Breaking News

ಬದುಕಲು ಸಂಘಟನೆಗೆ ಬರಬೇಡಿ.ಬದುಕನ್ನು ಬದಲಾಯಿಸಲು ಸಂಘಟನೆಗೆ ಬನ್ನಿ. ಶಿವಕುಮಾರ್ ಮತ್ತಿಘ ಟ್ಟ

Don’t join an organization to survive. Join an organization to change your life. Shivakumar Mattighatta

ಜಾಹೀರಾತು

ತಿಪಟೂರು. ನಗರದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರ ‌ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು ಕಾರ್ಯಕ್ರಮವನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದ
ಎ ಎಸ್ ಎಸ್ ಕೆ ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಮತ್ತಿಘಟ್ಟ ತಾಲ್ಲೂಕಿನಲ್ಲಿ ಬಡವರ ನೊಂದವರ ಹಾಗೂ ದಲಿತರ ದ್ವನಿಯಾಗಲಿದೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಕುಂದು ಕೊರತೆಗಳಿದ್ದು ಅವುಗಳನ್ನು ಬಗೆಹರಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುವುದು .ನಮ್ಮ ದಲಿತ ಸಮುದಾಯದ ಮೇಲೆ ಇಂದಿಗೂ ನಡೆಯುತ್ತಿರುವ ಶೋಷಣೆಯನ್ನು ನಮ್ಮ ಸಂಘಟನೆ ಖಂಡಿಸಲಿದೆ
ತಾಲ್ಲೂಕಿನ ಮೂಲೆ ಮೂಲೆಗೂ ನಮ್ಮ ಸಂಘಟನೆಯ ಸೈನಿಕರು ತಲುಪಿ ದಲಿತ ಪರ ದ್ವನಿಯಾಗಿ ಶ್ರಮಿಸಲಿದ್ದಾರೆ
ಹಾಗೂ ತಾಲ್ಲೂಕಿನಲ್ಲಿ ದಲಿತ ಸಮುದಾಯಗಳ ಮೇಲೆ ದೌರ್ಜನ್ಯ ಪ್ರಕರಣಗಳು ಸಾಕಷ್ಟು ನಡೆದಿದೆ ಈಗಲೂ ನಡೆಯುತ್ತಿದೆ ಈ ಕುರಿತು ಪ್ರಶ್ನಿಸುವ ಕಾರ್ಯ ವೈಕರಿ ನಮ್ಮ ಸಂಘಟನೆ ವತಿಯಿಂದ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ. ವಿಭಾಗೀಯ ಅಧ್ಯಕ್ಷರಾದ ಸುರೇಶ್ ನಾಗರಘಟ್ಟ. ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್ ಮತ್ತಿಘಟ್ಟ. ಉಪಾಧ್ಯಕ್ಷರಾದ ವಾಸು ಗಂಜಲಘಟ್ಟ. ನಗರ ಘಟಕ ಅಧ್ಯಕ್ಷರಾದ ರಮೇಶ್ ಮಾರನಗೆರೆ. ಸಂಘಟನಾ ಅಧ್ಯಕ್ಷರಾದ ಅಶೋಕ್
ಬಳೆಕೆರೆ.. ಮನು ಬೆಳಗರಹಳ್ಳಿ. ತಿಮ್ಮಪ್ಪ. ವಾಸು ಲಿಂಗದಹಳ್ಳಿ. ಮಹೇಶ್ ಕೆರಗೋಡಿ. ಭರತ್ ಕೆರಗೋಡಿ. ಮಂಜುನಾಥ್ ಲಿಂಗದಹಳ್ಳಿ. ಪುನೀತ್ ರಂಗಾಪುರ. ಯೋಗಾನಂದ ಕುರುಬರಹಳ್ಳಿ. ಪ್ರವೀಣ್ ಗುಂಗರ ಮಳೆ. ರಂಗಸ್ವಾಮಿ ಗೊರಗೋಡನಹಳ್ಳಿ. ಸದಾನಂದ ಮಡೇನೂರು. ಗಂಗಾಧರ್, ಬೆಳಗರಹಳ್ಳಿ. ಶಂಕರಮೂರ್ತಿ .ಶಶಿ ಕಾಂತರಾಜು. ಸಂತೋಷ್ ಗೋವಿಂದರಾಜು ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ವರದಿ.ಮಂಜು ಗುರುಗದಹಳ್ಳಿ

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *