Breaking News

ಮೊದಲಭಾರಿಗೆಮಂಗಳವಾರ ನಡೆಯಲಿರುವ ಪಟ್ಟಣದ ಅಧಿದೇವತೆ ಬೆಟ್ಟಳ್ಳಿ ಮಾರಮ್ಮನ ರಥೋತ್ಸವ,ಸಮಿತಿಯಿಂದ ಭಕ್ತರಿಗೆ ಮನವಿ

Rathotsava of the town’s deity Bettalli Maramma to be held on Tuesday for the first month, the committee appeals to the devotees.


ವರದಿ;ಬಂಗಾರಪ್ಪ ಸಿ .
ಹನೂರು : ಪಟ್ಟಣದ ಅಧಿದೇವತೆ ಶ್ರೀಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ನೂತನ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ ಇದರ ಸಂಪೂರ್ಣ ಕಾರ್ಯವನ್ನು ಬೆಟ್ಟಳ್ಳಿ ಮಾರಮ್ಮ ಸಮಿತಿಯ ಅಧ್ಯಕ್ಷರಾದಿಯಾಗಿ ಸಖಲ ಭಕ್ತರು ಕಾಣಿಕೆ ನೀಡುವುದರ ಮೂಲಕ ಇದೇ ತಿಂಗಳು 2/3/2024 ರ ಮಂಗಳವಾರ ದಂದು ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ .
ಶಿಲ್ಪ ಕಲೆಯ ನಿಪುಣ, ರಥ ತಯಾರಿಸುವ ಕಾಯಕದಲ್ಲಿ ನಿರತರಾದ ಮೈಸೂರು ಜಿಲ್ಲೆಯ ರಥಶಿಲ್ಪಿ ಜಿ ವೆಂಕಟೇಶ್ ಮೂರ್ತಿ‌ ಹಾಗೂ ಹತ್ತಾರು ಸಹ ಕಾಷ್ಠಶಿಲ್ಪ ಕಲಾವಿದರ ಕೈಯಲ್ಲಿ ಅರಳಿರುವ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ರಥ ನಿರ್ಮಾಣ ಕಾರ್ಯ ಮುಕ್ತಾಯ ಹಂತ ತಲುಪಿ ಅಂತಿಮ ಸ್ಪರ್ಶ ನೀಡುವ ಕೆಲಸ ಭರದಿಂದ ಸಾಗಿದೆ.ಇದರೊಂದಿಗೆ ಹಲವಾರು ತಲೆಮಾರುಗಳಿಂದ ಇದ್ದ ತೇರು ನಿರ್ಮಾಣದ ಕನಸು ಈಗ ನನಸಾಗುತ್ತಿದೆ.
14.5ಅಡಿಯ‌ ನೂತನ ರಥ ನೋಡುಗರ ಕಣ್ಮನ ಸೆಳೆಯುವಂತ ಶೈಲಿ: ರಥ ಶಿಲ್ಪಿಗಳಿಂದ ವಿನೂತನ ಮಾದರಿಯ ಸುಂದರವಾದ 4ಚಕ್ರಗಳುಳ್ಳ ರಥವು ತಳಭಾಗದ ಅಚ್ಚುಗಡ್ಡಿ, ಕುದುರೆ,ಸಿಂಹ ಲಾಂಛನ ಸೇರಿ ಎಂಟು ಅಷ್ಟಕಂಬಗಳುಳ್ಳ 14.5ಅಡಿಯ‌ ಶ್ರೀ ಬೆಟ್ಟಳ್ಳಿ ಮಾರಮ್ಮನ ಪುಷ್ಪಕ ರಥವು ನೋಡುಗರ ಕಣ್ಮನ ಸೆಳೆಯುವಂತ ಶೈಲಿಯಲ್ಲಿ ಕೆತ್ತಲ್ಪಟ್ಟಿದೆ

