Every day Ishtalinga Puja, Basavanamasmarana should be done and Kayakava.
ಯಲಬುರ್ಗಾ ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಹಾಗು ಅಕ್ಕ ನಾಗಲಾಂಬಿಕೆ ಬಳಗದ ವತಿಯಿಂದ 21 ನೇ ದಿನದ ಶ್ರಾವಣ ಸಂಜೆಯ ವಚನ ಜ್ಯೋತಿ ಕಾರ್ಯಕ್ರಮವನ್ನು ಶರಣ ವಿರಪಣ್ಣ ಯಮನಪ್ಪ ಮಂತ್ರಿ ಇವರ ಮನೆಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಪ್ರಥಮದಲ್ಲಿ ವಿಶ್ವಗುರ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಇಷ್ಟಲಿಂಗ ಇಷ್ಟಲಿಂಗ ಪೂಜೆ, ವಚನ ಪಠಣ ಮಾಡಿ ಪ್ರಾಸ್ತಾವಿಕ ಮಾತನಾಡಿದ ಶರಣ ಬಸವರಾಜ ಹೂಗಾರ ವಚನ ಜ್ಯೋತಿ ಕಾರ್ಯಕ್ರಮವು ಮನೆಯಿಂದ ಮನೆಗೆ ವಚನ ಜ್ಯೋತಿ ಹೊತ್ತುಕೊಂಡು ಇಂದಿಗೆ 20 ನೇ ದಿನ ಕಳೆದು 21 ನೇ ದಿನದ ಕಾರ್ಯಕ್ರಮ ಶರಣ ಸದ್ಭಕ್ತರಾದ ವಿರಪಣ್ಣ ಮಂತ್ರಿ ಇವರ ಮನೆಯಲ್ಲಿ ಹಮ್ಮಿಕೊಂಡಿರುವ ಉದ್ದೇಶ ಜೀವನದ ಮೌಲ್ಯಗಳು ಒಳಗೊಂಡಿರುವ ವಚನ ಸಾಹಿತ್ಯದ ತಿರುಳಿಸುವ ಮತ್ತು ಮನ ಬಂದಂತದೆ ಹಲವು ದೇವರ ಮೊರೆ ಹೋಗದಂತೆ, ಏಕ ದೇವೋಪಾಸಕರಾಗಿ, ” ಲಿಂಗ ಮದ್ದೆ ಜಗತ್ ಸರ್ವಂ” ಎಂಬಂತೆ, ನಿರಾಕಾರ ನಿರವಯ ನಿರಂಜನ ಪ್ರಣವ ಸ್ವರೂಪಿ ಆಗಿರುವಂತ ಇಷ್ಟಲಿಂಗವನ್ನ ಅಂಗದ ಮೇಲೆ ಲಿಂಗ ಧರಿಸಿ, ದಿನ ನಿತ್ಯ ಬಸವ ನಾಮಸ್ಮರಣೆ ಮಾಡಿ, ಸತ್ಯ ಶುದ್ಧ ಕಾಯಕ ಮಾಡುತ್ತಾ ಸಾಗಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು. ನಂತರ ಕಾರ್ಯಕ್ರಮದ ಕಾರ್ಯಕ್ರಮದ ಕುರಿತಾಗಿ ” ಇಷ್ಟಲಿಂಗ ಪರಿಕಲ್ಪನೆಯ ಕುರಿತು” ಉಪನ್ಯಾಸ ನೀಡಿದ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಇವರು ಮಾತನಾಡಿ,12ನೇ ಶತಮಾನದಲ್ಲಿಯೇ ಗುರು ಬಸವಣ್ಣನವರು ಜಾತಿ ಮಂತ ಪಂಥವಿಲ್ಲದೆ ಎಲ್ಲ ಸಮಾಜ ಬಾಂಧವರಿಗೂ ಲಿಂಗಧಾರಣೆ ಮಾಡುವ ಮಹದಾಶೆ ಹೊಂದಿದ್ದರು. ಇಷ್ಟಲಿಂಗ ಮನಸ್ಸನ್ನು ಹತೋಟಿಯಲ್ಲಿಡಲು ಮತ್ತು ಚಂಚಲ ಮನಸ್ಸು ಹರಿಯಗೊಡದಂತೆ ನೋಡಿಕೊಳ್ಳುವ ಶಕ್ತಿ ಹೊಂದಿ ಸಾಕ್ಷಾತ್ ಶಿವನ ರೂಪವೇ ಆಗಿರುತ್ತದೆ.
ಮನುಷ್ಯನಲ್ಲಿರುವ ಅರಿಷಡ್ವರ್ಗಗಳ ನಿಯಂತ್ರಣ ಮತ್ತು ಒಳ್ಳೆಯ ಮಾರ್ಗಕ್ಕೆ ಲಿಂಗಪೂಜೆಯಿಂದ ಮನಸ್ಸಿನ ನಿಯಂತ್ರಣದಲ್ಲಿ ಎಲ್ಲವನ್ನು ಸಾಧಿಸುವ ಶಕ್ತಿ ಹೊಂದಬಹುದು. ಏಕಾಗ್ರತೆ ರೂಪವೇ ಇಷ್ಟ ಲಿಂಗ ಪೂಜೆ, ಅದುವೇ ನಿಜವಾದ ಭಗವಂತನ ಸೇವೆ. ಜತೆಗೆ ಸ್ವಯಂ ನಿರ್ಧಿಷ್ಟ ಗುರಿ ಸಾಧನೆಗೆ ಏಣಿ.
