Breaking News

ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಷಷ್ಟಿ ಸಂಭ್ರಮದ ಪೂರ್ವಾಭಾವಿ ಸಭೆ

Yugamanotsava and Shashti Celebration of Shri Adi Jagadguru Panchacharya Preliminary Meeting

ಜಾಹೀರಾತು
ಜಾಹೀರಾತು

ಕೊಟ್ಟೂರು : ಪಟ್ಟಣದ ಶ್ರೀ ಡೋಣೂರು ಚಾನೂಕೋಟಿ ಮಠದ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಷ||ಬ್ರ||ಶ್ರೀ ಡಾ. ಸಿದಲಿಂಗ ಶಿವಾಚಾರ್ಯ ಸ್ವಾಮಿಗಳವರ ಷಷ್ಟಿ ಸಂಭ್ರಮ ಪೂರ್ವಾಭಾವಿ sಸಭೆಯಲ್ಲಿ ಪೋಸ್ಟರ್, ಬ್ಯಾನರ್, ಅಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು
ಜಗದ್ಗುರುಗಳ ಯುಗಮಾನೋತ್ಸವ ಕಾರ್ಯಕ್ರಮವನ್ನು ಇತಿಹಾಸ ಸೃಷ್ಟಿಸೋಣ

ಪ್ರಾಚೀನ ವೀರಶೈವ ಧರ್ಮದ ಸಂಸ್ಥಾಪನಾಚಾರ್ಯರು ಆದಿ ಜಗದ್ಗುರು ಪಮಚಚಾರ್ಯರು. ಜಗತ್ತಿನ ಕಲ್ಯಾಣಕ್ಕಾಗಿಯೇ ಪರಶಿವನ ಅದೇಶದಂತೆ ಆದಿ ಜಗದ್ಗುರು ಪಂಚಾಯಾಚರ್ಯರು ಶಿವನ ಸದ್ಯೋಜತ , ವಾಮದೇವ, ಆಘೋರ, ತತ್ಪುರುಷ , ಮತ್ತು ಈಸಾನ ಎಂಬ ಪಂಚಮುಖಗಳಿAದ ಅವಿರ್ಭವಿಸಿದವರು. ವೇದಾಗಮೋಕ್ತ ವೀರಶೈವ ಧರ್ಮದಲ್ಲಿ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳ ತತ್ವಸಿದ್ದಾಂತದ ಸಂವಿಧಾನ ರೂಪಿಸಿ ಮನುಕುಲವನು ಉದ್ದರಿಸದವರು.ಈ ತತ್ವಸಿದ್ಧಾಂತಗಳನ್ನು ಜನಮನಕ್ಕೆ ಮುಟ್ಟಿಸುವದಕ್ಕಾಗಿ ದೇಶಾದ್ಯಂತ ತಮ್ಮ ಪೀಠಗಳ ಸಾವಿರಾರು ಶಾಖಾ ಮಠಗಳನ್ನು ಸ್ಥಾಪಿಸಿದರು ಎಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಡೋಣೂರು ಚಾನೂಕೋಟಿ ಮಠದ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಷ||ಬ್ರ||ಶ್ರೀ ಡಾ. ಸಿದಲಿಂಗ ಶಿವಾಚಾರ್ಯ ಸ್ವಾಮಿಗಳವರ ಷಷ್ಟಿ ಸಂಭ್ರಮ ಪೂರ್ವಾಭಾವಿ sಸಭೆಯಲ್ಲಿ ವಾಲ್ ಪೋಸ್ಟರ್, ಬ್ಯಾನರ್,ರಶೀಧಿ, ಅಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಆದಿ ಜಗದ್ಗುರು ಪಂಚಾಚಾರ್ಯರ ಯುಗಮನೋತ್ಸವವನ್ನು ಪ್ರತಿ ಸಂವತ್ಸರದ ಚೈತ್ರ ಶುದ್ದ ಪಂಚಮಿಯAದು ಆಚರಿಸುತ್ತಾ ಬರಲಾಗಿದೆ. ಕರ್ನಾಟಕ, ಮಹಾರಾಷ್ಟç ಮತ್ತು ದೇಶದ ವಿವಿದ ಪ್ರಾಂತ್ಯಗಳಲ್ಲಿ ನೆರವೇರಿದೆ. ಇಂತಹ ಐತಿಹಾಸಿಕ ಸಮಾರಂಭವನ್ನು ೨೦೨೫ರ ಮಾರ್ಚ ೨೦ ರಿಂದ ಎಪ್ರಿಲ್ ೦೩ ರವರೆಗೆ ಶ್ರೀ ಕ್ಷೇತ್ರ ಕೊಟ್ಟೂರಿನಲ್ಲಿ ನೇರವೇರಿಸಲು ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಚಾರ್ಯ ಭಗವತ್ಪಾದರಿಂದ ಆದೇಶಿತರಾದ ಕೊಟ್ಟೂರು ಕಟ್ಟಿಮನಿ ದೈವದವರು ಅತ್ಯಂತ ಭಕ್ತಿ ಗೌರವದಿಂದ ಆಚರಿಸಲು ನಿರ್ಣಯಿಸಿದ್ದಾರೆ . ಇದೇ ಸಂದರ್ಭದಲ್ಲಿ ಡೋಣೂರು ಶ್ರೀ ಚಾನುಕೋಟಿ ಮಠಾಧ್ಯಕ್ಷರಾದ ಷ||ಬ್ರ|ಶ್ರೀ ಡಾ|| ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳವರಿಗೆ ೬೦ ಸಮವತ್ಸಗಳು ಪೂರ್ಣಗೊಂಡಿಉವುದರಿAದ ಷಷ್ಟಬ್ದಿ ಸಂಭ್ರಮ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದಾರೆ ಎಂದರು.
