Breaking News

ಮಸೀದಿಗೆ ಮಾತ್ರ ರಕ್ಷಣೆ: ತಾರತಮ್ಯ ನೀತಿ ಖಂಡನೆಹಿಂದು ದೇವಾಲಯಗಳಿಗೆ ಬ್ಯಾರಿಕೇಡ್ ಹಾಕಲು ಆಗ್ರಹ

Protection for mosques only: Demands to barricade temples after condemning discrimination

ಜಾಹೀರಾತು

ಗಂಗಾವತಿ: ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ಧತೆಯಿಂದ ಆಚರಿಸುವಂತೆ ಶಾಂತಿಸಭೆ ನಡೆಸಿ ಸಾರ್ವಜನಿಕರಲ್ಲಿ ಮನವಿ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸೌಹಾರ್ಧತೆ ಕಾಪಾಡಬೇಕೆಂದು ಬೊಬ್ಬೆ ಹಾಕುವ ಪೊಲೀಸ್ ಅಧಿಕಾರಿಗಳು ಕೇವಲ ಮಸೀದಿಗಳ ಮುಂದೆ ಬ್ಯಾರಿಕೇಡ್ ಮತ್ತು ಕಟ್ಟಿಗೆ ಕಂಬಗಳಿಂದ ರಕ್ಷಣೆ ಮಾಡಿ ತಾರತಮ್ಯ ನೀತಿ ಅನುಸರಿಸಿರುವುದನ್ನು ನಾವು ಖಂಡಿಸುತ್ತೇವೆ.

ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳು ಒಟ್ಟಿಗೆ ಬಂದಿರುವುದರಿದ ಗಣೇಶ ಹಬ್ಬದ ಮೆರವಣಿಗೆಯಂತೆ ಈದ್ ಮಿಲಾದ್ ಮೆರವಣಿಗೆ ಕೂಡಾ ನಗರದಲ್ಲಿ ನಡೆಯುತ್ತದೆ. ಮಸೀದಿಗಷ್ಟೇ ರಕ್ಷಣೆ ನೀಡಿ ದೇವಸ್ಥಾನಗಳಿಗೆ ರಕ್ಷಣೆ ನೀಡಿಲ್ಲ ಯಾಕೆ ಎಂಬುದು ಪೊಲೀಸರು ಬಹಿರಂಗಪಡಿಸಬೇಕು ಎಂದು ಹಿಂದು ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಿ ಪ್ರಶ್ನಿಸಿದ್ದು, ಹಿಂದೂ ದೇವಾಲಯಗಳ ಮುಂದೆಯೂ ರಕ್ಷಣೆಗಾಗಿ ಬ್ಯಾರಿಕೇಡ್ ಹಾಕಿ ಎಂದು ಅಗ್ರಹಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮ ಪ್ರಕಟಣೆ ನೀಡಿ ಅಗ್ರಹಿಸಿದ್ದಾರೆ.

ಗಂಗಾವತಿ ನಗರದಲ್ಲಿ ಈ ಹಿಂದೆ ಗಣಪತಿ ಮೆರವಣಿಗೆಯಲ್ಲಿ ಕಲ್ಲು ತೂರಿರುವುದು ಮತ್ತು ಈದ್ ಮಿಲಾದ್ ಸಂದರ್ಭದಲ್ಲಿ ಗಲಭೆ ನಡೆದಿರುವ ಘಟನೆಯನ್ನು ನೆನಪು ಮಾಡಿಕೊಂಡು ಗಂಗಾವತಿ ನಗರದಲ್ಲಿ ಪೊಲೀಸರು ಎಲ್ಲಾ ಹಬ್ಬಗಳಲ್ಲಿ ಶಾಂತಿ ಸಭೆ ನಡೆಸುತ್ತಿದ್ದಾರೆ. ಈ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲೇ ಈದ್ ಮಿಲಾದ್ ಹಬ್ಬವು ಬಂದಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಂಗಾವತಿ ನಗರದಲ್ಲಿ ಶಾಂತಿಸಭೆ ನಡೆಸಿ ಸೌಹಾರ್ದತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನು ಸಮಸ್ತ ಗಂಗಾವತಿಯ ಜನತೆ ಸ್ವಾಗತಿಸಿದ್ದಾರಲ್ಲದೇ ಎರಡು ಹಬ್ಬಗಳಂದು ಶಾಂತಿ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ.

