Breaking News

ರಾಯಚೂರು ಸ್ವಾಮೀಜಿಯಿಂದ‌ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಮೂರು ದಿನಗಳಿಂದ ಪೊಲೀಸ್ ಠಾಣೆಗೆ ಅಲೆದಾಡಿ ಸುಸ್ತಾದ ಮಹಿಳೆ

ಜಾಹೀರಾತು
ಜಾಹೀರಾತು

Raichur Swamiji accuses woman of sexual assault

ರಾಯಚೂರು: ತಾಲ್ಲೂಕಿನ ಸುಲ್ತಾನಪುರ ಸ್ವಾಮೀಜಿಯು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ‌‌ ಬಂದಿದೆ.

ರಾಯಚೂರು ತಾಲೂಕಿನ ಸುಲ್ತಾನಪೂರ ಗ್ರಾಮದಲ್ಲಿ
ಆಂದ್ರಪ್ರದೇಶದ ಮೂಲದ ಕರ್ನೂಲ್ ಜಿಲ್ಲೆಯ ಬಲಗಂಪಲ್ಲಿ ಗ್ರಾಮದ ಮಹೇಶ್ವರಿ ಗಂಡ ನರಸಿಂಹ ಎಂಬ ಮಹಿಳೆ ಕಳೆದ ಕೆಲ ವರ್ಷಗಳಿಂದ ಸುಲ್ತಾನಪುರದಲ್ಲಿ ವಾಸವಾಗಿ ದ್ದಳು. ನೆರೆ ಸಂಭಂಧಿಕರ ಮೂಲಕ ತನ್ನ ಸ್ವಾಮೀಜಿಯ ಪರಿಚತವಾಗಿ ಸ್ವಾಮೀಜಿಯ ಭಕ್ತಳಾಗಿದ್ದಳು. ಸ್ವಾಮೀಜಿಯ ಬಳಿ ಆಗಾಗ ಮಠದಲ್ಲಿ ಹೋಗುತ್ತಿದ್ದಳು ಈ ವೇಳೆ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಲೈಂಗಿಕ ದೌರ್ಜನ್ಯದ ಬಳಿಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಮಹಿಳಾ ಠಾಣೆಗೆ ಕಳಿಸಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸದೇ ಗಬ್ಬೂರು ಪೊಲೀಸ್ ಠಾಣೆಗೆ ಕಳಿಸಿದ್ದಾರೆ. ಈ‌ ನಡುವೆ ಕಳೆದ ಮೂರು ದಿನಗಳಿಂದ ಪೊಲೀಸ್ ಠಾಣೆಗೆ ಅಲೆದಾಡಿ ಸುಸ್ತಾಗಿದ್ದಾಳೆ. ಮಠದ‌ ಭಕ್ತರ, ಸ್ವಾಮೀಜಿಯ ಶಿಷ್ಯಂದಿರ ಮೂಲಕ ಮಹಿಳೆಗೆ ಹಣದ ಆಮೀಷ ಒಡ್ಡಿದ್ದಾರೆ. ನ್ಯಾಯಕ್ಕಾಗಿ ಅಲೆದಾಡಿದರೂ ಪೊಲೀಸರು ದೂರು ಸ್ವೀಕರಿಸದ ನಿರಾಶರಾದ ಮಹಿಳೆ ಸ್ವಾಮೀಜಿಯ ಆಪ್ತ ರಿಂದ ಬೆದರಿಕೆಗೆ ಒಳಗಾಗಿದ್ದಾಳೆ ಎನ್ನಲಾಗಿದೆ. ಗ್ರಾಮಸ್ಥರ ಪ್ರಕಾರ ಮಹಿಳೆಗೆ ಆಕೆಯ ಗ್ರಾಮಕ್ಕೆ ಕಳಿಸಿ‌ಸಂದಾನಕ್ಕೆ ಯತ್ನಿಸಿದ್ದಾರೆ. ಸ್ವಾಮೀಗೆ ಅನೇಕ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಭಕ್ತರಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗದಂತೆ ತಡೆಒಡ್ಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ.

About Mallikarjun

Check Also

ಕಳೆದುಕೊಂಡ ದುಬಾರಿ ಮೊಬೈಲ್ ಗಳನ್ನು ಹಿಂತಿರುಗಿಸಿದ ನಗರ ಠಾಣೆ ಪಿ.ಐ.ಪ್ರಕಾಶ್ ಮಾಳೆ:

City police station PI Prakash Male returns lost expensive mobile phones: ಗಂಗಾವತಿ:17 ನಗರದಲ್ಲಿರುವ ಸಾರ್ವಜನಿಕರು ತಮ್ಮ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.