ಕೊಟ್ಟೂರು ಒಂದು ಸಾಂಸ್ಕೃತಿಕ ಗರಿ, ಧಾರ್ಮಿಕ, ವಾಣಿಜ್ಯ ಹಾಗೂ ಶೈಕ್ಷಣಿಕವಾಗಿ ಪ್ರಸಿದ್ದಿ ಪಡೆದ ನಗರ, ಪಂಚ ಗಣಾಧೀಶ್ವರಲ್ಲಿ ಒಬ್ಬರಾದ ಶ್ರೀಗುರು ಕೊಟ್ಟೂರೇಶ್ವರರ ಹಾಗೂ ಪಂಚ ಪೀಠಗಳಲ್ಲಿ ಒಂದಾದ ಶ್ರಿಮದ್ ಉಜ್ಜಯಿನಿ ಪೀಠದ ಸೇವಯನ್ನು ನೆರವೇರಿಸಿಕೊಂಡು ಬಂದ ನಗರ ಇಂತಹ ಐತಿಹಾಸಿಕ ನಗರದಲ್ಲಿ ಮೊದಲ ಬಾರಿಗೆ ಶ್ರೀಜಗದ್ಗುರು ಪಂಚಪೀಠಾಧಿಶ್ವರರ ದಿವ್ಯ ಸಾನಿದ್ಯದಲ್ಲಿ , ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಆದಿ ಜಗದುಗರು ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಶಿವಾಚಾರ್ಯರ  ಅಡ್ಡಪಲ್ಲಕಿ ಉತ್ಸವ ಜರುಗಲಿದೆ. ಕಾರ್ಯಕ್ರಮದಲ್ಲಿ ಪಂಚಪೀಠಗಳ ಜಗದ್ಗುರುಗಳು ಬಾಗವಹಿಸಲಿದ್ದಾರೆ. ಎಂದರು.
ಕಾರ್ಯಕ್ರಮದಲ್ಲಿ ಶಾಸಕ ನೇಮಿರಾಜನಾಯ್ಕ ಮಾತನಾಡಿ ಮಾರ್ಚನಲ್ಲಿ ನಡೆಯು ಕಾರ್ಯಕ್ರಮವನ್ನು ಹಬ್ಬದಂತೆ ನಡೆಸೋಣ. ಪ್ರತಿಯೊಬ್ಬರ ಯಾವುದೆ ಪಕ್ಷ ಎನ್ನದೆ ಭಾಗವಹಿಸಿ ಕಾಯಕ್ರಮವನ್ನು ಯಶಸ್ವಿಗೊಳಿಸಬೇಕು. ಇದರಲ್ಲಿ ರಾಜಕೀಯ ತರಬೇಡಿ ಎಲ್ಲರೂ ಕೂಡಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ೧೪ ದಿನಗಳ ಕಾಲ ನಡೆಸಿ ಇತಿಹಾಸ ಸೃಷ್ಟಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡೋಣೂರು ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ, ನಂದಿಪುರದ ಮಹೇಶ್ವರ ಸ್ವಾಮಿಜಿ, ಬೆಣ್ಣಿಹಳ್ಳಿ ಸ್ವಾಮೀಜಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎA.ಜೆ. ಹರ್ಷವರ್ಧನ್, ಮಾಜಿ ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷ ಪಿ.ಹೆಚ್.ದೊಡ್ಡರಾಮಣ್ಣ, ಬಿ.ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಈಶ್ವರಗೌಡ, ಪ.ಪಂ ಅಧ್ಯಕ್ಷೆ ಬಿ.ರೇಖ, ಪ.ಪಂ ಉಪಾಧ್ಯಕ್ಷ ಜಿ.ಸಿದ್ದಯ್ಯ, ಬಿ.ಎಸ್.ವೀರೇಶ್, ಬದ್ದಿ ಮರಿಸ್ವಾಮಿ, ಅಡಕಿ ಮಂಜುನಾಥ, ಚಿರಿಬಿ ಕೊಟ್ರೇಶ್, ಕರಡಿ ಕೊಟ್ರಯ್ಯ, ಬೂದಿ ಶಿವಕುಮಾರ್, ಗುರುಬಸವರಾಜ, ಜಿ.ಕಾರ್ತಿಕ್, ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ಬಸಾಪುರ ಪಂಚಾಪತಿ, ಚಾಪಿ ಚಂದ್ರಪ್ಪ, ಮಂಜುನಾಥ ಗೌಡ, ಅಜ್ಜನಗೌಡ (ಕರಿಬಸವನಗೌಡ) ಮತ್ತಿತರರು ಭಾಗವಹಿಸಿದ್ದರು.

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.