Breaking News

ವಿಕಸಿತ ಭಾರತ ಅಭಿಯಾನ:ದಿಇನ್ಸ್ಟಿಟ್ಯೂಟ್‌ ಆಫ್‌ ಕಾಸ್ಟ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾದಿಂದ ವಿವಿಧ ವಿಚಾರಗೋಷ್ಠಿ

Evolved Bharat Abhiyan: Various Seminars by The Institute of Cost Accountants of India

ಬೆಂಗಳೂರು, ; ವಿಕಸಿತ ಭಾರತ ಅಭಿಯಾನದಡಿ ಕೇಂದ್ರ ಸರ್ಕಾರಿ ಸ್ವಾಮ್ಯದ ದಿ ಇನ್ಸ್ಟಿಟ್ಯೂಟ್‌ ಆಫ್‌ ಕಾಸ್ಟ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾದ ಬೆಂಗಳೂರು, ಮೈಸೂರು ಮಂಗಳೂರು ಶಾಖೆಯಿಂದ ನಗರದಲ್ಲಿಂದು ಎರಡು ದಿನಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.

ನಗರದ ಕ್ಯಾಪಿಟಲ್‌ ಹೋಟೆಲ್‌ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸೆಂಟ್ರಲ್‌ ಟ್ಯಾಕ್ಸ್‌ ಆಡಿಟ್‌ – 1 ವಿಭಾಗದ ಆಯುಕ್ತ ಎಂ.ವಿ. ಬದ್ರಿ ಪ್ರಸಾದ್‌ ಸಮ್ಮೇಳನ ಉದ್ಘಾಟಿಸಿದರು. ಐಸಿಎಂಎಐ ಮಾಜಿ ಅಧ್ಯಕ್ಷ ಜಿ.ಎನ್.‌ ವೆಂಟರಾಮನ್‌ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ವಿಕಸಿತ ಭಾರತ ನಿರ್ಮಾಣಕ್ಕಾಗಿ ಉತ್ಪಾದನೆ. ತಂತ್ರಜ್ಞಾನ, ನಾವೀನ್ಯತೆ, ಜಾಗತಿಕ ಆರ್ಥಿಕ ಪರಿಸ್ಥಿತಿ, ಭಾರತೀಯ ನಾಯಕತ್ವದ ಯಶೋಗಾಥೆ, ಕೃಷಿ ಮತ್ತು ವಿಮಾನಯಾನ, ಸುಸ್ಥಿರ ಅಭಿವೃದ್ಧಿ ಕುರಿತಾದ ಗೋಷ್ಠಿಗಳು ನಡೆದವು.

ದಿ ಇನ್ಸ್ಟಿಟ್ಯೂಟ್‌ ಆಫ್‌ ಕಾಸ್ಟ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ ಮತ್ತು ಸಾಗರ್‌ ಆಸ್ಪತ್ರೆಗಳ ಸಮೂಹದೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಬಿ. ದೇವರಾಜುಲು, ಮೈಸೂರು ಅಧ್ಯಕ್ಷ ಆರ್.‌ ತ್ರಿನೇಶ್‌, ಬೆಂಗಳೂರು ಚಾಪ್ಟರ್ ಕಾರ್ಯದರ್ಶಿ ಅಭಿಜಿತ್‌ ಎಸ್‌ ಜೈನ್‌, ಖಜಾಂಚಿ ಗಿರೀಶ್‌ ಕೆ, ಕೇಂದ್ರೀಯ ಮಂಡಳಿಯ ಸದಸ್ಯ ಸಿ.ಎಂ.ಎ ಸುರೇಶ್‌ ಆರ್ ಗುಂಜಲ್ಲಿ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.