Breaking News

ಪೋಲಿಸರಿಗೆ ಅಥಿತಿಗಳಾದ ಆನೆ ದಂತ ಸಾಗಣೆದಾರರು.

Elephant tusk transporters who are guests of the police.

ಜಾಹೀರಾತು
ಜಾಹೀರಾತು


ವರದಿ : ಬಂಗಾರಪ್ಪ .ಸಿ.
ಹನೂರು : ಕ್ಷೇತ್ತ ವ್ಯಾಪ್ತಿಯಲ್ಲಿಆನೆ ದಂತ ಸಾಗಾಣಿಕೆಮಾಡುತ್ತಿದ್ದ ಇಬ್ಬರನ್ನು ರಾಮಾಪುರ ಪೊಲೀಸರ ಬಂದಿಸಿರುವ ಘಟನೆ ನಡೆದಿದೆ,
ತಮಿಳುನಾಡಿನ ಪೆರುಮಾಳ ಎಂಬುವವರ ಮಗ ಶಕ್ತಿವೇಲು(45)ಹಾಗೂ ಹನೂರಿನ ಶಂಕರ ನಾರಯಣ್ ರವರ ಮಗ ನಾಗೇಂದ್ರಬಾಬು (63)ಎಂಬುವವರಾಗಿದ್ದಾರೆ.
ಮಹದೇಶ್ವರ ಬೆಟ್ಟ ಕೌದಳ್ಳಿ ಮಾರ್ಗದ ರಸ್ತೆಯಲ್ಲಿ
ಆನೆ ದಂತವನ್ನು ತೆಗೆದುಕೊಂಡು ಮಾರಾಟ ಮಾಡಲು ಬೈಕ್ ನಲ್ಲಿ ಸಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸೈ ಲೋಕೇಶ್, ಹೆಡ್ ಕಾನ್ಸ್‌ಟೇಬಲ್ ಗಿರೀಶ್, ಪೇದೆಗಳಾದ ಮಹೇಂದ್ರ ಲಿಯಾಖತ್ ಖಾನ್, ಪರಶುರಾಮ್, ಮಕಂದರ್ ಇವರುಗಳ ತಂಡ ಕೌದಳ್ಳಿ ಮಹದೇಶ್ವರಬೆಟ್ಟ ಮುಖ್ಯರಸ್ತೆಯಲ್ಲಿ ಬೈಕನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಆನೆ ದಂತವನ ಚೀಲದಲ್ಲಿಟ್ಟಿರುವುದು ಪತ್ತೆಯಾಗಿದೆ.
ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಪಾಲಾರ್ ಅರಣ್ಯ ಪ್ರದೇಶದಲ್ಲಿ ಆನೆದಂತ ಸಿಕ್ಕಿದ್ದು, ಇದನ್ನು
ಹನೂರು ಕಡೆ ಮಾರಾಟ ಮಾಡಲು ಹೋಗುತ್ತಿದ್ದೇವೆಂದು ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ
ನಂತರ ರಾಮಾಪುರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ..

About Mallikarjun

Check Also

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.