Power outage in Kukanur area on Sunday.

ಕುಕನೂರು : ದಿನಾಂಕ: 22.12.2024 ರ ಭಾನುವಾರ ದಂದು ಕುಕನೂರ 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಯುಕ್ತ ಬೆಳಗ್ಗೆ 10 ಘಂಟೆಯಿಂದ ಸಾಯಂಕಾಲ 05 ಘಂಟೆಯವರೆಗೆ ಕುಕನೂರ ವ್ಯಾಪ್ತಿಗೆ ಒಳಪಡುವ ಎಲ್ಲಾ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಕಾರಣ ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸಬೇಕು.
ಕಾಮಗಾರಿ ಮುಕ್ತಾಯವಾದ ನಂತರ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಸರಬರಾಜು ಮಾಡಲಾಗುವುದು.ಕಾಮಗಾರಿಯ ವೇಳೆ ಗ್ರಾಹಕರು ಯಾವುದೇ ವಿದ್ಯುತ್ ಕೆಲಸ ಕಾರ್ಯಗಳನ್ನು ಮಾಡಬಾರದು ಒಂದು ವೇಳೆ ವಿದ್ಯುತ್ ಕೆಲಸ ಮಾಡುತ್ತಿದ್ದರೆ ಅದಕ್ಕೆ ಜೆಸ್ಕಾಂ ಕಾರಣ ವಾಗುವುದಿಲ್ಲವೆಂದು
ಕುಕನೂರು ತಾಲೂಕ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ಕಾರ್ಯ ಪಾಲನಾ ಉಪ, ವಿಭಾಗದ ಜೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.