Breaking News

ಸಂಗನಹಾಲ ಚಲೋ

Sanganhala Chalo

ಜಾಹೀರಾತು
ಜಾಹೀರಾತು

ಕೊಪ್ಪಳದ ಐ.ಬಿ ಯಲ್ಲಿ ಸಂಗನಹಾಲ ಚಲೋ ಕುರಿತು ಮೂರನೇ ಹಾಗೂ ಕೊನೆಯ ಪೂರ್ವಭಾವಿ ಸಭೆ ನಡೆಯಿತು.

ವಿಠಲಾಪುರದಲ್ಲಿ ನಡೆದ ದಲಿತ ಯುವತಿಗೆ ವಿಷ ಕೊಟ್ಟು ಹತ್ಯೆಗೈದ ಘಟನೆಯನ್ನು ಖಂಡಿಸಿ ಸಭೆ ಆರಂಭವಾಯಿತು.

ಕಳೆದ ಸಭೆಯಲ್ಲಿ ಆದ ಚರ್ಚೆ ಹಾಗೂ ನಡಾವಳಿಗಳ ಕುರಿತು ಇವತ್ತಿನ ಸಭೆಗೆ ಪತ್ರಕರ್ತರಾದ ಸಿರಾಜ್ ಬಿಸರಳ್ಳಿ ಅವರು ವಿಸ್ತೃತ ವರದಿ ನೀಡಿದರು.

ನಂತರ ಬಸವರಾಜ ಸೂಳಿಭಾವಿ ಅವರು ಮಾತನಾಡಿ ಹಿಂದಿನ ಸಭೆಯಲ್ಲಿ ಬರೀ ಸಂಗನಹಾಲ ಚಲೋ ಅಂತ ಹೆಸರಿಟ್ಟು ನಡೆಸುವ ಚಳವಳಿ ಕುರಿತಾದ ರೂಪು ರೇಷೆಯ ವಿವರ ನೀಡಿದರು. ಈ ಚಳವಳಿಯು ಪ್ರಗತಿಪರವಾದ ಎಲ್ಲ ದ್ವನಿ ಸಂಘಟನೆಗಳನ್ನು ಒಳಗೊಳ್ಳಬೇಕು. ಎಲ್ಲರೂ ಜೊತೆಗೂಡಿದರೆ ಚಳವಳಿ ಬಲಾಡ್ಯಗೊಳ್ಳುತ್ತದೆ ಎಂಬ ಮಾತುಗಳನ್ನು ಸೇರಿಸಿದರು.

ಕೊಪ್ಪಳ ಜಿಲ್ಲಾ ದಲಿತ,ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ಅಡಿಯಲ್ಲಿ ಈ ಚಳವಳಿ ನಡೆಸಬೇಕೆಂಬ ತಿರ್ಮಾನವನ್ನು ಸಭೆ ತಗೆದುಕೊಂಡಿತು

“ಸಂಗನಹಾಲ ಚಲೋ” ದ ಕುರಿತು ನೀಲನಕ್ಷೆ ಸಿದ್ಧಪಡಿಸಲಾಯಿತು.

ಸಂಗನಹಾಲ ಚಲೋ “ಸಮಾನ ಬದುಕಿನತ್ತ ಅರಿವಿನ ಜಾಥಾ” ಹೆಸರಿನಡಿ 17.09.2024 ರಂದು ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಸುರುವಾಗಬೇಕು.

17 ರಂದು ಬೆಳಿಗ್ಗೆ 9.00 ಘಂಟೆಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯೆದುರು ಎಲ್ಲರೂ ಸೇರಬೇಕು. ಜಾಥಾಕ್ಕೆ ಚಾಲನೆ ಕೊಡುವ ಕಾರ್ಯಕ್ರಮ 10 ಗಂಟೆಗೆ ಆರಂಭವಾಗಬೇಕು. ಚಾಲನೆ ಕಾರ್ಯಕ್ರಮ 11.30 ರ ಒಳಗೆ ಕಾಲ್ನಡಿಗೆ ಆರಂಭವಾಗಬೇಕು. ಚಳವಳಿಗಾರರು, ಸಂಘಟಿಕರು ಧಾರ್ಮಿಕ ಮುಖಂಡರು ಈ ಚಾಲನಾಗೋಷ್ಟಿಯಲ್ಲಿ ಇರಬೇಕು ಎಂಬುದು ಚರ್ಚೆಯಾಗಿ ಅಂತಿಮಗೊಳಿಸಲಾಯಿತು.

