Breaking News

ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವದನ್ನು ಗಂಗಾವತಿ ರಾಷ್ಟ್ರೀಯ ಬಸವದಳ ಸ್ವಾಗತಿಸುತ್ತಿ ದೆ.

The Gangavati Rashtriya Basavadal welcomes the declaration of Basavanna as a cultural hero

ಗಂಗಾವತಿ,19: ಹನ್ನೆರಡನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳವಳಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ, ವಚನಗಳ ಮೂಲಕ ಜಾಗೃತಿ ಮೂಡಿಸಿದ ಬಸವೇಶ್ವರರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.ಇದನ್ನು ಅಭಿನಂದಿಸಲು ಆನೆಗೊಂದಿ ರಸ್ತೆಯಲ್ಲಿ ಇರುವ ಬಸವೇಶ್ವರ ವೃತ್ತ ದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದವರು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಮಾಜಿ ಶಾಸಕ,ವೀರಶೈವ -ಲಿಂಗಾಯತ ಸಮಾಜದ ರಾಜ್ಯ ಉಪಾಧ್ಯಕ್ಷರು ಆದ ಪರಣ್ಣ ಮುನವಳ್ಳಿ ಅವರು, ‘ಮಾತನಾಡಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಬಸವ ಪಥ’ಕ್ಕೆ ಅಗ್ರಸ್ಥಾನ ನೀಡಲು ಕಾಂಗ್ರೆಸ್ ನೇತೃತ್ವದ ಸರ್ಕಾರ ತೀರ್ಮಾನಿಸಿದ್ದನ್ನು ಸ್ವಾಗತಿಸಿ ಬಸವಣ್ಣ ಅವರ ನೇತೃತ್ವದಲ್ಲಿ ಜಾತಿ ಭೇದ ಮತ್ತು ಲಿಂಗತಾರತಮ್ಯ ವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ನಡೆಯಿತು.

ಭಾರತದ ಸಂವಿಧಾನವೂ ಇದನ್ನೇ ಎತ್ತಿ ಹಿಡಿದಿದೆ. ಅಲ್ಲದೇ, ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ತಾತ್ವಿಕ ಮೌಲ್ಯಗಳನ್ನೂ ಬಸವಣ್ಣ ಪ್ರತಿಪಾದಿಸಿದ್ದರು. ಅವರು ವಿಶ್ವ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿ ಸಿದ್ದ ಮಹಾನ್ ವ್ಯಕ್ತಿ ಆಗಿರುವುದರಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವದು ತುಂಬಾ ಸಂತೋಷವಾಗಿದೆ, ಎಂದರು.

ಬಸವಣ್ಣ ಅವರ ತತ್ವ ಆದರ್ಶಗ ಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರ ಮಾಡಬೆಕಿದೆ ಎಂದು ಕಾರ್ಮಿಕ ಮುಖಂಡ ಜೆ .ಭಾರದ್ವಾಜ ಹೇಳಿದರು.

ರಾಷ್ಟ್ರೀಯ ಬಸವದಳದ ಅದ್ಯಕ್ಷ ದಿಲೀಪ್ ಕುಮಾರ್ ವಂದಾಲ ಮಾತನಾಡಿ ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ವಿಶ್ವಗುರು, ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದ ಮಹಾನ್ ಕಾರ್ಯ ಮಾಡಿದ್ದಕ್ಕೆ, ಇಂದು ಗಂಗಾವತಿಯ ಬಸವೇಶ್ವರ ವೃತ್ತದಲ್ಲಿ,ರಾಷ್ಟ್ರೀಯ ಬಸವ ದಳ ವತಿಯಿಂದ ಸ್ವಾಗತಿಸಿ, ಅಭಿನಂದನೆ ಸಲ್ಲಿಸಲಾಯಿತು, ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸನ್ಮಾನ್ಯ ಪರಣ್ಣ ಮುನವಳ್ಳಿಯವರು, ಕಾರ್ಮಿಕ ಮುಖಂಡ ಜೆ ಭಾರದ್ವಾಜ್ ರವರು, ರಾಷ್ಟ್ರೀಯ ಬಸವ ದಳದ ಗೌರವ ಅಧ್ಯಕ್ಷರಾದ ಹೆಚ್ ಮಲ್ಲಿಕಾರ್ಜುನ, ಅಧ್ಯಕ್ಷರಾದ ದಿಲೀಪ್ ಕುಮಾರ್ ವಂದಲ,ಉಪಾಧ್ಯಕ್ಷರಾದ ಕೆ ವೀರೇಶಪ್ಪ, ರಾಷ್ಟ್ರೀಯ ಬಸವ ದಳದ ಯುವ ಮುಖಂಡರಾದ ವಿನಯ್ ಕುಮಾರ್ ಅಂಗಡಿ, ಮಲ್ಲಿಕಾರ್ಜುನ ಅರಳಹಳ್ಳಿ, ಮಂಜುನಾಥ ದೇವರ ಮನೆ, ಚನ್ನಬಸಮ್ಮ ಕಂಪ್ಲಿ, ಬಸವ ಜ್ಯೋತಿ ಬಿ ಲಿಂಗಾಯತ, ತಿಪ್ಪಮ್ಮ ರಾಮ ಸಾಗರ, ಶಾಂತಮ್ಮ ಪೋಲಿಸ್ ನಾಗರಾಜ್ ಅಂಗಡಿ , ಮಂಜುನಾಥ್ ದೇವರಮನಿ,ಚಲುವಾದಿ ಸಮಾಜದ ಮುಖಂಡ ಹುಲಿಯಪ್ಪ , ಕೆಸರಟ್ಟಿ ವಿಶ್ವನಾಥ ಮಾಲಿಪಾಟಿಲ್ ಹಾಗೂ ಬಸವ ಭಕ್ತರು ಸೇರಿಸಂತೆ ಇತರರುಇದ್ದರು.


ರಾಷ್ಟ್ರೀಯ ಬಸವ ದಳ ಗಂಗಾವತಿ
ಶರಣು ಶರಣಾರ್ಥಿ💐💐

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.