Breaking News

ಸಂಶೋಧನಾತ್ಮಕ ಪ್ರವೃತ್ತಿ ವೃದ್ಧಿಯಾಗಲಿ : ವಸ್ತ್ರದ

Let the inquisitive nature grow: Vastrad

ಜಾಹೀರಾತು


ಗಂಗಾವತಿ:ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಸಂಶೋಧನಾತ್ಮಕ ವಿಶ್ಲೇಷಣಾತ್ಮಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಮಾಡಿದಾಗ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ ಎಂದು ಗಂಗಾವತಿಯ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಸನ್ಮಾನ್ಯ ಮಂಜುನಾಥ ವಸ್ರ್ರದ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕೊಪ್ಪಳ ಕರಾವಿಪ ಜಿಲ್ಲಾ ಘಟಕ ಕೊಪ್ಪಳ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಕೊಪ್ಪಳ ಹಾಗೂ ಸರ್ಕಾರಿ ಪ್ರೌಢಶಾಲೆ ಉರ್ದು ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ೩೧ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಮಾರ್ಗದರ್ಶಿ ಶಿಕ್ಷಕರಿಗೆ ತರಬೇತಿ ಕಾರ್ಯಗಾರವನ್ನ ಉದ್ಘಾಟಿಸಿ ಮಾತನಾಡಿದರು. ಡಯಟ್ ಮುನಿರಾಬಾದಿನ ಉಪನ್ಯಾಸಕರಾದ ಕೃಷ್ಣ ರವರು ಮಾತನಾಡಿ ಮಕ್ಕಳಲ್ಲಿ ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬೇಡ ಎಂಬ ಸಿದ್ಧಾಂತವನ್ನು ಅಳವಡಿಸಿಕೊಳ್ಳುವಂತೆ ಮಾಡಬೇಕು ಹಾಗಾದಾಗ ಮಾತ್ರ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನಾ ಲಹರಿಯನ್ನು ಬೆಳೆಸಿಕೊಳ್ಳುತ್ತಾರೆ ಎಂದರು. ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾದ ಶ್ರೀ ರಂಗಸ್ವಾಮಿ ಅವರು ತಮ್ಮ ಬಾಲ್ಯದ ವಿಜ್ಞಾನ್ ಚಟುವಟಿಕೆಗಳ ಅನುಭವಗಳನ್ನು ಹಂಚಿಕೊAಡರು.೩೧ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಕೊಪ್ಪಳ ಜಿಲ್ಲೆಯ ಸಂಯೋಜಕರಾದ ಸಿದ್ದಲಿಂಗೇಶ್ವರ ಪೂಲಬಾವಿ ಮಾತನಾಡಿ ಇಡೀ ಕರ್ನಾಟಕ ರಾಜ್ಯದಲ್ಲಿ ಕೇವಲ ಎರಡು ಜಿಲ್ಲೆಗಳಲ್ಲಿ ಮಾತ್ರ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಾಲಾ ತಂಡಗಳಿಗೆ ೫೦೦೦ ಗಳನ್ನು ಆಯಾ ಗ್ರಾಮ ಪಂಚಾಯತಿ ಮತ್ತು ಪಟ್ಟಣ ಪಂಚಾಯತಿಯ ವರು ನೀಡಲು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶಿಸಿದ್ದು ಅದರಲ್ಲಿ ಕೊಪ್ಪಳ ಸಹ ಒಂದು ಎಂದರು. ಪ್ರತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳೊಂದಿಗೆ ಪ್ರಾಜೆಕ್ಟ್ ಮಂಡನೆಯನ್ನು ಮಂಡಿಸಲು ಸೂಕ್ತ ತಯಾರಿಯೊಂದಿಗೆ ಆಗಮಿಸಲು ತಿಳಿಸಿದರು.ಕೊಪ್ಪಳ ಜಿಲ್ಲೆಯನ್ನು ಎರಡು ಬಾರಿ ರಾಷ್ಟçಮಟ್ಟಕ್ಕೆ ತೆಗೆದುಕೊಂಡು ಹೋದ ಮಾರ್ಗದರ್ಶಿ ಶಿಕ್ಷಕಿ ಜಯಶ್ರೀ ಅಂಗಡಿ ಶಿಕ್ಷಕರಿಗೆ ತರಬೇತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆ ಉರ್ದುವಿನ ಮುಖ್ಯ ಗುರುಗಳಾದ ಎಮ್ ಬಿ ಕೊಪ್ಪಳ ರವರು ಅಧ್ಯಕ್ಷತೆ ವಹಿಸಿದ್ದರು.
ರಾಷ್ಟçಪ್ರಶಸ್ತಿ ಪುರಸ್ಕöÈತ ಶ್ರೀಮುರಳಿಧರ್ ಸಿಂಗಿ,್ರ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ತಾಲೂಕ ಘಟಕದ ಕಾರ್ಯದರ್ಶಿ ಬಸವರಾಜಯ್ಯ, ಸಂಪನ್ಮೂಲ ವ್ಯಕ್ತಿಗಳಾದ ಉಮೇಶ್ ಮಲ್ಲಾಪುರ. ಶಂಭುಲಿAಗಪ್ಪ ಬಣಕಾg, ರಮೇಶ್ ಶಿಲ್ಪಿ ಉಪಸ್ಥಿತರಿದ್ದರು. ರಂಗನಾಥ್ ಕುಲಕರ್ಣಿ ಸ್ವಾಗತಿಸಿದರು, ಮಹಮ್ಮದ್ ಗೌಸ್ ನಿರೂಪಿಸಿ ವಂದಿಸಿದರು.

About Mallikarjun

Check Also

ಸಾವಳಗಿ ಗ್ರಾಮದಲ್ಲಿ ಕೂಸಿನ ಮನೆ ಯೋಜನೆ ಆಟಕ್ಕುಂಟು ಲೇಕ್ಕಕಿಲ್ಲ !?

In Savalgi village, the milking house project will be played!? ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಸಾವಳಗಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.