Breaking News

ಅಂಜನಾದ್ರಿ ಬೆಟ್ಟದ ಶ್ರೀಆಂಜನೇಯದೇವಸ್ಥಾನ ಹುಂಡಿಯಲ್ಲಿ 27,71,761/- ರೂ ಗಳು ಸಂಗ್ರಹ

27,71,761/- was collected in Anjana Devasthan Hundi of Anjanadri Hill.

ಗಂಗಾವತಿ, ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ
ಇಂದು ದಿ. 05/01/2024 ರಂದು ಮಾನ್ಯ ಶ್ರೀ ವಿಶ್ವನಾಥ ಮುರಡಿ ಗ್ರೇಡ್ -1 ತಹಶೀಲ್ದಾರರು ಗಂಗಾವತಿ ಇವರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ. 14-12-2023 ರಿಂದ 05-01-2024 ರವರೆಗೆ ಒಟ್ಟು 22 ದಿನಗಳ ಅವಧಿಯಲ್ಲಿ) ಒಟ್ಟು ರೂ. 27,71,761/- ರೂ ಗಳು ಸಂಗ್ರಹವಾಗಿರುತ್ತದೆ. ಎರಡು ವಿದೇಶಿ ನೋಟು (ನೇಪಾಳ) ಮತ್ತು 3 ವಿದೇಶಿ ನಾಣ್ಯ ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.

ಈ ಸಂದರ್ಭದಲ್ಲಿ ಮಹಾಂತಗೌಡ ಗೌಡರ ಗ್ರೇಡ್-2 ತಹಶೀಲ್ದಾರರು, ಶಿರಸ್ತೇದಾರಾದ
ಮೈಬೂಬಅಲಿ, ಕೃಷ್ಣವೇಣಿ, ನರ್ಮದಾ ಬಾಯಿ ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್ ,ಮಹೇಶ್ ದಲಾಲ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ ಅನ್ನಪೂರ್ಣ ಮಹ್ಮದ್ ರಫೀಕ್ , ಸುಧಾ, ಶ್ರಿರಾಮ ಜೋಷಿ ಗಾಯತ್ರಿ ಕವಿತಾ ದ್ವಿ.ದ.ಸ, ಹನುಮೇಶ ಪೂಜಾರ ಮಂಜುನಾಥ ದಮ್ಮಾಡಿ ಗ್ರಾಮ ಆಡಳಿತ ಅಧಿಕಾರಿ,ಮತ್ತು ಗಂಗಾವತಿ,ವೆಂಕಟಗಿರಿ ,ಮರಳಿ ಗ್ರಾಮ ಆಡಳಿತ ಅಧಿಕಾರಿಗಳು , ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಸುನಿಲ್ , ರಾಜಶೇಖರ್, ಪೋಲಿಸ್ ಸಿಬ್ಬಂದಿ , ಮತ್ತು ಪ್ರವಾಸಿ ಮಿತ್ರ ಹನುಮಂತಪ್ಪ, ಬೇನಾಳಪ್ಪ ಸಿಬ್ಬಂದಿಗಳು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು

ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ .14/12/2023 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ ರೂ.20,36,465./- ಸಂಗ್ರಹವಾಗಿತ್ತು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.