ಮನಸ್ಸಿನಂತೆ ಮಹಾದೇವ ದೇವರನ್ನು ಗೆಲ್ಲುವ ಮೊದಲು ಮನಸ್ಸು ಗೆಲ್ಲಬೇಕು, ಮನಸ್ಸು ಗೆದ್ದ ಮನುಷ್ಯ ಜೀವನದಲ್ಲಿ ಅಸಾಧಾರಣ ಸಾಧನೆ ಮಾಡಬಲ್ಲನು. ಮನಸ್ಸೇ ಹರಿದಾಡಿದರೆ ಹಾಕಿಕೊಂಡು ಯೋಜನೆ ಫಲಪ್ರದವಾಗುವುದಿಲ್ಲ, ಉತ್ತಮ ಗುರು ಮತ್ತು ಜಂಗಮನಾಗಬೇಕಾದರೆ ಇಷ್ಟಲಿಂಗ ಪೂಜೆ ಹಾಗೂ ದೃಢ ಸಂಕಲ್ಪದ ಪರಿ ಇರಬೇಕು ಎಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ನಾಗನಗೌಡ ಜ್ಯಾಲಿಹಾಳ ಮಾಟಲದಿನ್ನಿ ಗ್ರಾಮದ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರು ಇವರು ಮಾತನಾಡಿ, ಕೇವಲ ಮನಸ್ಸಿಲ್ಲದೆ ಕಲ್ಲು ಮಣ್ಣಿನ, ಪಂಚಲೋಹಗಳಿಗೆ ಪೂಜೆ ಮಾಡುದರಿಂದ ಸಾರ್ಥಕತೆ ಉಂಟಾಗುವುದಿಲ್ಲ, ಎಲ್ಲಿಯೂ ಕಾಣದಿರುವ ನಮ್ಮಲ್ಲಿಯೇ ಅಡಗಿರುವ ಇಷ್ಟಲಿಂಗ ಧಾರಣೆಗೆ ಯಾವುದೇ ಕುಲ, ಬೇಧ ಅಡ್ಡಿ ಇರುವುದಿಲ್ಲ.
ಚಂಚಲ ಮನಸ್ಸಿನಿಂದ ನೂರು ದೇವರ ನೆನೆಯುವದಕ್ಕಿಂತ ಇಷ್ಟಲಿಂಗ ಏಕದೇವೋಪಾಸನೆ ಮಾಡಿದರೆ ಇಷ್ಟಾರ್ಥಗಳು ಮನಸ್ಸಿನಂತೆ ಸಿದ್ಧಿಸುತ್ತವೆ, ಮನಸ್ಸು ನಿರ್ಮಲಗೊಳ್ಳುತ್ತದೆ. ಅಂಗದ ಮೇಲೆ ಲಿಂಗವ ಇಟ್ಟುಕೊಂಡು ಬಸವನ ಸ್ಮರಣೆ ಮಾಡಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾಗಿ, ಹನಮೇಶ್ ವೆಂಕಟಾಪುರ ಶಿಕ್ಷಕರು ಸ.ಕಿ.ಪ್ರಾ ಶಾಲೆ ತಾಳಕೇರಿ, ಶರಣಪ್ಪ ಕೋರಿ, ದೊಡ್ಡನಗೌಡ ಮಾಲಿಪಾಟಿಲ್, ಮಂಜುನಾಥ ಉಚ್ಚಲಕುಂಟಿ ಸಾ।। ಮಾಟಲದಿನ್ನಿ, ಅಮರೇಶಪ್ಪ ದೇವಲ್, ದೇವಪ್ಪ ದೇವಲ್, ಗಿರಿಮಲ್ಲಪ್ಪ ಪರಂಗಿ, ಜಗದೀಶ್ ಗೌಡರ್ ವನಜಭಾವಿ ಇವರು ವೇದಿಕೆ ಹಂಚಿಕೊಂಡು ಮಾತನಾಡಿದರು.
ಗುಳೆ ಗ್ರಾಮ ಘಟಕದ ಅಧ್ಯಕ್ಷರಾದ ರೇಣುಕಪ್ಪ ಮಂತ್ರಿ, ಲಿಂಗನಗೌಡ ದಳಪತಿ,ಶರಣಪ್ಪ ಹೊಸಳ್ಳಿ, ಶಿವಪುತ್ರಪ್ಪ ಉಚ್ಚಲಕುಂಟಿ, ಬಸವಣ್ಣ ಹೊಸಳ್ಳಿ, ರಾಷ್ಟ್ರಪತಿ, ಹನಮೇಶ್ ಬಸವರಾಜ, ಪಂಪಣ್ಣ ಹೊಸಳ್ಳಿ, ನಿಜಲಿಂಗಪ್ಪ, ಮಲ್ಲಿಕಾರ್ಜುನ, ಬಸವಂತಪ್ಪ, ಪಕೀರಪ್ಪ ಮಂತ್ರಿ, ಯಮನೂರಪ್ಪ ಕೋಳೂರು ಹಾಗು ಅಕ್ಕ ನಾಗಲಾಂಬಿಕೆ ಬಳಗದ ಶರಣೆ ಸಾವಿತ್ರಮ್ಮ ದೇವೇಂದ್ರಪ್ಪ ಆವಾರಿ, ಶಂಕ್ರಮ್ಮ ಹೊಸಳ್ಳಿ, ಶರಣಮ್ಮ ಬಸವನಗೌಡ ಪೋಲಿಸ್ ಪಾಟೀಲ್, ಮಲ್ಲಮ್ಮ, ಚನ್ನಮ್ಮ ಮಂತ್ರಿ, ನಾಗಮ್ಮ ಜಾಲಿಹಾಳ, ಶರಣಮ್ಮ ಹೊಸಳ್ಳಿ ಸೇರಿದಂತೆ ಇನ್ನಿತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳದ ಶರಣಗ್ರಾಮ ಗುಳೆ