Neglect of electric lighting for Sri Sant Sewalal circle

ಕೂಡ್ಲಿಗಿ:-ತಾಲೂಕಿನ ಸಂಡೂರು ರಸ್ತೆಯಲ್ಲಿರುವ ಸಂತ ಶ್ರೀ ಸೇವಾಲಾಲ್ ಮಹಾರಾಜ ವೃತ್ತಕ್ಕೆ 78ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಪಟ್ಟಣದ ಎಲ್ಲಾ ವೃತ್ತಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಿದ್ದು ಆದರೆ ಬಂಜಾರ ಸಮುದಾಯದ ಆರಾಧ್ಯ ದೈವರಾದ ಶ್ರೀ ಸಂತಲಾಲ್ ವೃತ್ತವನ್ನು ಕಡೆಗಣಿಸಿದ್ದು ಖಂಡನೀಯವಾಗಿದೆ ಎಂದು ಶ್ರೀ ಸಂತ ಸೇವಾಲಾಲ್ ಸಂಘದ ಅಧ್ಯಕ್ಷರಾದ ಎಂ ವಾಸುದೇವ್ ನಾಯಕ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪಟ್ಟಣ ವ್ಯಾಪ್ತಿಯ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ವೃತ್ತಕ್ಕೆ ಸಹ ವಿದ್ಯುತ್ ದೀಪಾಲಂಕರ ಕಡೆಗಣಿಸಲಾಗಿತ್ತು ಆದರೆ ಅಧಿಕಾರಿಗಳು ಈ ರೀತಿ ಅಸಡ್ಡೆತನ ತೋರಬಾರದು ಮುಂದಿನ ದಿನಗಳಲ್ಲಿ ಈ ತರಹ ಒಂದು ಸಮುದಾಯಕ್ಕೆ ನೋವನ್ನುಂಟು ಮಾಡುವ ಕೆಲಸವನ್ನು ಮತ್ತು ತಾರತಮ್ಯವನ್ನು ಮಾಡಬಾರದೆಂದು ಸಂಘದ ಸದಸ್ಯರಾದ ಎಂ ಎಸ್ ಕೃಷ್ಣ ಧರ್ಮ ನಾಯ್ಕ್, ಎಂ ಬಿ ಪ್ರಕಾಶ್ ನಾಯ್ಕ್ ಗೋವಿಂದ ನಾಯ್ಕ್ ದುರ್ಗ್ಯ ನಾಯ್ಕ್ ಆರ್ ಸಿ ವಿಜಯಕುಮಾರ್ ವೆಂಕಟೇಶ್ ನಾಯ್ಕ್ ರವರು ಆಕ್ರೋಶ ವ್ಯಕ್ತಪಡಿಸಿದರು.