Marks – Encouraging skill development rather than ranking

ವಿದ್ಯಾನಿಕೇತನ ಸಂಸ್ಥೆಯಿಂದ ಅತ್ಯುತ್ತಮ ಸಾಧಕರಿಗೆ ಒಂದು ಲಕ್ಷ ರೂಪಾಯಿವರೆಗೆ ಸ್ಕಾಲರ್ ಶಿಪ್ ಯೋಜನೆ

ಗಂಗಾವತಿ,2006ರಲ್ಲಿ ಸಸಿಯಾಗಿ ಪ್ರಾರಂಭವಾದ ಶ್ರೀ ವಿದ್ಯಾನಿಕೇತನ ಸಂಸ್ಥೆ ಇಂದು 18 ವರ್ಷ ಪ್ರಾಯದ ವಿದ್ಯಾನಿಕೇತನ ಸಂಸ್ಥೆಗೆ ಹಲವಾರು ಕಾಣದ ಕೈ ಗಳ ಪ್ರೋತ್ಸಾಹ, ಸಹಾಯ, ಸಹಕಾರ, ಮಾರ್ಗದರ್ಶನ ದಿಂದ ಇಂದು ಪ್ರೌಢಾವಸ್ಥೆಯಲ್ಲಿ ನಮ್ಮ ಸಂಸ್ಥೆ ಬೆಳೆಯಲು ಸಹಕರಿಸಿದ ಎಲ್ಲರಿಗೂ ಪ್ರಣಾಮಗಳು ಎಂದು ಶ್ರೀ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷರಾದ ನೆಕ್ಕಂಟಿ ಸೂರಿ ಬಾಬು ರವರು ಇಂದು ಗಂಗಾವತಿ ರೋಟರಿ ಸಂಸ್ಥೆ ಯಿಂದ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ ರೋಟರಿಯ ಪ್ರತಿಷ್ಠಿತ ವೋಕೆಸಿನಲ್ ಸರ್ವಿಸ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು
ನಾವು ಮೂಲತಃ ಕೃಷಿಕರಾಗಿದ್ದು ಅಂತ ಅಂತ ವಾಗಿ ಕೃಷಿ ಚಟುವಟಿಕೆ ,ರೈಸ್ ಮಿಲ್ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಕಾರಣವಾಯಿತು. 18 ವರ್ಷದ ನಮ್ಮ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ಅನೇಕ ಸ್ನೇಹಿತರು ವ್ಯಾಪಾರಸ್ಥರು ಹಿತೈಷಿಗಳು ಅಭಿಮಾನ ಪೂರ್ವಕವಾಗಿ ಪ್ರೋತ್ಸಾಹ ನೀಡಿ ಇಂದು ಉತ್ತರ ಕರ್ನಾಟಕ ಭಾಗದಲ್ಲಿಯೇ ಬಹುದೊಡ್ಡ ಸಂಸ್ಥೆಯಾಗಿ ಬೆಳೆಯಲು ಕಾರಣರಾಗಿದ್ದಾರೆ
ನಮ್ಮ ಸಂಸ್ಥೆಯ ಅಡಿಯಲ್ಲಿ ಒಂದು ಸಿ ಬಿ ಎಸ್ ಈ , 3 ಪಿ ಯು ಕಾಲೇಜು, ಒಂದು ಡಿಗ್ರಿ ಕಾಲೇಜ, ಇದ್ದು ಸುಮಾರು 7500 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 913 ಸಿಬ್ಬಂದಿಗಳ ನೆರವು ಸಹಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುತ್ತೇವೆ ಎಂದರು.