ಸಂಜೆ ಬಾಣಾಪುರಕ್ಕೆ ತಲುಪಿ ಅಲ್ಲಿಯೇ ವಸತಿ ಆಗಿ ಮರುದಿನ ಮುಂಜಾನೆ ಬೆಳಿಗ್ಗೆ 6.00 ಗಂಟೆಗೆ ಅಲ್ಲಿಂದ ಹೊರಟು ಮದ್ಯಾಹ್ನ ಹೊತ್ತಿಗೆ ಸಂಗನಹಾಲ ತಲುಪಿ ಸಂಜೆ 4.00ಕ್ಕೆ ಸೌಹಾರ್ದ ಸಮಾವೇಶ ಮಾಡಲು ತಿರ್ಮಾನಿಸಲಾಯಿತು.

ಈ ಎರಡು ದಿನಗಳ‌ ಹೋರಾಟಕ್ಕೆ ರಾಜ್ಯದ ದಲಿತ ಹೋರಾಟಗಾರರು ಪ್ರಗತಿಪರ ಚಿಂತಕರು.ಪ್ರಗತಿಪರ ಸ್ವಾಮಿಜಿಗಳು ಭಾಗವಹಿಸುವಂತೆ ಮಾಡಬೇಕು ಎಂಬುದು ಚರ್ಚೆಯಾದಾಗ ಹಲವು ಹೆಸರು ಕೇಳಿಬಂದು ಅದರಲ್ಲಿ ಸಂಘಟನೆಗಳ ನಾಯಕರನ್ನು ಕರೆಸಬೇಕು ಎಂಬುದು ಚರ್ಚೆಗೆ ಬಂದಿತು.

.ಇಡೀ ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಹಾಗೂ ಸಂಗನಹಾಲ ಚಲೋ ದ ಕುರಿತು ಕರಪತ್ರ ತಯಾರಿಸುವ ಜವಾಬ್ಧಾರಿಯನ್ನು ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಹಾಗೂ ಹೋರಾಟಗಾರರಾದ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಡಿ ಎಚ್ ಪೂಜಾರ ಅವರಿಗೆ ವಹಿಸಿಕೊಡಲಾಯ್ತು.

ಸಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಗನಹಾಲ ಗ್ರಾಮದ ಯುವಕರು ನಮಗಾಗಿ ನಮ್ಮ ಬೆಂಬಲಕ್ಕಾಗೀ ಈ ಚಳವಳಿ ನಡೆಸುವ ತೀರ್ಮಾನ ಮಾಡುತ್ತೀದ್ದೀರಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನಾವೂ ಜಾಥಾದ ಭಾಗವಾಗುತ್ತೇವೆ. ಅಗತ್ಯ ಇರುವ ಸಹಕಾರ ಕೊಡಲು ಸಿದ್ದರಿದ್ದೇವೆ. 11.09.2024 ರಂದು ಸಂಗನಹಾಲ ಗ್ರಾಮದಲ್ಲಿ ಸಮುದಾಯದ ಜನರ ಸಭೆ ಕರೆಯುತ್ತೇವೆ. ಈ ವಿಷಯ ಚರ್ಚಿಸಿ ನಿಮ್ಮ ಜೊತೆಗಿರುತ್ತೇವೆ. ಆ ಸಭೆಗೆ ನೀವೂ ಬರಬೇಕು ಎಂದರು. ಸಭೆ ಒಪ್ಪಿಗೆ ಸೂಚಿಸಿತು.

ಸೌಹಾರ್ದ ಸಮಾವೇಶದ ಕುರಿತು ಸಂಗನಹಾಲ ಗ್ರಾಮಸ್ಥರಿಗೆ ಮಾಹಿತಿ ತಿಳಿಸಿ ಸಮಾವೇಶ ನಡೆಯುವ ಸ್ಥಳದ ಬಗ್ಗೆ ಚರ್ಚಿಸಿ ಅಲ್ಲಿಯೇ ಅಂತಿಮಗೊಳಿಸಿ ಮುಂದಿನ ತಯಾರಿಗಳ ಬಗ್ಗೆ ಮುಂದುವರೆಯೋಣ ಎಂದು ಸಭೆಗೆ ಆಗಮಿಸಿದ ಸಂಗನಹಾಲ ಗ್ರಾಮದಿಂದ ಬಂದ ಯುವಕರಿಗೆ ತಿಳಿಸಲಾಯಿತು.

