Conference of surgeons: second award. Abhilasha Ashokaswamy Heroor Bhajan!
ಗಂಗಾವತಿ:ಬಳ್ಳಾರಿ ಜಿಲ್ಲೆಯ ತೋರಣಗಲ್ ನಲ್ಲಿನ ಜಿಂದಾಲ್ ಆವರಣದಲ್ಲಿರುವ ಜೆ-ಮ್ಯಾಕ್ಸ್ ಆಡಿಟೋರಿಯಂ ನಲ್ಲಿ ಮೂರು ದಿನಗಳ ಕಾಲ ಅಖಿಲ ಭಾರತ ಬಾಯಿ,ಮುಖ ದವಡೆ ಶಸ್ತ್ರ ಚಿಕಿತ್ಸಕರ ಸಂಘದ ರಾಜ್ಯ ಮಟ್ಟದ 11ನೇ ಸಮ್ಮೇಳನವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಈ ಸಮ್ಮೇಳನದಲ್ಲಿ ಶನಿವಾರ ಮಂಡಿಸಿದ ಪ್ರಭಂದಕ್ಕೆ
ಗಂಗಾವತಿಯ ಡಾ.ಅಭಿಲಾಷಾ ಅಶೋಕಸ್ವಾಮಿ ಹೇರೂರ ಅವರಿಗೆ ರಾಜ್ಯ ಮಟ್ಟದ ದ್ವಿತೀಯ ಪ್ರಶಸ್ತಿ ಲಭಿಸಿದೆ.
ಬಾಯಿ,ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಕುರಿತು ಉಪನ್ಯಾಸ ಮತ್ತು ತಾಂತ್ರಿಕತೆಯ ವಿಷಯಗಳು ಅಧಿವೇಶನದಲ್ಲಿ ಪ್ರಾರಂಭವಾಗಿವೆ.ತಜ್ಞ ವೈದ್ಯರಿಗೆ ವಿವಿಧ ವಿಷಯಗಳ ತರಬೇತಿಗೆ ಅವಕಾಶ ಇರುವ ಈ ಅಧಿವೇಶನದಲ್ಲಿ 300ಕ್ಕೂ ಹೆಚ್ಚು ಹಿರಿಯ ತಜ್ಞರು ಭಾಗವಹಿಸಿದ್ದಾರೆ.
ಬಳ್ಳಾರಿ ಸಂಸದ ಈ ತುಕಾರಾಂ ಅವರು, ಈ ಸಮ್ಮೇಳನವನ್ನು ಉದ್ಘಾಟಿಸಿದ್ದರು.