ಯಲಬುರ್ಗಾ ಪ.ಪಂ.: ಎಸ್.ಎಫ್.ಸಿ ಅನುದಾನದಡಿ ವ್ಯಕ್ತಿಗತ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
Yelaburga P.P.: Applications invited for individual program under SFC grant




ಯಲಬುರ್ಗಾ ಪ.ಪಂ.: ಎಸ್.ಎಫ್.ಸಿ ಅನುದಾನದಡಿ ವ್ಯಕ್ತಿಗತ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

ಜಾಹೀರಾತು

ಕೊಪ್ಪಳ ಮೇ 07, (ಕರ್ನಾಟಕ ವಾರ್ತೆ): ‎ಯಲಬುರ್ಗಾ ಪಟ್ಟಣ ಪಂಚಾಯತಿ ವತಿಯಿಂದ 2026-27ನೇ ಸಾಲಿನ ಎಸ್.ಎಫ್.ಸಿ ಶೇ.7.25, ಶೇ.5 ರ ಯೋಜನೆಯ ಅನುದಾನದಲ್ಲಿ ವ್ಯಕ್ತಿಗತ ಕಾರ್ಯಕ್ರಮಕ್ಕೆ ಕ್ರಿಯಾ ಯೋಜನೆ ಮಂಜೂರಾಗಿದ್ದು, ಕಾರ್ಯಕ್ರಮದಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ಇತರೆ ಬಡ ವಿದ್ಯಾರ್ಥಿಗಳಿಗೆ ವಿಶೇಷ ನೆರವು ನೀಡಲು ಮತ್ತು ಶೇ.5ರ ಯೋಜನೆಯಡಿ ವಿಶೇಷ ಚೇತನರ ಶಸ್ತç ಚಿಕಿತ್ಸೆಗಾಗಿ ಸಹಾಯಧನ ವಿತರಣೆಗಾಗಿ ಹಾಗೂ ಶ್ರವಣ ಸಾಧನ ವಿತರಣೆಗಾಗಿ ಕ್ರಿಯಾ ಯೋಜನೆ ಮಂಜೂರಾದ ಕಾರಣ ಭೌತಿಕ ಗುರಿ ಅನುಗುಣವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗುತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಶೇ.7.25 ರಡಿ ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ  ಇತರೆ ಬಡ ವಿದ್ಯಾರ್ಥಿಗಳ ವಿಶೇಷ ನೆರವು ಯೋಜನೆಯಡಿ ಅರ್ಜಿ ಸಲ್ಲಿಸಲು ಫಲಾನುಭವಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ಮತದಾರರ ಗುರುತಿನ ಪತ್ರ, ಹಿಂದಿನ ತರಗತಿಯ ಅಂಕಪಟ್ಟಿ, ಪ್ರಸ್ತುತ ವ್ಯಾಸಂಗ ಪ್ರಮಾಣ ಪತ್ರ, ಶಾಲಾ/ಕಾಲೇಜಿನ ಸಂಪೂರ್ಣ ವಿಳಾಸ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಮತ್ತು ‎ವಿದ್ಯಾರ್ಥಿಗಳ ಭಾವಚಿತ್ರ (ಪಾಸ್‌ಪೋರ್ಟ್ ಸೈಜ್) ದಾಖಲಾತಿಗಳನ್ನು ಸಲ್ಲಿಸಬೇಕು. ಪ್ರೋತ್ಸಾಹ ಧನವನ್ನು ಅಂಕಗಳ ಆಧಾರದ ಮೇಲೆ ಪರಿಗಣಿಸಲಾಗುವುದು.
ಶೇ.5 ರ ಯೋಜನೆಯಡಿ ವಿಶೇಷ ಚೇತನರ ಶಸ್ತç ಚಿಕಿತ್ಸೆಗಾಗಿ ಸಹಾಯಧನ ವಿತರಣೆಗಾಗಿ ಹಾಗೂ ಶ್ರವಣ ಸಾಧನ ವಿತರಣೆಗಾಗಿ ಅರ್ಜಿದಾರರು ಅರ್ಜಿಯೊಂದಿಗೆ ವಿಶೇಷ ಚೇತನರ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ಮತದಾರರ ಗುರುತಿನ ಪತ್ರ, ಶಸ್ತç ಚಿಕಿತ್ಸೆ ಪಡೆದ ಬಗ್ಗೆ ಸರ್ಕಾರಿ ವೈದ್ಯರಿಂದ ದೃಢೀಕೃತ ವೈದ್ಯಕೀಯ ಬಿಲ್ಲುಗಳು ಹಾಗೂ ಶ್ರವಣ ಸಾಧನ ಪಡೆಯಲು ವಿಶೇಷ ಚೇತನರ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು.
‎ ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ. ಅಂದು ಮಧ್ಯಾಹ್ನ 1.30 ಗಂಟೆಯೊಳಗೆ ಯಲಬುರ್ಗಾ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿದ ಹಾಗೂ ಅಪೂರ್ಣ ದಾಖಲೆ ಇರುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ಸಂಬAಧಿಸಿದ ಯೋಜನೆ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಯಲಬುರ್ಗಾ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article