Breaking News

ಮುಕ್ಕುಂದಿಯಲ್ಲಿ ಐದು ಶಾಸನಗಳು ಪತ್ತೆ

Five inscriptions were found at Mukkundi


ಜಾಹೀರಾತು


ಈ ಗ್ರಾಮವು ಸಿಂಧನೂರು ತಾಲ್ಲೂಕು ಕೇಂದ್ರದಿಂದ ದಕ್ಷಿಣ ದಿಕ್ಕಿಗೆ ೩೨ ಕಿ.ಮೀ ದೂರದಲ್ಲಿದೆ. ಇಲ್ಲಿ ಈ ಹಿಂದೆ ಅನೇಕ ವಿದ್ವಾಂಸ ರೊಂದಿಗೆ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಕೂಡ ಅಧ್ಯಯನ ಮಾಡಿದ್ದಾರೆ. ಇಲ್ಲಿನ ಸೋಮಲಿಂಗೇಶ್ವರ (ಬಾಚೇಶ್ವರ) ದೇವಾಲಯದ ಸ್ತಂಭಕ್ಕೆ ಇರುವ ಕ್ರಿ.ಶ. ೧೨ನೇ ಶತಮಾನದ ಶಾಸನದಲ್ಲಿ ೩೦೦ ಮಹಾ ಜನರ ಉಲ್ಲೇಖವಿದ್ದು, ಮುಕ್ಕುಂದಿ ಗ್ರಾಮವು ಸರ್ವನಮಸ್ಯದಗ್ರಹಾರವಾಗಿತ್ತೆಂದು ತಿಳಿಸುತ್ತದೆ. ಇದೇ ಗ್ರಾಮದ ಬೈರಪ್ಪನ ಗುಡ್ಡದ ದೊಡ್ಡಗುಂಡಿಗೆ (ಸರ್ವೆ ನಂಬರ-೩೬೦) ಇರುವ ಕಣಶಿಲೆಯ ಕ್ರಿ.ಶ. ೧೧-೧೨ನೇ ಶತಮಾನದ ಶಾಸನದಲ್ಲಿ ಬೈರವೇಶ್ವರ ದೇವರಿಗೆ ಭೋಗೋಜನೆಂಬ ವ್ಯಕ್ತಿ ಹೊಲವನ್ನು ದಾನ ನೀಡುವುದರೊಂದಿಗೆ ಮನೆಗಳ ಮೇಲೆ ಹಾಕುತ್ತಿದ್ದ ಬಿರಾಡ (ತೆರಿಗೆ)ವನ್ನು ವಿನಾಯಿತಿ ನೀಡಿದ ಬಗ್ಗೆ ಪ್ರಸ್ತಾಪಿಸುತ್ತದೆ.

ಈ ಶಾಸನದ ಮುಂಬದಿಯಲ್ಲಿ ಬೈರವ ದೇವರ ನಿಂತ ಬಂಗಿಯ ಗೀರು ಚಿತ್ರವನ್ನು ಮೂಡಿಸಲಾಗಿದೆ. ಸೋಮಲಿಂಗೇಶ್ವರ ದೇವಾಲಯದ ಆವರಣದಲ್ಲಿರುವ ಕ್ರಿ.ಶ. ೧೮-೧೯ನೇ ಶತಮಾನದ ಶಾಸನವು ಹಿಂದಿನ ಕಾಲದಲ್ಲಿ ಸರ್ಪದೋಷ ನಿವಾರಣಾರ್ಥ ಅಂದರೆ ಸರ್ಪಭಯ, ಸ್ವಪ್ನದಲ್ಲಿ ಸರ್ಪಕಾಣುವಿಕೆ, ಸುಮ್ಮಸುಮ್ಮನೆ ಮಕ್ಕಳು ಬೆಚ್ಚಿಬೀಳುವುದು ಮತ್ತು ಪಶುಗಳು (ಆಕಳುಗಳು)ಬೆದರಿದಂತೆ ವರ್ತಿಸುವುದು, ಕುಂದು ಅಂದರೆ ಏಕಾಏಕಿ ಪಶುಗಳು ಮಂದಾಗುವುದು ಹೀಗಾದಾಗ ಈ ಸಿದ್ದಿಯ ಯಂತ್ರ ಲಿಪಿಯ ಬಳಿಗೆ ಬಂದು ತಾವು ತೆಗೆದುಕೊಂಡು ಬಂದ ತುಂಬಿದ ಕೊಡದ ನೀರನ್ನು ಈ ಕಲ್ಲಿನ ಮೇಲೆ ಸುರಿಯುತ್ತಿದ್ದರಂತೆ. ಹಾಗೆಯೇ ಪಶುಗಳನ್ನು ಆ ಯಂತ್ರದ ಕಲ್ಲಿನ ಸುತ್ತ ಪ್ರದಕ್ಷಿಣಿ ಹಾಕಿದರೆ ಗುಣಮುಖವಾಗುತ್ತಿದ್ದವೆಂಬ ನಂಬಿಕೆ ಅಲ್ಲಿನ ಜನರಲ್ಲಿರಬೇಕೆನಿಸುತ್ತದೆ.
ಸೋಮಲಿಂಗೇಶ್ವರ ದೇವಾಲಯದ ವೃತ್ತಿನಲ್ಲಿರುವ ಕಂಚಿನ ಗಂಟೆಯ ಶಾಸನವು ಚಿಕ್ಕಪ್ಪಯ್ಯನ ಕ|| ಭಾಸ್ಕರೇಶ್ವರಗೆ (ಬಾಚೇಶ್ವರ) ಕಟ್ಟಿಸಿದ ಗಂಟೆ ಎಂದು ಉಲ್ಲೇಖಿಸುತ್ತದೆ. ಮತ್ತು ಮುರಹರಿ ದೇವಾಲಯದ ಕಂಚಿನ ಗಂಟೆಯು ಕ್ರಿ.ಶ. ೨೦ನೇ ಶತಮಾನದ ಗಂಟೆಯ ಶಾಸನವು ಭೀಮಪ್ಪ ಹನುಮಂತಪ್ಪ ಸಂಗಾಪೂರ ಚಿಕ್ಕಬೇರಿಗೆ ಇವರು ಕಾಣಿಕೆ ಎಂದು ತಿಳಿಸುತ್ತದೆ.
ಈ ಶಾಸನಗಳ ಕ್ಷೇತ್ರ ಕಾರ್ಯದಲ್ಲಿ ಬಸನಗೌಡ ಹುಡಾ, ವಿರುಪಾಕ್ಷಿ ಪೂಜಾರ ಸೋಮಲಾಪುರ, ಭೀಮೇಶ ಶ್ರೀಪುರಂ ಜಂಕ್ಷನ್ ಮತ್ತು ಸ್ಥಳೀಯರು ನೆರವಾಗಿದ್ದರೆಂದು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಪತ್ರಿಕೆಗೆ ತಿಳಿಸಿದ್ದಾರೆ.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.