರು. ಇವರು ಪ್ರತಿನಿತ್ಯ ಹಗ್ಗ ಮಾರಿ ಬಂದ ಹಣದಿಂದಲೇ ಜಂಗಮ ದಾಸೋಹ ಮಾಡಿ, ಸಮಾಜಮುಖಿಯಾಗಿ ಇಹಪರ ಎರಡರಲ್ಲೂ ಇಹದಲ್ಲಿ ಸುಖ, ಲಿಂಗಸೇವೆಯಿಂದ ಪರದಲ್ಲಿ ಸುಖ. ಆದರೆ ಇಹಪರ ಎರ ಡೂ ನಾಸ್ತಿಯಾಗಿ ನಿಜ ಸುಖ ದೊರೆಯುವುದು ಜಂಗಮ ಸೇವೆಯಿಂದ ಮಾತ್ರ ದೊರೆಯುವುದು ಎಂದು ಸಾರಿದ ಶಿವಶರಣರು ಎಂದರು. ಶಿಕ್ಷಕರಾದ ಬಸವರಾಜ ತೊಂಡಿಹಾಳ, ಕಸ್ತೂರಿ ಕಡೇಮನಿ ,ಪವಿತ್ರ ವೈದ್ಯ, ಚಾರುಲತಾ ಹೊನಕಳಸೆ, ರೇಣುಕಾ ಮಣ್ಣೂರು, ಭಾಗೀರಥಿ ಯಲ್ಲನಗೌಡರ, ಶಿಲ್ಪಾ ಚಿತ್ರಗಾರ, ಮರಿಸ್ವಾಮಿ ಪೂಜಾರ, ಕರಿಯಮ್ಮ, ದೇವರಾಜ ಕಿನ್ನಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಫೋಟೋ: ಅಳವಂಡಿ ಸಮೀಪದ ಹಿರೇಸಿಂದೋಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯ ವಿಭಾಗದಲ್ಲಿ ಹಮ್ಮಿಕೊಂಡ ನಾರಾಯಣ ಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡಿದರು.

About Mallikarjun

Check Also

ಕನಕಗಿರಿ ಭಾಗದ ವಿವಿಧ ಗ್ರಾಮಗಳಲ್ಲಿ ಮಧ್ಯರಾತ್ರಿ ವಿದ್ಯುತ್ ಸ್ಥಗಿತ: ರೈತರ ಪರದಾಟಕ್ರಿಮಿಕೀಟಗಳ ಭೀತಿಯಲ್ಲಿ ರೈತರ ಕುಟುಂಬ

Midnight power outage in various villages of Kanakagiri region: farmers protest Farmer family in fear …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.