Indian independence has a unique place in world history: MLA K Nemiraja Naik
“ದೇಶದ ಸ್ವತಂತ್ರಕ್ಕಾಗಿ ಅನೇಕ ಮಹನೀಯರು ತಮ್ಮ ತ್ಯಾಗ, ಬಲಿದಾನಗಳನ್ನು ನೀಡಿದ್ದರ ಪ್ರತಿಫಲ ನಾವು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ ನೇಮಿರಾಜ ನಾಯ್ಕ್ ಹೇಳಿದರು.”
ಕೊಟ್ಟೂರು: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಏರ್ಪಡಿಸಿದ್ದ 78ನೇ ಸ್ವಾತಂತ್ರೋತ್ಸವದಲ್ಲಿ ಕೆ ನೇಮಿರಾಜ ನಾಯ್ಕ್ ಅವರು ಅಧ್ಯಕ್ಷತೆ ವಹಿಸಿ ರಾಷ್ಟ್ರ ಧ್ವಜ ಭಾವುಟ ಹಾರಿಸಿ ರಾಷ್ಟ್ರ ಗೀತೆ ನೆರವೇರಿಸಿ ಪಥ ಸಂಚಲನದಲ್ಲಿ ಗಣ್ಯರೊಂದಿಗೆ ಪಾಲ್ಗೊಂಡರು.
ನಂತರ ವೇದಿಕೆಯಲ್ಲಿ ಮಾತನಾಡಿದರು, ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ಒಂದೇ ವೇದಿಕೆ ಹಲವು ಬೇಡಿಕೆ ಈಡೇರಿಕೆಗಳು ಮತ್ತು ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜಗತ್ತಿನ ಇತಿಹಾಸದಲ್ಲಿ ಭಾರತೀಯ ಸ್ವಾತಂತ್ರ್ಯ ಕ್ಕೆ ವಿಶಿಷ್ಟ ಸ್ಥಾನವಿದೆ. ಅದು ನೂರು ವರ್ಷಗಳ ಕಾಲ ಲಕ್ಷಾಂತರ ಭಾರತೀಯರು ನಡೆಸಿದ ನಿರಂತರ ಹೋರಾಟ, ತ್ಯಾಗ, ಬಲಿದಾನದ ಫಲವಾಗಿದೆ. ಹಾಗಾಗಿ ನಾವು ಪಡೆದ ಸ್ವಾತಂತ್ರ್ಯ ಅನನ್ಯ ಮೌಲ್ಯಗಳ ಸಂಕೇತವಾಗಿದೆ. ಆ ಮೌಲ್ಯಗಳಾದ ರಾಷ್ಟ್ರಾಭಿಮಾನ, ದೇಶಕ್ಕಾಗಿ ಸಮರ್ಪಣ ಮನೋಭಾವ, ಕಾಯಕಶೀಲತೆ,ಪ್ರಮಾಣಿಕತೆ, ಸತ್ಯ, ಶಾಂತಿ, ಅಹಿಂಸೆ ಮುಂತಾದವುಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಬೇಕಾದ ಅಗತ್ಯವಿದೆ.ಎಂದರು
ಹಾಗೆಯೇ ಮಾಜಿ ಸೈನಿಕರು : ರಾಜಶೇಖರ ಶೆಟ್ಟಿ, ಅಜ್ಜಪ್ಪ, ಮೈದೂರು ಶಿವಣ್ಣ,ಕೊರವತ್ತಿ ರಾಜಕುಮಾರ್, ಬೆಣ್ಣಿ ಹಳ್ಳಿ ಬಸವರಾಜ್, ಸ್ವತಂತ್ರ ಹೋರಾಟಗಾರರ : ಕುಟುಂಬದವರಿಗೆ ಹಳ್ಳಿ ಕಟ್ಟೆ ನಾಗಮ್ಮ ಗಂಡ ಲೇಟ್ ಕೊಟ್ರುಬಸಪ್ಪ 101 ವರ್ಷ ಮತ್ತು ಪತ್ರಿಕಾ ರಂಗದಲ್ಲಿ : ತಗ್ಗಿನಕೇರಿ ಕೊಟ್ರೇಶ್ ಬಳ್ಳಾರಿ ಬೆಳಗಾಯಿತು ಪತ್ರಿಕೆ, ಗಡ್ಡೆರ್ ರವಿಕುಮಾರ್ ವಿಜಯವಾಣಿ ಪತ್ರಿಕೆ , ಸಾಧಕರನ್ನು ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು. ಈ ವೇಳೆ ತಹಸಿಲ್ದಾರ್ ಅಮರೇಶ್ ಜಿಕೆ,ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎ ನಸ್ರುಲ್ಲಾ, ಪಟ್ಟಣ ಪಂಚಾಯಿತಿ ಸರ್ವಸದಸ್ಯರು, ವಿವಿಧ ಸಮಾಜದ ಗಣ್ಯರು, ಸಂಘಟನೆಕಾರರು, ವಿದ್ಯಾರ್ಥಿಗಳು , ಸಾರ್ವಜನಿಕರು ಉಪಸ್ಥಿತರಿದ್ದರು.
ಪತ್ರಕರ್ತ ಅಣ್ಣಾನ ಅಗಲಿಕೆಯ ಸ್ಥಾನ ತುಂಬಿದ ತಮ್ಮ ಪತ್ರಿಕಾ ರಂಗದಲ್ಲಿ ಸಮಾಜಮುಖಿ ವರದಿ ಬಿತ್ತರಿಸಿ ಕೆಲಸವನ್ನು ಮಾಡುತ್ತಾ ತನ್ನನ್ನು ಗುರುತಿಸಿಕೊಂಡ ತಗ್ಗಿನಕೇರಿ ಕೊಟ್ರೇಶ್ ಅವರನ್ನು ತಾಲೂಕು ಆಡಳಿತ ವತಿಯಿಂದ ಅಗಷ್ಟ 15 ರಂದು 78ನೇ ಸ್ವಾತಂತ್ರ್ಯ ದಿನಾಚರಣೆ ದಂದು ಸನ್ಮಾನಿಸಲಾಯಿತು . ಇದು ನಮಗೆ ಸಂತೋಷ ತಂದಿದೆ ಎಂದು ಹಸಿರು ಹೊನಲು ತಂಡ ಹೇಳಿದರು