Breaking News

ಚಿತ್ರನಟ ಡಾ”ವಿಷ್ಣುವರ್ಧನ್ ಹುಟ್ಟು ಹಬ್ಬ ಆಚರಣೆ

Film actor Dr. Vishnuvardhan’s birthday celebration

ಜಾಹೀರಾತು


ಕಾನ ಹೊಸಹಳ್ಳಿ :- ಸಮೀಪದ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ, ವಿಷ್ಣು ಸೇನಾ ಸಮಿತಿ ಯಿಂದ ಡಾ”ವಿಷ್ಣುವರ್ಧನ್ ರವರ ಹುಟ್ಟು ಹಬ್ಬ ಆಚರಿಸಲಾಯಿತು.
ಚಿಕ್ಕಜೋಗಿಹಳ್ಳಿ ಗ್ರಾಮದ ಕೊಟ್ಟೂರು ಕ್ಷೇತ್ರದ ಮಾಜಿ ಶಾಸಕರಾದ ಕೆ.ವಿ.ರವೀಂದ್ರನಾಥ್ ಬಾಬುರವರು ಮಾತನಾಡಿ, ಇಂತಹ ರಸ ಮಂಜರಿಯಂತಹ ಕಾರ್ಯಕ್ರಮದ ಜೊತೆಗೆ. ವಿ.ಸೇ.ಸಮಿತಿಯವರು ರೈತರಿಗೆ ವಿದ್ಯಾರ್ಥಿಗಳಿಗೆ ನೆರವಾಗುವಂತಹ, ಹಾಗೂ ರೈತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಕೆಂದರು. ಯುವ ಪೀಳಿಗೆ ಡಾ”ವಿಷ್ಣುವರ್ಧನ್ ರವರ ಆದರ್ಶಗಳನ್ನು ಪಾಲಿಸಬೇಕು, ಈ ದಿಸೆಯಲ್ಲಿ ಉತ್ತಮ ಕಾರ್ಯಗಳನ್ನು ಆಯೋಜನೆ ಮಾಡಬೇಕು ಎಂದರು. ಕಾರ್ಯಕ್ರಮದ ಕುರಿತು ಜವಹರಲಾಲ್ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ, ಹಾಗೂ ಕುರಿಹಟ್ಟಿ ಜಿ.ಒಬಣ್ಣನವರ ಪುತ್ರಿ ಕುಮಾರಿ ಪವಿತ್ರ ಮೆಚ್ಚುಗೆ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ, ಡಾ”ವಿಷ್ಣುರವರ ತದ್ರೂಪಿ ಕಲಾವಿದರಿಂದ ಕೇಕ್ ಕತ್ತರಿಸಲಾಯಿತು. ವಿಷ್ಣು ಸೇನಾ ಸಮತಿವತಿಯಿಂದ, ನೆರೆದವರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಲಾಯಿತು. ಮಕ್ಕಳಿಂದ ಯುವಕರಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಾಜೇಶ್ ನಾಯ್ಕ್, ರೈತ ಮುಖಂಡರಾದ ಜಿ.ಪಿ.ಗುರುಲಿಂಗಪ್ಪ.
ಚಳ್ಳಕೆರೆ ಪಾಲಿ ಕ್ಲಿನಿಕ್ ಮಾಲೀಕರಾದ ಪರೀದ್ ಖಾನ್, ಚಳ್ಳಕೆರೆ ನಗರಸಭಾ ಸದಸ್ಯರಾದ ಪ್ರಸನ್ನ ಕುಮಾರ, ವಿಷ್ಣು ಸೇನಾ ಸಮಿತಿ ತಾಲ್ಲೂಕು ಅಧ್ಯಕ್ಷ ಕುರಿಹಟ್ಟಿ ಜಿ.ಓಬಣ್ಣ. ಉಪಾಧ್ಯಕ್ಷ ಮಹಮದ್ ಸಾಧಿಕ್, ಪತ್ರಕರ್ತ ಹಾಗೂ ವಿಷ್ಣುವರ್ಧನ್ ಅಭಿಮಾನಿ ನಿಂಬಳಗೆರೆ ಗಡ್ಡೆರ್ ರವಿಕುಮಾರ್,ರಾಜ ವಿಷ್ಣು ವೇದಿಕೆಯಲ್ಲಿದ್ದರು. ವಿಷ್ಣು ಸೇನಾ ಸಮಿತಿಯ ಪದಾಧಿಕಾರಿಗಳು, ಹಾಗೂ ಸರ್ವ ಸದಸ್ಯರು. ಚಿಕ್ಕಜೋಗಿಹಳ್ಳಿ ಗ್ರಾಮಸ್ಥರು ಸೇರಿದಂತೆ, ನೆರೆ ಹೊರೆಯ ಗ್ರಾಮಗಳ ವಿಷ್ಣುವರ್ಧನ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About Mallikarjun

Check Also

ಸುವರ್ಣ ಸಾಧಕಿ ಪ್ರಶಸ್ತಿಗೆ ಭಾಜನರಾದ. ರೂಪರಾಣಿ ಲಕ್ಷ್ಮಣ್

Winner of the Golden Achievement Award. Rooprani Laxman. ಗಂಗಾವತಿ. ನಗರದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಶ್ರೀಮತಿ ರೂಪಾರಾಣಿ …

Leave a Reply

Your email address will not be published. Required fields are marked *