ತಹ ಸಂದರ್ಭದಲ್ಲಿ ಪೊಲೀಸರು ಗಂಗಾವತಿ ನಗರದಲ್ಲಿರುವ ಮಸೀದಿಗಳ ಮುಂದೆ ಮಾತ್ರ ಪೊಲೀಸ್ ವಾಹನ ನಿಲ್ಲಿಸಿದ್ದಾರಲ್ಲದೇ ಬ್ಯಾರಿಕೇಡ್ ಮತ್ತಿತರ ಕಟ್ಟಿಗೆಯಿಂದ ಸೂಕ್ತ ರಕ್ಷಣೆ ನೀಡುವ ಕೆಲಸ ಮಾಡಿದ್ದಾರೆ. ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುತ್ತದೆ ಎಂಬುದನ್ನು ಅರಿತು ಈ ರೀತಿ ಮಾಡಿರಬಹುದು. ಆದರೆ ಈದ್ ಮಿಲಾದ್ ಮೆರವಣಿಗೆ ಕೂಡಾ ಹಲವು ದೇವಸ್ಥಾನಗಳ ಮುಂದೆಯೇ ಹೋಗುತ್ತದೆ.

ಆದರೆ ದೇವಾಲಯಗಳ ಮುಂದೆ ಯಾಕೆ ರಕ್ಷಣೆಗೆ ವ್ಯವಸ್ಥೆ ಮಾಡಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದು ಪೊಲೀಸರ ತಾರತಮ್ಯವನ್ನು ಬಹಿರಂಗಪಡಿಸಿದಂತಾಗಿದೆ. ಯಾವುದೇ ಮೆರವಣಿಗೆಯಲ್ಲಿ ಹಿಂದೂಗಳು ಕೆಟ್ಟ ಕೆಲಸ ಮಾಡಿರುವ ಘಟನೆ ಇದುವರೆಗೂ ನಡೆದಿಲ್ಲ ಮತ್ತು ನಡೆಯುವುದಿಲ್ಲ ಕೂಡಾ. ಹೀಗಿರುವಾಗ ಅನವಶ್ಯಕವಾಗಿ ಮಸೀದಿಗಳ ಮುಂದೆ ಬ್ಯಾರಿಕೇಡ್ ಹಾಕಿ ಜನರಲ್ಲಿ ಗೊಂದಲ ಮತ್ತು ಭಯ ಸೃಷ್ಟಿಸುವ ಕೆಲಸ ಪೊಲೀಸರು ಮಾಡಬಾರದು. ಹಿಂದೂ ದೇವಾಲಯಗಳ ಮುಂದೆಯೂ ರಕ್ಷಣೆ ನೀಡಿ ತಾರತಮ್ಯ ನಿವಾರಣೆ ಮಾಡಬೇಕು ಎಂದು ಅಗ್ರಹಿಸಿದ್ದಾರೆ.

About Mallikarjun

Check Also

ಪತ್ರಕರ್ತರ ಬೆನ್ನೆಲುಬಾಗಿ ನಿಲ್ಲಲಿದೆ ಮಾಧ್ಯಮ ಪತ್ರಕರ್ತರ ಸಂಘ.

The Media Journalists Association will stand as the backbone of journalists. ಉಡುಪಿ:ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರು ಸೇರಿದಂತೆ …

Leave a Reply

Your email address will not be published. Required fields are marked *