Breaking News

ಅರವತ್ತರ ಹರೆಯದ ನಿಜಗುಣಾನಂದ ಸ್ವಾಮೀಜಿ

Nijagunananda Swamiji in his sixties

ಈ ಲಿಂಗಾಯತ ಮಠಾಧೀಶರೆಂದರೆ ನನಗೆ ಹೇಸಿಗೆ ಅನಿಸುತ್ತದೆ. ಬಸವ ಪ್ರಣೀತ ಲಿಂಗಾಯತ ಧರ್ಮವನ್ನು ತಮ್ಮ ಆಡಂಬೋಲಕ್ಕೆ, ವೈಭವಕ್ಕೆ ಬಳಸಿಕೊಂಡು ಹದಗೆಡಿಸುತ್ತಿದ್ದಾರಲ್ಲ! ಎಂಬ ನೋವು ಉಂಟಾಗುತ್ತದೆ.

ಆದರೆ ಅಲ್ಲೊಬ್ಬ ಇಲ್ಲೊಬ್ಬ ಮಠಾಧೀಶರು ಕನಿಷ್ಟ ಪಕ್ಷ ಅಕ್ಷರ ಮತ್ತು ಅನ್ನ ದಾಸೋಹ ಮಾಡಿದ್ದಾರಲ್ಲ ಎಂಬ ಸಮಾಧಾನ ಇನ್ನೊಂದು ಕಡೆ. ಬಸವ ತತ್ವವನ್ನು ಹಾಸಿ ಹೊದ್ದುಕೊಂಡ ಮಠಾಧೀಶರು ಇಂದಿಗೂ ದುರ್ಲಭ.

ಈ ಎಲ್ಲಾ ಮಾತುಗಳನ್ನು ಮೀರಿ ಜನ ಮಾನಸಕ್ಕೆ ಶರಣರ ತತ್ವ ಚಿಂತನೆಗಳನ್ನು ಗಟ್ಟಿಯಾಗಿ ತಲುಪಿಸುತ್ತಿರುವವರಲ್ಲಿ ನಿಜಗುಣ ಸ್ವಾಮೀಜಿ ಪ್ರಮುಖರು. ಇವರನ್ನು ಮಠಾಧೀಶರಾಗಿ ತಯಾರು ಮಾಡಲಿಲ್ಲ. ಮಠಾಧೀಶರ ಪ್ರೊಡಕ್ಟ್ ಸೆಂಟರನಲ್ಲಿ ತಯಾರಾಗಲಿಲ್ಲ. ವೇದ ಶಾಸ್ತ್ರ ಆಗಮ ಪುರಾಣಗಳೆಂಬ ಅನೃತದ ನುಡಿಗೆ ಪಕ್ಕಾಗದೆ, ಜೀವನಾನುಭಾವದ ವಚನ ಸಾಹಿತ್ಯದ ಸಿಂಚನದಲ್ಲಿ ಮಿಂದೆದ್ದವರು.

ಹನ್ನೆರಡನೆಯ ಶತಮಾನದ ಶರಣರ ಜೀವನ ಹಾಗೂ ಅವರ ಆಶಯಗಳನ್ನು ಅರಿತುಕೊಂಡು ಅವನ್ನು ನೇರಾ ನೇರ ಜನ ಸಾಮಾನ್ಯರಿಗೆ ತಿಳಿಸಿದವರು. ಕಂಡದ್ದು ಕಂಡಂತೆ ಆಡಿದಾಗ ಸಹಜವಾಗಿ ಹಲವರ ಕೆಂಗಣ್ಣಿಗೆ, ಪಟ್ಟಭದ್ರರ ಟೀಕೆ ಟಿಪ್ಪಣಿಗಳಿಗೆ ಗುರಿಯಾಗಿದ್ದಾರೆ. ಹಲವಾರು ಜನ ಕೊಲೆ ಬೆದರಿಕೆಯೂ ಹಾಕಿದ್ದಾರೆ. ಆದರೂ ಛಲಬೇಕು ಶರಣಂಗೆ ಹಿಡಿದುದ ಬಿಡೆನೆಂಬ ಹಠ ನಿಜಗುಣಾನಂದರಿಗೆ.

ಮಾಡುವುದು ಮಾಡುವುದು ಮನ ಮುಟ್ಟಿ ಮಾಡುವುದು ಎನ್ನುವಂತೆ ತಮಗೆ ಅರ್ಥವಾದ ಶರಣರ ವಿಚಾರಗಳನ್ನು ಹೇಳದೆ ಬಿಟ್ಟವರಲ್ಲ. ತಮ್ಮ ನೇರ ನಿಷ್ಠುರ ಮಾತುಗಳ ಮೂಲಕ ಕರ್ನಾಟದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದವರು.

ಯಾವ ಹಮ್ಮು ಬಿಮ್ಮು ಬಡಿವಾರಗಳಿಲ್ಲದ , ಸಾರ ಸಜ್ಜನರ ಸಂಗದಲ್ಲಿರುವ ನಿಜಗುಣ ಸ್ವಾಮೀಜಿಗೆ ಅರವತ್ತರ ಹರೆಯ. ಪ್ರಶಸ್ತಿ,ಪದವಿ,ಸನ್ಮಾನಗಳಿಂದ ಬಹು ದೂರವಿದ್ದರೂ ಸರಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ತನ್ನ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ಬಸವಾದಿ ಪ್ರಮಥರ ವಿಚಾರಗಳನ್ನು ಮನೆ ಮನೆಗೆ, ಮನ ಮನಕ್ಕೆ ಮುಟ್ಟಿಸುತ್ತಿರುವ ನಿಜಗುಣಸ್ವಾಮೀಜಿಯಂಥ ಮಠಾಧೀಶರ ಸಂಖ್ಯೆ ಹೆಚ್ಚಾಗಲಿ. ಅವರಿಗೆ ಗೌರವದ ಶರಣಾರ್ಥಿಗಳು.

ವಿಶ್ವಾರಾಧ್ಯ ಸತ್ಯಂಪೇಟೆ

About Mallikarjun

Check Also

ಪಂಚಾಯತ್ ಸದಸ್ಯ ಶ್ರೀ ಪ್ರಸಾದ್ ರೈ ಮುತುವರ್ಜಿಯಿಂದ 90 ಮನೆಗಳಿಗೆ ಕುಡಿಯುವ ನೀರು, ಸಾರ್ವಜನಿಕ ರಿಂದ ಮೆಚ್ಚುಗೆ

ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲ 4ನೇ ವಾರ್ಡಿನ ಕಲ್ಲಗುಡ್ಡೆ ಪರಿಸರದ 90 ಮನೆಗಳಿಗೆ ಒಂದು ತಿಂಗಳುಗಳಿಂದ ಮೂಲ ಸೌಕರ್ಯಗಳಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.