Breaking News

ಯುವಸಮೂಹಕ್ಕೆಬೇಕಾಗಿರುವುದು ನಿಜವಾದ ದಿಕ್ಕು: ದೊಡ್ಡ ಕನಸು ಕಾಣುವ ಧೈರ್ಯ: ಭಾವಿಕಾ ವಾಧ್ವಾನಿ

What the youth needs is true direction: the courage to dream big: Bhavika Wadhwani
Screenshot 2025 08 25 10 01 57 42 6012fa4d4ddec268fc5c7112cbb265e71270707915689398800 1024x466


ಬೆಂಗಳೂರು, ಆ.25; ದೇಶದ ಯುವ ಸಮೂಹ ನೈಜ ಪರಿವರ್ತನೆಕಾರರು. ಅವರಿಗೆ ಬೇಕಾಗಿರುವುದು ಸರಿಯಾದ ದಿಕ್ಕು, ಅವಕಾಶಗಳು ಮತ್ತು ದೊಡ್ಡ ಕನಸು ಕಾಣುವ ಧೈರ್ಯ. ಇಂದೇ ನಾವು ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಿದರೆ ನಾಳೆಯೇ ಉದ್ಯಮ ಸ್ಥಾಪಿಸಬಹುದು ಎಂದು ಬಿ.ಎ.ಎಲ್ ಕಾರ್ಪೋರೇಟ್ ಸರ್ವೀಸ್ ಲಿಮಿಟೆಡ್ ನ ಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಭಾವಿಕಾ ವಾಧ್ವಾನಿ ಹೇಳಿದ್ದಾರೆ.
ದೇಶದ ಉದಯೋನ್ಮುಖ 40 ಉದ್ಯಮಿಗಳಲ್ಲಿ ಒಬ್ಬರಾಗಿರುವ ಅವರು, ಹಲವು ಯಶಸ್ವಿ ಸಂಸ್ಥೆಗಳನ್ನು ನಿರ್ಮಿಸಿದ್ದಾರೆ. ಕ್ರಿಸ್ತು ಜಯಂತಿ ಕಾಲೇಜಿನ ಸಭಾಂಗಣದಲ್ಲಿ ನೂರಾರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯಮಶೀಲ ಪ್ರಯಾಣದಲ್ಲಿ ಏಳು ಬೀಳು ಸಹಜ. ಹೊಸತನ, ಸಹನೆ ಹಾಗೂ ಸೃಜನಶೀಲತೆಯನ್ನು ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ತಮ್ಮ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. “ಭಾವಿಕಾ ವಾಧ್ವಾನಿ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್” ಮೂಲಕ ವಿದ್ಯಾರ್ಥಿಗಳಿಂದ ಬಂದ ಅತ್ಯುತ್ತಮ ವ್ಯವಹಾರ ಆಲೋಚನೆಗಳನ್ನು ಗುರುತಿಸಿ ಗೌರವಿಸಲಾಗುವುದು. ವಿಜೇತರಿಗೆ ತಮ್ಮ ವ್ಯವಹಾರ ಆರಂಭಿಸಲು ಮಾರ್ಗದರ್ಶನ ಹಾಗೂ ಸಾಧ್ಯವಿರುವ ಹೂಡಿಕೆ ಪಡೆಯಲು ನೆರವಾಗುತ್ತೇನೆ. ಜೊತೆಗೆ ವಿಶೇಷ ಪ್ರೋತ್ಸಾಹ ಸೂಚಕವಾಗಿ, 200 ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ವ್ಯವಹಾರ ಸಲಹೆ ನೀಡುವುದಾಗಿ ಪ್ರಕಟಿಸಿದರು.
ಈ ಯೋಜನೆ ಹೊಸ ಆಲೋಚನೆಗಳನ್ನು ಬೆಳೆಸಲು ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು ಶಾಶ್ವತ ಉದ್ಯಮಗಳಾಗಿ ಪರಿವರ್ತಿಸಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ತಮ್ಮ ಸಲಹಾ ಯೋಜನೆಗಳನ್ನು ನೇರವಾಗಿ ತಮ್ಮ ಜಾಲತಾಣದಲ್ಲಿ ನೋಂದಣಿ ಮಾಡಬಹುದು: www.bhavikawadhwani.com ಎಂದರು.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.