Sri Gurukula College did well in Taluk Sports.
ತಿಪಟೂರು. ಪದವಿ ಪೂರ್ವ ಕಾಲೇಜು ತಾಲೂಕು ಕ್ರೀಡಾಕೂಟದಲ್ಲಿ ನಗರದ ಶ್ರೀ ಗುರುಕುಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಜರುಗಿದ ತಾಲೂಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶ್ರೀ ಗುರುಕುಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಾಲಿಬಾಲ್ ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನ 4*400 ರಿಲೆಯಲ್ಲಿ ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನ. ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ ಚೆಸ್, ಯೋಗ, ಗುಂಡು ಎಸೆತ,100,200, 800,5000 ಮೀಟರ್ ಓಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಒಟ್ಟಾರೆ ತಾಲೂಕು ಕ್ರೀಡಾ ಕೂಟದಲ್ಲಿ ಎರಡನೇ ಸ್ಥಾನವನ್ನು ಪಡೆದಿರುತ್ತಾರೆ ಕಾಲೇಜು ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಗುರುಗಳಾದ ಶ್ರೀ ಶ್ರೀ ಇಮ್ಮಡಿ ಕರಿಬಸವದೇಶಿ ಕೇಂದ್ರ ಸ್ವಾಮೀಜಿಗಳು ಆಶೀರ್ವದಿಸಿದರು. ಕಾರ್ಯದರ್ಶಿಗಳಾದ ಸಿದ್ದರಾಮಯ್ಯ. ಸಿಇಓ ಹರಿಪ್ರಸಾದ್, ಪ್ರಾಂಶುಪಾಲರಾದ ಎಸ್. ಮಹೇಶಯ್ಯ, ಮಹಾಲಿಂಗಯ್ಯ, ಮಂಜುನಾಥ್ ಸರ್, ಯತೀಶ್, ಹಾಗೂ ಉಪನ್ಯಾಸಕರುಗಳು ಅಭಿನಂದನೆ ಸಲ್ಲಿಸಿ ಜಿಲ್ಲಾ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ಮಾಡಲು ಹಾರೈಸಿದರು.