Breaking News

ನಕಲಿ ಬಿಲ್ ಸೃಷ್ಠಿಸಿ ತೆರಿಗೆ ಹಣ ವಂಚನೆ ಪಿಡಿಒಗಳ ವಿರುದ್ಧ ಕ್ರಮಕ್ಕೆ ಆಗ್ರಹ

Demand action against PDOs who cheat tax money by creating fake bills


ಗಂಗಾವತಿ
:ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕುಗಳ ಕೆಲ ಗ್ರಾ.ಪಂ.ಗಳಲ್ಲಿ ೨೦೧೭-೨೨ ವರೆಗೆ ನರೇಗಾ ಯೋಜನೆಯಡಿ ಸಾಮಾಗ್ರಿ ವೆಚ್ಚದ ಬಿಲ್ ಗಳ ನಕಲಿ ಸೃಷ್ಠಿ ಮಾಡಿ ಲಕ್ಷಾಂತರ ರೂ.ಗಳ ಭ್ರಷ್ಠಾಚಾರ ಮಾಡಿದ್ದು ಮಾಹಿತಿ ಹಕ್ಕಿನಡಿ ಬಹಿರಂಗವಾಗಿದ್ದು ಕೂಡಲೇ ಗ್ರಾಮೀಣಾಭಿವೃದ್ಧಿ ಇಲಾಖೆ ಭ್ರಷ್ಠಾಚಾರವೆಸಗಿರುವ ಪಿಡಿಒ ಗಳನ್ನು ಅಮಾನತುಗೊಳಿಸಿ ಅವರಿಂದ ಹಣ ವಸೂಲಿ ಮಾಡುವಂತೆ ಮಾಹಿತಿ ಹಕ್ಕು ಹೋರಾಟಗಾರ ಹಾಗೂ ಗುತ್ತಿಗೆದಾರ ಚಂದನಗೌಡ ಸರಕಾರವನ್ನು ಒತ್ತಾಯಿಸಿದ್ದಾರೆಂ
೨೦೧೭-೨೨ ನೇ ಸಾಲಿನ ಕಾರಟಗಿ, ಗಂಗಾವತಿ ಮತ್ತು ಕನಕಗಿರಿ ತಾಲೂಕಿನ ಕೆಲವು ಗ್ರಾ. ಪಂ.ಗಳಲ್ಲಿ ನರೇಗಾ ಯೋಜನೆಯ ಕಾಮಗಾರಿಯ ಸಾಮಗ್ರಿ ವೆಚ್ಚದ ಬಿಲ್ಲುಗಳನ್ನು ನಕಲಿ ಸೃಷ್ಟಿ ಮಾಡಿ ಸರಕಾರಕ್ಕೆ ಕಟ್ಟಬೇಕಾದ ತೆರಿಗೆ ಹಣವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಲಪಟಾಯಿಸಿದ್ದಾರೆ. ನನ್ನ ಹೆಸರಿನಲ್ಲಿ ನಕಲಿ ಬಿಲ್ ಮುದ್ರಿಸಿ ಖರ್ಚಿನ ಖಾತೆ ಕಡತಗಳಲ್ಲಿ ದಾಖಲು ಮಾಡಲಾಗಿದ್ದು ನನ್ನ ಟಿನ್ ಮತ್ತು ಜಿಎಸ್ಟಿ ನಂಬರ್ ಹಾಕಿರುವುದರಿಂದ ೬೦ ಲಕ್ಷ ರೂ.ಟಿಡಿಎಸ್ ಕಟಾವು ಮಾಡಲಾಗಿದೆ. ಜತೆಗೆ ವಾಣಿಜ್ಯ ತೆರಿಗೆ ಇಲಾಖೆಯವರು ತೆರಿಗೆ ಬಾಕಿ ಪಾವತಿಸುವಂತೆ ನನ್ನ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದು ಕುಟುಂಬ ನಿರ್ವಾಹಣೆ ತೊಂದರೆಯಾಗಿದೆ. ಗ್ರಾ.ಪಂ.ಗಳ ಪಿಡಿಒಗಳು ಮಾಡಿದ ಭ್ರಷ್ಠಾಚಾರಕ್ಕೆ ನನ್ನ ಬ್ಯಾಂಕ್ ಖಾತೆ ಸೀಜ್ ಆಗಿದ್ದು ಜಿ.ಪಂ. ಸಿಇಒ ಅವರು ಕೂಡಲೇ ಭ್ರಷ್ಠಾಚಾರವೆಸಗಿದ ಪಿಡಿಒಗಳನ್ನು ಅಮಾನತುಗೊಳಿಸಿ ತಮಗೆ ನ್ಯಾಯ ಒದಗಿಸಬೇಕೆಂದು ಚಂದನಗೌಡ ಮನವಿ ಮಾಡಿದ್ದಾರೆ.

About Mallikarjun

Check Also

ಬಿಜೆಪಿ, ಹಿಂದುಪರ ಸಂಘಟನೆಗಳು ಯಾಕೆ ಪ್ರಜ್ವಲ್ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ : ಜ್ಯೋತಿ ಪ್ರಶ್ನೆ

ಕೊಪ್ಪಳ : ದೇಶ ಕಂಡರಿಯದಂತಹ ಹೊಲಸು ಕೆಲಸ ಮಾಡಿರುವ ಜೆಡಿಎಸ್ ಸಂಸದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಕಾಮಕಾಂಡ ರಾಜ್ಯದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.