Breaking News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್‌ರವರ ನಿಧನದ ಹಿನ್ನೆಲೆ ಡಿಸೆಂಬರ್-೩೦ರನಿರ್ಮಲತುಂಗಭದ್ರಾಅಭಿಯಾನದ ಸಮಾರೋಪ ಜನೇವರಿ-೦೮ಕ್ಕೆಮುಂದೂಡಿಕೆ

Former Prime Minister Dr. Background of Manmohan Singh’s death Dec-30 Ranirmala Tungabhadra campaign postponed to Jan-08

ಜಾಹೀರಾತು
Screenshot 2024 12 27 19 07 25 86 E307a3f9df9f380ebaf106e1dc980bb6


ಗಂಗಾವತಿ: ನಿರ್ಮಲ ತುಂಗಭದ್ರಾ ಅಭಿಯಾನದ ಶೋಭಾಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮವನ್ನು ಡಿಸೆಂಬರ್-೩೦ ಕ್ಕೆ ನಿಗದಿಯಾಗಿತ್ತು. ಆದರೆ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್‌ರವರ ನಿಧನದ ನಿಮಿತ್ಯ ಸದರಿ ಕಾರ್ಯಕ್ರಮವನ್ನು ಮುಂದಿನ ತಿಂಗಳು ಅಂದರೆ ಜನೇವರಿ-೦೮ಕ್ಕೆ ಮುಂದೂಡಲಾಗಿದೆ ಎಂದು ಅಭಿಯಾನದ ರಾಷ್ಟಿçÃಯ ಸಂಚಾಲಕರಾದ ಬಸವರಾಜ ಪಾಟೀಲ್ ವೀರಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನೇವರಿ-೦೭ ರಂದು ಅಭಿಯಾನದ ಪಾದಯಾತ್ರೆಯು ಕೊಪ್ಪಳ ಜಿಲ್ಲೆ ಪ್ರವೇಶಿಸಲಿದ್ದು, ಜನೇವರಿ-೦೮ ರಂದು ಗಂಗಾವತಿ ನಗರದಲ್ಲಿ ಶೋಭಾಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮ ಜರುಗಲಿದೆ.
ಈ ಅಭಿಯಾನದ ಕುರಿತು ಮಹತ್ವದ ಪೂರ್ವಭಾವಿ ಸಭೆಯನ್ನು ಡಿಸೆಂಬರ್-೨೯ ರವಿವಾರ ಸಾಯಂಕಾಲ ೪:೦೦ ಗಂಟೆಗೆ ಗಂಗಾವತಿ ನಗರದ ಐ.ಎಂ.ಎ ಭವನದಲ್ಲಿ ಕರೆಯಲಾಗಿದೆ. ಈ ಸಭೆಗೆ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ಎಲ್ಲಾ ಸಮಾಜಗಳ ಹಿರಿಯ ಮುಖಂಡರು, ರೈತ ಮುಖಂಡರು, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು, ಹೋರಾಟಗಾರರು ಹಾಗೂ ಮಹಿಳಾ ಪ್ರತಿನಿಧಿಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.