Breaking News

ಬಸಾಪಟ್ಟಣ :ಮಕ್ಕಳ ನಾಯಕತ್ವ ಶಿಬಿರ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಕಾರ್ಯಗಾರ

Basapatna: Children’s leadership camp and SSLC students’ result improvement workshop

ಜಾಹೀರಾತು

” ಭಾರತ್ ಸೇವಾದಳದ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದರ ಮೂಲಕ ರಾಜ್ಯಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲಾ ಸೇವಾದಳ ಸಮಿತಿ” ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಟೇಶ್

ಬಸಾಪಟ್ಟಣ ಬಾಲಕರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ನಾಯಕತ್ವ ಶಿಬಿರ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣಾ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ನಟೇಶ್ ಮಾತನಾಡಿದರು

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮುಖ್ಯ ಘಟ್ಟವಾಗಿದ್ದು ಮಕ್ಕಳು ಈ ಹಂತದಲ್ಲಿ ಉತ್ತಮವಾದಂತಹ ವ್ಯಾಸಂಗವನ್ನು ಮಾಡಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಕರೆ ನೀಡಿದರು. ಹಾಗೂ ಸಹ ಶಿಕ್ಷಕರ ಸಂಘದ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಶ್ಲ್ಯಾಗಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದಂತಹ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಸೋಮಶೇಖರ್ ಹರ್ತಿರವರು “ಪ್ರಾಥಮಿಕ ಹಂತದಲ್ಲಿ ಮಕ್ಕಳ ಕಲಿಕಾ ಮಟ್ಟ ಸುಧಾರಿಸುವ ಅವಶ್ಯಕತೆ ಇದೆ. ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಸೇವಾದಳದ ವತಿಯಿಂದ ಹಮ್ಮಿಕೊಳ್ಳಲು ನಾವು ಉತ್ಸುರಾಗಿದ್ದೇವೆ” ಎಂದು ಹೇಳಿದರು.

ಭಾರತ ಸೇವಾದಳ ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ಬಸಾಪಟ್ಟಣ ಪಂಚಾಯಿತಿ ಮಟ್ಟದ ಭಾರತ್ ಸೇವಾದಳ ಮಕ್ಕಳ ನಾಯಕತ್ವ ಶಿಬಿರ ನಡೆಸಲಾಯಿತು. ಕಾರ್ಯಗಾರದಲ್ಲಿ ಬಾಲಕರ ಶಾಲೆಯ, ಬಾಲಕಿಯರ ಶಾಲೆಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ,ಹಾಗೂ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕರ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ಭಾಷಾ ಸಾಬ ವಹಿಸಿದ್ದರು.
ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀ ಹನುಮೇಶ ರವರು ಅತಿಥಿಗಳನ್ನು ಸ್ವಾಗತಿಸಿದರು ಭಾರತ್ ಸೇವಾದಳ ಕೊಪ್ಪಳ ಜಿಲ್ಲಾ ಸಂಘಟಿಕರಾದ ಕುಮಾರಸ್ವಾಮಿ ಎಚ್ ಬಳ್ಳಾರಿ,ಭಾರತ ಸೇವಾದಳ ತಾಲೂಕ ಅಧಿನಾಯಕ ಶಿವಾನಂದ ತಿಮ್ಮಾಪೂರ, ಕೋಶಾಧ್ಯಕ್ಷರಾದ ಈರಣ್ಣ ಹೆಬ್ಬಾಳ, ತಾಲೂಕು ಅಧ್ಯಕ್ಷರಾದ ಮಂಜುನಾಥ್ ದರೋಜಿ,ದೖಹಿಕ ಶಿಕಾಷಣ ಪರಿವೀಕ್ಷಕರಾದ ಶ್ರೀಮತಿ ಉಮಾದೇವಿ ಪಾಟೀಲ್, ಮುಖ್ಯೋಪಾಧ್ಯಾಯರಾದ ಎನ್ ನಾಗಭೂಷಣ, ನಿಂಗಪ್ಪ, ಸಂಪನ್ಮೂಲ ಶಿಕ್ಷಕರಾದ ಕಾಶಿ ವಿಶ್ವನಾಥ್ ಉದಯ್ ಕುಮಾರ್ ಕೋಟೆಪ್ಪ ಶರಣಪ್ಪ ಬಿಸ್ನಳ್ಳಿ ಭೀಮರಾವ್ ಹಾಗೂ ಭಾರತ ಸೇವಾದಳ ಸಮಿತಿಯ ಸದಸ್ಯರು, ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರಾದ ಶ್ರೀಮತಿ ಜ್ಯೋತಿ ನಾಯಕ್, ಶ್ರೀಮತಿ ಶೋಭಾ ಪಾಟೀಲ್, ಶ್ರೀಮತಿ ಲೀಲಾವತಿ, ಶ್ರೀಮತಿ ಮಂಜುಳಾ, ಶ್ರೀಮತಿ ಉಮಾದೇವಿ, ಅಂದೇಶ್, ಅಯ್ಯನಗೌಡ, ಕನಕಪ್ಪ ಕಮಲಾಪುರ್, ವೆಂಕಣ್ಣ ಕೊಟ್ರೇಶ್ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.

ಬೆಳಗಿನ ಅವಧಿಯಲ್ಲಿ ಎಸ್ ಡಿಎಂಸಿ ಅಧ್ಯಕ್ಷರಾದಂತಹ ಶ್ರೀ ಭಾಷಾ ಸಾಬ್ ಅವರು ರಾಷ್ಟ್ರ ಧ್ವಜಾರೋಹನವನ್ನು ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

About Mallikarjun

Check Also

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur …

Leave a Reply

Your email address will not be published. Required fields are marked *