Breaking News

ಪ್ರತಿಯೊಬ್ಬರ ಮನಸ್ಸು ಶುದ್ದವಾಗಿರಬೇಕು. ಅಂದಾಗ ಅಭಿವೃದ್ಧಿ ಹೊಂದಲು ಸಾಧ್ಯ. ಸೋಮಯ್ಯ ದೊಡ್ಡಮನಿ

Everyone’s mind should be pure. Then it is possible to develop. Somaiya Doddamani

ಜಾಹೀರಾತು

ರೋಣ:ಗ್ರಾಮಸ್ಥರ ಸಹಕಾರದಿಂದ ಇಂತಹ ಸಮಾಜ ಕಾರ್ಯಗಳು ನಡೆಯಲು ಸಾಧ್ಯ.ಭಾರತ ಹಾಗೂ ನಾಡಿನ ಸಂಸ್ಕೃತಿಯನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು.ಶಿಕ್ಷಣ ಒತ್ತು ಕೊಟ್ಟು ಮಕ್ಕಳಿಗೆ ಶಿಕ್ಷಣ ನೀಡುವುದು ತಂದೆ ತಾಯಿಗಳ ಕರ್ತವ್ಯ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ತಾಲೂಕಿನ ಜಕ್ಕಲಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿಶ್ರೀ ಕೆಂಚಮ್ಮ ಮತ್ತು ಮರಿಯಮ್ಮ ದೇವಿ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಆಕಾಶವಾಣಿ ಕಲಾವಿದರು ಸೋಮಯ್ಯ ದೊಡ್ಡಮನಿ ಮಾತನಾಡಿ ಪ್ರತಿಯೊಬ್ಬರೂ ಮನಸ್ಸು ಶುದ್ದವಾಗಿರಬೇಕು.ಸಮಾಜದಲ್ಲಿ ಒಳ್ಳೆಯ ಕಾರ್ಯಗಳಿಗೆ ಪ್ರತಿಯೊಬ್ಬರಿಗೂ ಪ್ರೋತ್ಸಾಹ ನೀಡಬೇಕು.ಎಲ್ಲಾ ಒಂದೇ ಎಂಬ ಭಾವನೆ ಬಂದಾಗ ಮಾತ್ರ ಸಮಾನತೆಯಿಂದ ಇರಲು ಸಾಧ್ಯ.ಯುವಕರು ತಂದೆ ತಾಯಿಯನ್ನು ಗೌರವಿಸಬೇಕು.ಪುರುಷರ ಹಿಂದೆ ಮಹಿಳೆಯ ಪಾತ್ರ ಬಹಳ ಅಗತ್ಯ.ದಿನನಿತ್ಯ ತಾಯಿಯನ್ನು ಶ್ರಮಿಸಬೇಕು.
ಎಲ್ಲರೂ ಸಹಬಾಳ್ವೆಯಿಂದ ಬಾಳಬೇಕು ಎಂದು ಮಾತನಾಡಿದರು.

ಮರಳುಸಿದ್ದೇಶ್ವರ ಪುಣ್ಯಾಶ್ರಮದ ಶಿವಶರಣ ಗದಿಗೆಪ್ಪಜ್ಜನವರು ಮಾತನಾಡಿ ಮಾನವ ಧರ್ಮ ದೊಡ್ಡದು.ಯುವಕರು ಉತ್ತಮ ರೀತಿಯಲ್ಲಿ ಧರ್ಮದ ಹಾದಿಯಲ್ಲಿ ಬದುಕಬೇಕು.ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಹಿರಿಯರಿಗೆ ಗೌರವ ನೀಡಬೇಕು.
ಸಮಾಜದಲ್ಲಿ ಯಾರು ದೊಡ್ಡವರಲ್ಲ,ಸಂಸ್ಕಾರಯುತ ಹಾಗೂ ಪ್ರಜ್ಞೆಯಿಂದ ಬಾಳಿ,ಯುವಕರು ತಂದೆ ತಾಯಿ ಭೂಮಿಗೆ ಭಾರವಾಗಿ ಬದುಕಬೇಡಿ ಎಂದು ಆಶಿರ್ವಚನ ನೀಡಿದರು.

ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಮರಳು ಸಿದ್ದೇಶ್ವರಮಠದ ಮರಳುಸಿದ್ದೇಶ್ವರ ಮಹಾಸ್ವಾಮಿಗಳು,ಅರ್ಚಕರು ಮುತ್ತಪ್ಪ ಪೂಜಾರ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಯಲ್ಲಪ್ಪ ಮಾದರ,ಅಶೋಕ ಕಡಗದ,ಶರಣಪ್ಪ ಬೂದಿಹಾಳ,ಶಿವನಾಗಪ್ಪ ದೊಡ್ಡಮೇಟಿ,ಅನಿಲಕುಮಾರ ಹೊಸಮನಿ,ಶೇಖಪ್ಪ ಮಾರನಬಸರಿ, ಬಸವರಾಜ ರಂಗಣ್ಣನವರ, ಯಮನೂರಸಾಬ ನದಾಫ,ಗಂಗವ್ವ ಜಂಗಣ್ಣವರ,
ಪುಂಡಪ್ಪ ಮಡಿವಾಳರ,ಚನ್ನಬಸಪ್ಪ ಸೂಡಿ,
ಸುರೇಶ,ರಂಜಾನಸಾಬ ಕಳ್ಳಿಗುಡಿ,ಫಕೀರಪ್ಪ ಮಾದರ,ಅಂದಪ್ಪ ಮಾದರ,ಅಶೋಕ ಮಾದರ,ಯಲ್ಲಪ್ಪ ಮಾದರ,ಅಂದಪ್ಪ ಮಾದರ,ಹನುಮಂತ ಮಾದರ ಸೇರಿದಂತೆ ಗುರು-ಹಿರಿಯರು ಹಾಗೂ ಯುವಕರು ಹಾಜರಿದ್ದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.