ಈ ಸುಂದರ ಬದಲಾವಣೆಗೆ ಕಾಯುತ್ತಿದ್ದಾರೆ ಭಕ್ತರು :ದೇವಾಲಯವು ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಈ ಸುಂದರ ಬದಲಾವಣೆಗೆ ಕ್ಷೇತ್ರದ ಭಕ್ತರು ಕಾಯುತ್ತಿದ್ದಾರೆ. ಹೌದು, ಚಾಮರಾಜನಗರ ಜಿಲ್ಲೆಯ‌ ನೂತನ ತಾಲ್ಲೂಕು ಕೇಂದ್ರವಾದ ಹನೂರು ಪಟ್ಟಣದಲ್ಲಿರುವ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯ ದಿನ ಕಳೆದಂತೆ ಪ್ರಖ್ಯಾತ ಹೊಂದುತ್ತಿದ್ದು ನೆರೆಯರಾಜ್ಯ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕೂಡ ಭಕ್ತ ಸಮೂಹ ದೇವಾಯಲಯಕ್ಕೆ ಆಗಮಿಸುತ್ತಾರೆ ಇನ್ನೂ ವರ್ಷಕ್ಕೆ ಒಂದು ಭಾರಿ ನೆಡೆಯುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ ಅಲ್ಲದೆ ವಿಶೇಷ ಪೂಜಾ ಪುನಸ್ಕಾರದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಅಲ್ಲದೆ ಪ್ರತಿ ಮಂಗಳವಾರ ಮದ್ಯಾಹ್ನ ಆಗಮಿಸುವ ಸಮಸ್ತ ಭಕ್ತರಿಗೆ ಹಲವು ವರ್ಷಗಳಿಂದ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಈ ಭಾರಿ ಜಾತ್ರಾ ಮಹೋತ್ಸವ ಏಪ್ರೀಲ್ 1ರಂದು ರಾತ್ರಿ ಜಾಗರ ಸಮರ್ಪಣೆ, ಏಪ್ರೀಲ್ 2ರಮಂಗಳವಾರ ಮದ್ಯಾಹ್ನ12ಘಂಟೆಗೆ ರಥೋತ್ಸವ ಹಾಗಯೇ ಅದೇ ದಿನ ತಂಪುಜ್ಯೋತಿ ಏಪ್ರೀಲ್ 3 ರ ಬುಧವಾರದಂದು ಹರಕೆ ಹೂತ್ತಭಕ್ತರಿಂದ ಭಾಯಿಬೀಗ ಸೇರಿದಂತೆ ಏಪ್ರೀಲ್4ರಗುರುವಾರ ಮುಂಜಾನೆ ಆಗ್ನಿ‌ಕುಂಡ ಪ್ರದರ್ಶನ ಜರುಗಲಿದೆ ಹೀಗೆ ನಾಲ್ಕು ದಿನಗಳ ಕಾಲ ಜಾತ್ರೆ ನೆಡೆಯುತ್ತಿದ್ದು ಜಾತ್ರಾ ಮಹೋತ್ಸವದ ಎರಡನೇ ದಿನ ನೂತನ ರಥೋತ್ಸವ ನಡೆಯಲಿದೆ.
ಇತಿಹಾಸದಲ್ಲಿ ಮೊದಲ ಭಾರಿಗೆ ನೆಡೆಯುವ ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು
ಬಂದು ಭಾಗಿಯಾಗುವ ನಿರೀಕ್ಷೆ ಇದ್ದು ಭಕ್ತರಿಗೆ ಈ ಬಾರಿ ಒಂದು ಹೊಸ ಅನುಭವ ದೊರಕಲಿದೆ.

ಶ್ರೀಬೆಟ್ಟಳ್ಳಿ ಮಾರಮ್ಮ ದೇವಿಯ ಸಾನ್ನಿಧ್ಯದಲ್ಲಿ ನೂತನ ರಥೋತ್ಸವ ದೇವಿಯ ಆರ್ಶೀವಾದದೊಂದಿಗೆ ಪ್ರಥಮ ಭಾರಿಗೆ ನೆಡೆಸಲು ನಿರ್ಧಾರವಾಗಿದ್ದು ದೇವಿಯ ಅನುಗ್ರಹದಿಂದ ಭಕ್ತರ ಬೇಡಿಕೆಗಳು ಹಾಗೂ ಇಷ್ಟಾರ್ಥಗಳು ನೇರವೇರಲಿ ಸರ್ವರಿಗೂ ಒಳಿತಾಗಲಿ
ರಾಜೂಜೀರಾವ್ ಪ್ರಧಾನ ಆರ್ಚಕರು.ಮಕ್ಕಳಾದ ಜಯಂತ್ ರಾವ್ ಮತ್ತು ಅರುಣ್ ಕುಮಾರ್ ,ಅರ್ಚಕರುಗಳು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯ ಹನೂರು

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.