Breaking News

ಶರಣ ವ್ರತ ಸ್ವೀಕಾರ ಕಡ್ಡಾಯ-ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ

Acceptance of Sharan Vrata is mandatory-Pujya Sadguru Satyadevi Mataji

ಓಂ ಶ್ರೀ ಗುರು ಬಸವಲಿಂಗಾಯ ನಮಃ.


ಎಲ್ಲಾ ಆತ್ಮೀಯ ಶರಣ ಬಂಧುಗಳಿಗೆ ಶರಣು ಶರಣಾರ್ಥಿ.



ಬೀದರ್: ಲಿಂಗಾಯತ ಧರ್ಮಿಯರ ಧರ್ಮ ಕ್ಷೇತ್ರವಾದ ಕೂಡಸಂಗಮದಲ್ಲಿ ನಡೆಯುವ ಜನೇವರಿ 13,14,15 ಲಿಂಗಾಯತ ಧರ್ಮಿಯರ ಸಮಾವೇಶ ಕಾರ್ಯಕ್ರಮಕ್ಕಾಗಿ ಎಲ್ಲ ರಾಷ್ಟ್ರೀಯ ಬಸವದಳ,ಲಿಂಗಾಯತ ಧರ್ಮ ಮಹಾಸಭಾ,ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ,ಅಕ್ಕನ ಬಳಗ,ಅಕ್ಕಮಹಾದೇವಿ ಸಂಘ,ಅಣ್ಣನ ಬಳಗ,ಬಸವಕೇಂದ್ರ,ಬಸವ ಸಮೀತಿ,ಹೀಗೆ ಲಿಂಗಾಯತ ಧರ್ಮಿಯರ ಸಂಘಟನೆಯಿಂದ ಕಡ್ಡಾಯವಾಗಿ ಮಾಡಲೇ ಬೇಕಾದ ಆಚರಣೆ ಶರಣವ್ರತ ಸ್ವೀಕಾರ.ನಿಮ್ಮ ಗ್ರಾಮದಲ್ಲಿ ಲಿಂಗಾಯತರಿರುವ ಎಲ್ಲ ಬಂಧುಗಳ ಮನೆಯಿಂದ ಒಬ್ಬೊಬ್ಬರು ಕಡ್ಡಾಯವಾಗಿ ಹೆಣ್ಣು ಗಂಡು ಎಂಬ ಬೇದವಿಲ್ಲದೆ ಶರಣವ್ರತ ಸ್ವೀಕರಸಲೇಬೇಕಾಗಿ ವಿನಂತಿ.ಈ ಶರಣ ವ್ರತ ಸ್ವೀಕಾರ ಮಾಡುವುದರ ಮೂಲಕ ಲಿಂಗಾಯತರ ಒಗ್ಗಟ್ಟು,ಗುರು ಬಸವಣ್ಣನವರ ಮೇಲಿನ ನಿಷ್ಠೆ,ವಚನ ಸಾಹಿತ್ಯ ತತ್ವ ನಿಷ್ಠೆಯನ್ನು ಈ ಜಗತ್ತಿಗೆ ತೋರಿಸಲೇಬೇಕು.ಇಲ್ಲಿ ಯಾವುದೇ ಭೇದವನ್ನು ಮಾಡದೆ ಗುರು,ಲಿಂಗ,ಜಂಗಮವನ್ನು ಗುರಿಯಾಗಿಟ್ಟುಕೊಂಡು ಸ್ವೀಕರಿಸಬೇಕು.


