Breaking News

ಮಹಾನ್ ಕಿಡ್ಸ್ ಶಾಲೆಯಲ್ಲಿಇಂದುವಿಭಿನ್ನ ಮಾಡೆಲ್ ಹಾಗೂ ಆಟಗಳ ಮೂಲಕ ಗಣಿತ ದಿನ ಆಚರಣೆ.

Celebrating Maths Day through different models and games today at Mahan Kids School.

ಜಾಹೀರಾತು
WhatsApp Image 2024 12 21 At 16.14.29 1045966d

ಗಂಗಾವತಿ: ಇಂದು ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಗಣಿತ ದಿನವನ್ನು ಆಚರಿಸಲಾಯಿತು.
ಈ ಸಮಯದಲ್ಲಿ ಮಕ್ಕಳು ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯ ಮಕ್ಕಳು ಗಣಿತಕ್ಕೆ ಸಂಬಂಧಿಸಿದ ಮಾಡಲ್‌ಗಳನ್ನು ಹಾಗೂ ಗಣಿತದ ಕಾನ್ಸೆಪ್ಟ್ಗಳನ್ನು ಮಕ್ಕಳು ಸುಲಭವಾಗಿ ಪಾಲಕರಿಗೆ ತಿಳಿಸಿದರು. ಗಣಿತ ವಿಷಯ ಮಕ್ಕಳ ಬಾಯಿಯಲ್ಲಿ ನಿರರ್ಗಳವಾಗಿ ಬರುತ್ತಿರುವುದನ್ನು ಪಾಲಕರು ಕೇಳಿ ತುಂಬಾ ಅಚ್ಚರಿಪಟ್ಟರು. ಚಿಕ್ಕ ಚಿಕ್ಕ ಮಕ್ಕಳು ಮಾಡಲ್‌ಗಳನ್ನು ಹಿಡಿದು, ಆ ಮಾಡೆಲ್‌ಗಳನ್ನು ವಿವರಿಸುವ ಕೌಶಲ್ಯವನ್ನು ಹಾಗೂ ಮಕ್ಕಳು ಮಾತನಾಡುವ ಶೈಲಿ ಅವರ ಕಾನ್ಫಿಡೆನ್ಸ್ ಎಲ್ಲವೂ ಅದ್ಭುತವಾಗಿ ಇವೆಯೆಂದು ಪಾಲಕರು ಹೇಳುತ್ತಿದ್ದರು.
ಇದೇ ಸಮಯದಲ್ಲಿ ಪಾಲಕರಿಗಾಗಿ ಹಲವಾರು ಗಣಿತ ಆಟಗಳನ್ನು ಇಡಲಾಗಿತ್ತಿ. ಆ ಆಟಗಳನ್ನು ಪಾಲಕರು ಆಡುತ್ತಾ ಇಷ್ಟೊಂದು ಆಟಗಳು ಗಣಿತದಲ್ಲಿ ಇವೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ಪಾಲಕರು ಹೇಳುತ್ತಿದ್ದರು. ಮಕ್ಕಳು ಪಾಲಕರು ಕೇವಲ ಮೊಬೈಲ್‌ಗಳಲ್ಲಿ ಆಟ ಆಡುವುದನ್ನು ಬಿಟ್ಟು ಈ ಗಣಿತಕ್ಕೆ ಸಂಬಂಧಿಸಿದಂತೆ ಆಟ ಆಡುವುದನ್ನು ಕಲಿತರೆ ಗಣಿತವು ಸುಲಭ ಹಾಗೂ ಮಕ್ಕಳು ಮೊಬೈಲ್‌ಗಳಿಂದ ದೂರ ಇರಬಹುದು.
ಈ ಸಮಯದಲ್ಲಿ ಮಾತನಾಡಿದ ಶಾಲೆಯ ಅಧ್ಯಕ್ಷ ನೇತ್ರಾಜ್ ಗುರುವಿನ ಮಠರವರು ನಮ್ಮ ಶಾಲೆಯಲ್ಲಿ ಗಣಿತಕ್ಕೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ನಮ್ಮ ಮಕ್ಕಳು ಗಣಿತ ವಿಷಯವನ್ನು ಆಟ ಆಡಿದಂತೆ ಕಲಿಯುತ್ತಾರೆ. ಕಳೆದ ಸಾಲಿನಲ್ಲಿ ೧೦ನೇ ತರಗತಿಯ ಎಲ್ಲಾ ಮಕ್ಕಳು ಗಣಿತ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದು ನೂರಕ್ಕೆ ನೂರು ಅಂಕಗಳನ್ನು ಪಡೆದಿರುವ ಮಕ್ಕಳಿದ್ದಾರೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಗುರುವಿನ ಮಠ ಮಾತನಾಡಿ ಮಕ್ಕಳಿಗೆ ಪ್ರತಿ ತಿಂಗಳು ಯಾವುದಾದರೂ ಒಂದು ವೇದಿಕೆ ಮೂಲಕ ಮಕ್ಕಳ ಕೌಶಲ್ಯ ಹೊರಗಡೆ ಬರಲು ನೋಡಿಕೊಳ್ಳುತ್ತೇವೆ. ಅದೇ ರೀತಿಯಾಗಿ ಇಂದು ಗಣಿತ ದಿನದಂದು ಮಕ್ಕಳು ತಮ್ಮ ಕೌಶಲ್ಯವನ್ನು ತೋರುತ್ತಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಸಿದ್ದೇಶ್, ಮಂಜುನಾಥ್, ತೇಜಸ್ವಿನಿ, ತಿಮ್ಮಪ್ಪ, ಸಲ್ಲಿನ, ಸೌಜನ್ಯ, ಮಂಜುನಾಥ್, ಕುಮುದಿನಿ, ವಿಜಯಲಕ್ಷ್ಮಿ, ಮುತ್ತ, ಚಂದ್ರಶೇಖರ್ ಹಾಗೂ ಪಾಲಕರೆಲ್ಲರೂ ಇದ್ದರು.

About Mallikarjun

Check Also

unnamed

ಕಟ್ಟಡ ಇತರೆ ನರ‍್ಮಾಣ ಕರ‍್ಮಿಕರ ಆನ್ಲೈನ್ ರ‍್ಜಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ. ರ‍್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಜಾರಿ ಮಾಡಿ

ಕಟ್ಟಡ ಇತರೆ ನರ‍್ಮಾಣ ಕರ‍್ಮಿಕರ ಆನ್ಲೈನ್ ರ‍್ಜಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ. ರ‍್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಜಾರಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.