Helmet is mandatory to save life: PSI Gitanjali Shinde

“18 ವರ್ಷದೊಳಗಿನ ಮಕ್ಕಳ ಕೈಗೆ ಬೈಕ್ ಕೊಟ್ಟರೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ಖಚಿತ ಪೋಷಕರೆ ಎಚ್ಚರಿಕೆಯನ್ನು ಪಿಎಸ್‌ಐ ಗೀತಾಂಜಲಿ ಶಿಂಧೆ ಹೇಳಿದರು “
ಕೊಟ್ಟೂರು: ಅಪರಾದ ತಡೆ ಮಾಸಾಚರಣೆ ನಿಮಿತ್ತ ಶುಕ್ರವಾರ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿ ಜಾಗೃತಿ ಮೂಡಿಸಿ ಮಾತನಾಡಿದರು.
ಹೆಲೈಟ್ ಇಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ತಡೆದು ತಮ್ಮನ್ನು ಆಶ್ರಯಿಸಿ ಹೆಂಡತಿ, ಮಕ್ಕಳು ಹಾಗೂ ತಂದೆ-ತಾಯಿಯ ಕುಟುಂಬ ಇದೆ, ಹೆಲೈಟ್ ಇಲ್ಲದೆ ಸಂಚರಿಸಿ ಅಪಘಾತದಿಂದ ಅವರನ್ನು ಸಂಕಷ್ಟಕ್ಕೀಡು ಮಾಡಬೇಡಿ ಎಂದು ಹೇಳಿ
ಹೆಲ್ಬಟ್ ಕೊಟ್ಟು, ನಿತ್ಯ ಸವಾರಿ ಧರಿಸುವಂತೆ ಹೇಳಿದರು.

ಬೈಕ್ ಸವಾರರು ತಮ್ಮ ಪ್ರಾಣದ ಸುರಕ್ಷತೆ ಹಾಗೂ ಕುಟುಂಬಸ್ಥರ ಹಿತ ದೃಷ್ಟಿಯಿಂದ ಕಡ್ಡಾಯವಾಗಿ ಹೆಲೈಟ್ ಧರಿಸಬೇಕು ಎಂದು ಪಿಎಸ್‌ಐ ಗೀತಾಂಜಲಿ ಶಿಂಧೆ ಹೇಳಿದರು.
ಬೈಕ್ ರ್ಯಾಲಿ ಹರಪನಹಳ್ಳಿ ರಸ್ತೆ ಪೋಲೀಸ್ ಠಾಣೆಯಿಂದ ಪ್ರಾರಂಭ ಗೊಂಡು, ಬಸ್ ನಿಲ್ದಾಣ, ಗಾಂಧಿ ಸರ್ಕಲ್‌ಗೆ ಸಾಗಿ ದೇವಸ್ಥಾನ ಮುಂಭಾಗದಿಂದ, ಉಜ್ಜಿನಿ ಸರ್ಕಲ್ ಮೂಲಕ ಮರಳಿ ಪೋಲೀಸ್ ಠಾಣೆಗೆ ಜಾಗೃತಿ ಜಾಥಾ ನಡೆಯಿತು.