ಮುಂದುವರೆದು ಮಾತನಾಡುತ್ತಾ ನಮ್ಮಲ್ಲಿ ಕೇವಲ ಮಾರ್ಕ್ಸ್ ಮತ್ತು ರಾಂಕ್ ಗಳಿಗೆ ಸೀಮಿತವಾಗದೆ ನಮ್ಮ ಸಂಸ್ಥೆ ಹಿರಿಯರಿಗೆ ಗೌರವ, ವಿದ್ಯಾಭ್ಯಾಸ, ನೈಪುಣ್ಯತೆ ಮತ್ತು ಕೌಶಲ ಅಭಿವೃದ್ಧಿ ಸ್ಕಿಲ್ ಡೆವಲಪ್ಮೆಂಟ್ ಹೀಗೆ ನರ್ಸರಿ ಇಂದ ನೌಕರಿವರೆಗೆ N 2 N ಎಂಬ ಸಂಕಲ್ಪದೊಂದಿಗೆ ಹಲವಾರು ವರ್ಷಗಳಿಂದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಅಭ್ಯಾಸಿಸಿ ಇಂದು ರಾಜ್ಯ, ದೇಶ, ಮತ್ತು ವಿದೇಶಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ
ಇಂದು ನಮ್ಮ ಗಂಗಾವತಿ (ಬತ್ತದ) ಅನ್ನದ ಕಣಜ ವಾಗಿದೆಯೋ ಇನ್ನು ಕೆಲವೇ ವರ್ಷಗಳಲ್ಲಿ ಅಕ್ಷರ ಖಣಜ ಆಗುವಲ್ಲಿ ಸಂದೇಹವೇ ಇಲ್ಲ ಎಂದು ತಿಳಿಸಿದರು
ಮಕ್ಕಳ ಸಾಧನೆ, ಪರಿಶ್ರಮ, ಉತ್ತಮ ಅಭ್ಯಾಸ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ 580 ಕಿಂತ ಹೆಚ್ಚು ಅಂಕ ಗಳಿಸಿದ ವರಿಗೆ 50000 ರೂಪಾಯಿ ಪ್ರೋತ್ಸಾಹ ಧನ ಸ್ಕಾಲರ್ಶಿಪ್ ಯೋಜನೆ ಜಾರಿಯಲ್ಲಿದೆ ಎಂದು ತಿಳಿಸಿದರು
ಮುಂದೆಯೂ ನಮ್ಮ ಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 590 ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಮಕ್ಕಳಿಗೆ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ಸ್ಕಾಲರ್ಶಿಪ್ ಯೋಜನೆ ಈ ವರ್ಷ ನಾವು ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು ಅಲ್ಲದೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ಅವರ ಮುಂದಿನ ಎಲ್ಲಾ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ಉಚಿತವಾಗಿ ನಾವು ಪೂರೈಸುತ್ತೇವೆ ಎಂದು ತಿಳಿಸಿದರು
,ನಮ್ಮ ನಗರದ ರೋಟರಿ ಸಂಸ್ಥೆ ಹಲವಾರು ಕ್ಷೇತ್ರಗಳಲ್ಲಿ * ಉತ್ತಮವಾದ ಸಾಧನೆ ಮಾಡಿ
ಶಿಕ್ಷಣ ,ಆರ್ಥಿಕ ,ಸಾಮಾಜಿಕ ಅಭಿವೃದ್ಧಿ ಮತ್ತು ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ರೋಟರಿ ವೊಕೇಶನಲ್ ಸರ್ವಿಸ್ ಅವಾರ್ಡ್ 2025 ನನಗೆ ನೀಡಿದ್ದು ಆ ಸಂಸ್ಥೆಯ ಅಧ್ಯಕ್ಷರಿಗೂ ಪದಾಧಿಕಾರಿಗಳಿಗೂ ಕೃತಜ್ಞತೆ ತಿಳಿಸಿದರು