ಪೋಲೀಸರ ಮತ್ತು ಆರೋಗ್ಯ ಇಲಾಖೆಗಳಿಗೆ ಜಾಥಾ ವಿಷಯ ಅವಗಾಹನೆಗೆ ತರಲು ಒಂದು ತಂಡ ರಚಿಸಲಾಯಿತು.

ಜಾಥಾ ಚಾಲನೆ ಮಾಡಲು ಧಾರ್ಮಿಕ ಮುಖಂಡರನ್ನು ಕರೆಯಲು ಕೆಲವರಿಗೆ ಜವಾಬ್ದಾರಿ ವಹಿಸಲಾಯಿತು.

ಎಲ್ಲ ಸಂಘಟನೆಗಳಿಂದ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಬೇಕು ಎಂದು ತೀರ್ಮಾನ ಆಗಿ ಯಾವ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುತ್ತಾರೆ ವಿವರ ಪಡೆಯಲಾಯ್ತು. ಹೆಚ್ಚು ಜನರು ಭಾಗವಹಿಸಬೇಕು ಎಂದೂ ಕೂಡ ಚರ್ಚೆ ಆಯ್ತು..

ಸಭೆಯ ಚರ್ಚೆಯಲ್ಲಿ ಭಾಗವಹಿಸಿ ಅಲ್ಲಮಪ್ರಭು ಬೆಟ್ಟದೂರ, ಮಹಾಂತೇಶ ಕೊತಬಾಳ ಬಸವರಾಜ ಶೀಲವಂತರ, ಕಾಶಪ್ಪ ಚಲವಾದಿ, ಜೆ ಬಾರದ್ವಾಜ್, ಎಸ್ ಎ ಗಫಾರ್, ಸಲೀಮಾ, ನಿಂಗು ಬೆಣಕಲ್ಲ, ಶಂಕರ ಡಿ. ಸರಳ, ಮಾರ್ಕ್ ಬೆಲ್ಲದ, ರುದ್ರಪ್ಪ ಭಂಡಾರಿ, ಸಂಜಯದಾಸ, ಶಿವಪ್ಪ ಹಡಪದ, ಡಿ. ಎಂ ಬಡಿಗೇರ ಸೇರಿ ಅನೇಕರು ಮಾತನಾಡಿ ಉಪಯುಕ್ತ ಸಲಹೆ ನೀಡಿದರು

ಸಂಗನಹಾಲ ಚಲೋ ದ ಕುರಿತು ದಿನಾಂಕ 12.09.2024 ರಂದು ಪತ್ರಿಕಾ ಗೋಷ್ಠಿ ನಡೆಸಲು ನಿರ್ಧರಿಸಲಾಯಿತು.

ಜಾಥಾದಲ್ಲಿ ರಾಜ್ಯದ ಎಲ್ಲ ಭಾಗಗಳ ಗೆಳೆಯರು ಪಾಲ್ಗೊಳ್ಳುವಂತೆ ಮನವಿ ಮಾಡೋಣ ಎಂದು ಸಭೆ ಅಭಿಪ್ರಾಯ ಪಟ್ಟಿತು

ವರದಿ: ಮುತ್ತು ಬಿಳೆಯಲಿ

About Mallikarjun

Check Also

ರಾಜಿಕ್ ಸಿಂಡ್ರೋಮ್ ನಿಂದ ಗೋವುಗಳ ಕರುಳಿನಲ್ಲಿ ರಕ್ತಸ್ರಾವ: ತಕ್ಷಣಕ್ರಮಕೈಗೊಳ್ಳುವಂತೆ ವಿಎಪಿಎಸ್ ಅಕ್ಷಯಾ ಫೌಂಡೇಶನ್ ಟ್ರಸ್ಟ್ ಪುಣ್ಯಕೋಟಿ ಗೋಶಾಲೆ ಒತ್ತಾಯ

Intestinal bleeding in cows due to Rajik syndrome: VAPS urges Akshaya Foundation Trust Punyakoti Goshala …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.