ಜಾಹೀರಾತು

The, 16th dedication of Shekhanacharya Memorial Building

ದಿ,16 ಶೇಖಣಾಚಾರ್ಯ ಸ್ಮಾರಕ ಭವನ ಲೋಕಾರ್ಪಣೆ
ಜಾಹೀರಾತು

ಕೊಪ್ಪಳ: ಇಲ್ಲಿನ ಗವಿಶ್ರೀ ನಗರದ ಮೇದಾರ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರ ಇರುವ ಐತಿಹಾಸಿಕ ಸುಕ್ಷೇತ್ರ, ಶ್ರೀ ಸಹಸ್ರಾಂಜನೇಯ ದೇವಸ್ಥಾನದ ಶ್ರೀ ಶೇಖಣಾಚಾರ್ಯ ಸ್ಮಾರಕ ಭವನದ ಲೋಕಾರ್ಪಣೆ ಕಾರ್ಯಕ್ರಮ ಎಪ್ರಿಲ್ 16 ಗುರುವಾರ ಬೆಳಿಗ್ಗೆ 6.52 ನಿಮಿಷಕ್ಕೆ ಜರುಗಲಿದೆ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಅಂದು ದೇವಸ್ಥಾನದ ಅಧ್ಯಕ್ಷರು ಮತ್ತು ಹನುಮನಾರಾಧಕರಾದ ಪ್ರಕಾಶ ಶಿಲ್ಪಿ ಅವರು 7004 ನೇ ಹನುಮನ ವಿಗ್ರಹ ತಯಾರಿಸಿ ಪೂಜೆ ಅಭಿಷೇಕ ನೆರವೇರಿಸುವರು. ಹುಬ್ಬಳ್ಳಿಯ ವೇ. ಮೂ. ಸೋಮಾಚಾರ್ಯ ರಾಮಾಚಾರ್ಯ ಕಡ್ಲಾಸ್ಕರ್ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತವೆ. ಅಜ್ಜನ ಭಕ್ತರು ಆಗಮಿಸಲು ಕೋರಿದ್ದಾರೆ.
Total Views:
1