ಪ್ರಶಸ್ತಿ ಪಡೆಯುವುದು ಸ್ವೀಕರಿಸುವುದು ಸುಲಭವಾದರೂ ಈ ಒಂದು ಸಂದರ್ಭ ನಮಗೆ ಎಚ್ಚರಿಕೆಯ ಗಂಟೆಯಾಗಿ ಸದಾ ನಮ್ಮ ಕಾರ್ಯ ಚಟುವಟಿಕೆ ಪ್ರೋತ್ಸಾಹ ನೀಡುವಂತಹ ಪ್ರಶಸ್ತಿಯ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಟಿ. ಆಂಜನೇಯ ರವರು ತಮ್ಮ ಸಂಸ್ಥೆ 25 ವರ್ಷಗಳಿಂದ ನಗರ ಮತ್ತು
*ಗ್ರಾಮೀಣ ಭಾಗದ ಅನೇಕ ಪ್ರತಿಭಾವಂತರಿಗೆ ಸಾಧಕರಿಗೆ ಮತ್ತು *ವಿದ್ಯಾರ್ಥಿಗಳಿಗೆ ಹಲವಾರು ವಿಧದಲ್ಲಿ ಪ್ರೋತ್ಸಾಹಿಸಿ ಸಾಮಾಜಿಕ ಸೇವೆ ಜೊತೆಗೆ ಶಿಕ್ಷಣ ರಂಗದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ರಾದ ನೆಕ್ಕಂಟಿ ಸುರಿಬಾಬು ಇವರಿಗೆ 2025ನೇ ವರ್ಷದ ರೋಟರಿ ವೊಕೇಸಿನಲ್ ಅವಾರ್ಡ್ ನೀಡಿ ಗೌರವಿಸಿರುವುದು ನಮಗೆ ಮತ್ತು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು*
ರೋಟರಿ ಸಂಸ್ಥೆಯ ಕಾರ್ಯದರ್ಶಿಗಳಾದ ವಾಸು ಬಳಗದವರು ಎಲ್ಲರನ್ನು ಸ್ವಾಗತಿಸಿ ಗಂಗಾವತಿ ರೋಟರಿ ಸಂಸ್ಥೆ ಉತ್ತಮ ಸಾಧಕರನ್ನು ಮತ್ತು ಕಾರ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವರಿಗೆ ಪ್ರೋತ್ಸಾಹ ನೀಡುವ ನಮ್ಮ ಯೋಜನೆಗೆ ನೆಕ್ಕಂಟಿ ಸೂರಿ ಬಾಬು ರವರು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು
ಅಸಿಸ್ಟೆಂಟ್ ಗವರ್ನರ್ ಮಹೇಶ್ ಸಾಗರ ರವರು ಶ್ರೀ ವಿದ್ಯಾನಿಕೇತನ ಸಂಸ್ಥೆ ಕೇವಲ ಶಿಕ್ಷಣ ನೀಡುವುದಲ್ಲದೆ ಮಕ್ಕಳಲ್ಲಿ ಸಂಸ್ಕಾರ ,ಸಂಸ್ಕೃತಿ, ಮತ್ತು ಕೌಶಲ್ಯ ಅಭಿವೃದ್ಧಿ ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಕ್ಕಳಿಗೆ ಉತ್ತಮವಾದಂತಹ ಸರ್ವ ವಿಧದಲ್ಲಿ ಪ್ರಗತಿ ಹೊಂದುವಂತಹ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು
ವೇದಿಕೆಯಲ್ಲಿ ರೋಟರಿ ಚಾರಿಟೇಬಲ್ ಅಧ್ಯಕ್ಷರಾದ ಅಜಿತ್ ರಾಜ ಸುರಾನ ಮತ್ತು ನಿರ್ದೇಶಕರಾದ ಎಂ ಗುರುರಾಜ್ ರವರು ಉಪಸ್ಥಿತರಿದ್ದರು
ರೋಟರಿ ಮಾಜಿ ಕಾರ್ಯದರ್ಶಿಗಳಾದ ಎಚ್.ಎಮ್. ಮಂಜುನಾಥ್ ಕಾರ್ಯಕ್ರಮ ನಿರುಪಿಸಿದರು. ವಿಜಯಕುಮಾರ್ ಗಡ್ಡಿ ವಂದಿಸಿದರು
ಈ ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷರಾದ ಜೆ. ನಾಗರಾಜ, ಉಗಮರಾಜ,ಪ್ರಕಾಶ ಛೋಪ್ರಾ , ಸುರೇಶ ಚಂದ, ಶ್ರೀಧರ್ ನಾಯಕ, ಟಿ.ಸಿ. ಶಾಂತಪ್ಪ, ಬಸವರಾಜ ಕೆ.ರಾಮ್ ಪ್ರಸಾದ, ಶೇಖರಗೌಡ, ದಿಲೀಪ್ ಮೋತಾ, ಸಲಾಹುದ್ದೀನ ನಾಗೇಶ್ವರರಾವ್ ರಾಘವೇಂದ್ರರಾವ, ಇನ್ನಿತರರು ಉಪಸ್ಥಿತರಿದ್ದರು