Formation of a standing committee as if there is no problem: Nooruddin Saab as the chairman.
ಕೊಪ್ಪಳ : ಮಂಗಳವಾರದಂದು ಕುಕನೂರು ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚಿಸಲಾಯಿತು.
ಸ್ಥಾಯಿ ಸಮಿತಿ ರಚನೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ನಾಲ್ಕು ಬಿಜೆಪಿ ಬೆಂಬಲಿತ ಸದಸ್ಯರನ್ನು ಸದಸ್ಯ ಗಗನ ನೋಟಗಾರ ಸೂಚಿಸುತ್ತಿದ್ದಂತೆ ಬಿಜೆಪಿ ಸದಸ್ಯರು ನಮಗೆ ಮೂರು ಸದಸ್ಯ ಸ್ಥಾನ ನೀಡಿ ಎಂದು ಸದಸ್ಯ ಸಿದ್ದು ಉಳ್ಳಾಗಡ್ಡಿ ಹೇಳಿದರು.
ಅದಕ್ಕೆ ಕಾಂಗ್ರೆಸ್ ಸದಸ್ಯರು ಮಾತನಾಡಿ ಸ್ಥಾಯಿ ಸಮಿತಿ ಇದರೆಲ್ಲೆನೀದೆ ಸದಸ್ಯರನ್ನು ಮೂರು ಕೊಡಲು ಎಂದರು.
ಅದಕ್ಕೆ ಬಿಜೆಪಿ ಸದಸ್ಯರು ಸ್ಥಾಯಿ ಸಮಿತಿಯಲ್ಲೂ ಏನಿಲ್ಲಾ ಪಪಂ ಸದಸ್ಯರಾದರು ಏನಿಲ್ಲಾ ಎಂದು ಕೊನೆಗೆ ಆರು ಸದಸ್ಯರನ್ನೊಳಗೊಂಡ ಸ್ಥಾಯಿ ಸಮಿತಿ ರಚಿಸಲಾಯಿತು.
ಕೊನೆಗೆ ಕಾಂಗ್ರೆಸ್ ನ ನಾಲ್ಕು ಸದಸ್ಯರಲ್ಲಿ ನೂರುದ್ದಿನ್ ಸಾಬ ಗುಡಿಹಿಂದಲ್ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿ ಮಾಲಾರ್ಪಣೆ ಮಾಡಲಾಯಿತು.
ಇನ್ನೂಳಿದಂತೆ ಸ್ಥಾಯಿ ಸಮಿತಿಗೆ ರಾಧಾ ಸಿದ್ದಪ್ಪ ದೊಡ್ಮನಿ, ಗಗನ ನೋಟಗಾರ, ಸಿರಾಜ್ ಕರಮುಡಿ, ಲಕ್ಷ್ಮೀ ಸಬರದ, ಬಾಲರಾಜ ಗಾಳಿ ಆಯ್ಕೆ ಮಾಡಲಾಯಿತು.
ಈ ವೇಳೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ ಆರ ಬೆರಳಿನ್ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ನೇತ್ರಾವತಿ ಮಾಲಗಿತ್ತಿ, ಕವಿತಾ ಹೂಗಾರ, ಮಲ್ಲು ಚೌದರಿ, ಮಂಜುನಾಥ ಕೋಳೂರು, ಮಂಜುಳಾ ಕಲ್ಮನಿ, ರಾಮಣ್ಣ ಬಂಕದಮನಿ, ಸಿದ್ದು ಉಳ್ಳಾಗಡ್ಡಿ, ಶಿವರಾಜ ಯಲ್ಲಪ್ಪಗೌಡ್ರ, ಜಗನ್ನಾಥ ಭೋವಿ ಉಪಸ್ಥಿತರಿದ್ದರು.