ನಿಯಮಗಳು:-ಬೆಳಗಿನ ಜಾವದಲ್ಲಿ ಎಲ್ಲರೂ ಸ್ನಾನವನ್ನು ಮಾಡಿಕೊಂಡು ಒಂದು ಕಡೆ ಸಮಾವೇಶವಾಗಿ ಸಾಮೂಹಿಕ ಲಿಂಗಪೂಜೆ,ಗುರು ಬಸವಣ್ಣನವರ ಪೂಜೆ,ವಚನ ಪಠಣ,ಗ್ರಾಮಕ್ಕೆ ಮತ್ತು ಗ್ರಾಮದ ಜನರಿಗೆ ಒಳ್ಳೆಯದಾಗಲೆಂದು ಹಾಗೂ ಗುರು ಬಸವ ತತ್ವ ವಿಶ್ವದಾದ್ಯಂತ ಹಬ್ಬಲಿ ಎಂದು ಮಂತ್ರ ಪಠಣ ಮಾಡಬೇಕು.ಉಳಿದ ಸಮಯದಲ್ಲಿ ಅವರವರ ಕಾಯಕ ಮಾಡಿಕೊಳ್ಳಬೇಕು.ಸಾಯಂಕಾಲ ಸಾಧ್ಯವಾದರೆ ಒಬ್ಬೊಬ್ಬರ ಮನೆಯಲ್ಲಿ ಸಾಮೂಹಿಕ ಲಿಂಗ ಪೂಜೆ ಗುರು ಪೂಜೆ ಮಾಡಬೇಕು.ಎಲ್ಲರೂ ಕಡ್ಡಾಯವಾಗಿ ಬಿಳಿ ಉಡುಗೊರೆ,ಲಿಂಗ,ರುದ್ರಾಕ್ಷಿ ಧರಿಸಬೇಕು.ಲಿಂಗಧಾರಣೆ ಮಾಡಿಕೊಳ್ಳದೇ ಇದ್ದವರೂ ಎಲ್ಲ ಆಚರಣೆಯಲ್ಲಿ ಭಾಗಿಯಾಗಿ ಕಲಿತುಕೊಳ್ಳಬೇಕು.
1)ಅವರ ಅನುಕೂಲದಂತೆ 1 ರಿಂದ 14 ತಾರೀಖಿನವರೆಗೂ
2)11 ದಿವಸ,10 ದಿವಸ,9 ದಿವಸ,7 ದಿವಸ,5 ದಿವಸ
ಹೀಗೆ ಸ್ವೀಕಾರ ಮಾಡಬಹುದು.ಎಲ್ಲರೂ ಒಗ್ಗಟ್ಟಿನಿಂದ ಚರ್ಚೆ ಮಾಡಿ ಪ್ರಾರಂಭಿಸಬೇಕು.ಕೂಡಲಸಂಗಮ ಸಂಗಮಕ್ಕೆ ಬಂದು 14 ನೇ ತಾರೀಖು ಗುರು ಬಸವಣ್ಣನವರಿಗೆ ಸಾಕ್ಷಾತ್ಕಾರವಾದ ದಿವಸ ಮತ್ತು ಇಷ್ಟಲಿಂಗವನ್ನು ಕೊಟ್ಟ ಪವಿತ್ರ ದಿನ ಗುರು ಬಸವಣ್ಣನವರ ಲಿಂಗೈಕ್ಯ ಸ್ಥಾನಕ್ಕೆ ಹೋಗಿ ಎಲ್ಲರೂ ಒಟ್ಟಾಗಿ ಸೇರಿ ಸಾಮೂಹಿಕ ಗುರು ಪೂಜೆ ಮಂತ್ರಪಠಣ ಮಾಡಿ ಮುಗಿಸಬೇಕು.ನಿಮ್ಮೆಲ್ಲರಿಗೂ ನನ್ನ ವಿನಂತಿ.

ಶರಣು ಶರಣು ಶರಣಾರ್ಥಿ. ಪರಮ ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ ಬಸವ ಮಂಟಪ ಬೀದರ್

About Mallikarjun

Check Also

ಏ.೨೮ಕ್ಕೆ ಗಂಗಾವತಿಗೆ ನಟ ಪ್ರಾಕಾಶ್ ರೈ ಆಗಮನ -ಪೀರ್‌ಸಾಬ್

ಗಂಗಾವತಿ: ಉದ್ಯೋಗ ಸೃಷ್ಟಿ, ಸ್ಕಿಲ್ ಇಂಡಿಯಾ, ಅಂಗನವಾಡಿ ಮುಚ್ಚುವ ಇರಾದೆ, ಖಾಸಗಿ ಕರಣಕ್ಕೆ ಆದ್ಯತೆ, ಬಡವರಿಗಿಂತ ಕೆಲವರಿಗೆ ಅನುಕೂಲಕರ ಕಾರ್ಯಕ್ರಮಗಳನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.