Appreciation of director Subhaschandra Thippashetti for the work of the association
ಗಂಗಾವತಿ ; ರೈತರು ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ್ದರಿಂದ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 10,50,554 ರೂಪಾಯಿ ಲಾಭಗಳಿಸಲು ಸಹಾಯಕವಾಗಿದೆ ಎಂದು ಸಂಘದ ನಿರ್ದೇಶರಾದ ಸುಭಾಷ್ ಚಂದ್ರ ತಿಪ್ಪಶೆಟ್ಟಿ ಅವರು ಹೇಳಿದರು
ಅವರು ತಾಲೂಕಿನ ಮರಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮತ ಇದರ 73ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು
ಸಹಕಾರ ಸಂಘದಲ್ಲಿ 16 ಕ್ಕೂ ಹೆಚ್ಚು ರೈತರು ಯಶಸ್ವಿನಿ ಯೋಜನೆ ಲಾಭವನ್ನು ಪಡೆದುಕೊಂಡಿದ್ದಾರೆ. ಅದರಂತೆ ಸುಮಾರು 6 ಕೋಟಿ 44 ಲಕ್ಷಗಳ ರೂ. ದುಡಿಯುವ ಬಂಡವಾಳ ಹೊಂದಿದ್ದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಲಾಭ ಗಳಿಸುವಲ್ಲಿ ಸಂಘ ಮುನ್ನಡೆ ಸಾಧಿಸಲು ಸಹಕಾರಿಯಾಗಿರುತ್ತದೆ. ಆದ್ದರಿಂದ ರೈತ ಬಾಂಧವರು ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಪಡೆದು ಸಂಘದಲ್ಲಿ ವ್ಯವಹರಿಸಿ ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ
ಲಿಂಗಪ್ಪ ಹೇಮಗುಡ್ಡ ವಹಿಸಿದ್ದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಹಂಪಮ್ಮ ಬಸಣ್ಣ ಅರಳಹಳ್ಳಿ , ನಿರ್ದೇಶಕರಾದ ಚನ್ನಬಸವ ಕಲ್ಗುಡಿ, ಶರಣಪ್ಪ ಕರಿಶೆಟ್ಟಿ, ವೀರಣ್ಣ, ಫಕೀರಪ್ಪ , ಶರಣಬಸವ, ನಾಗರಾಜ್ ಚಳ್ಳೂರು, ಪಿಡ್ಡಪ್ಪ ಪದ್ಮರಾಣಿ, ಹೊನ್ನೂರ್ ಬಿ ಯಮನುರ್ ಸಾಬ್, ಸಂಘದ ನಿಕಟಪೂರ್ವ ಕಾರ್ಯದರ್ಶಿಯಾದ ಎಸ್ .ಎಮ್. ಗೌಡ ಸಂಘದ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಬರಗೂರ್ ಸಿಬ್ಬಂದಿಗಳಾದ ಬಾಲಪ್ಪ ಮಡಿವಾಳ .ಲಿಂಗರಾಜು
ರೈತರಾದ ಬೆಟ್ಟಪ್ಪ ಕರಿಶೆಟ್ಟಿ ಹೊನ್ನುರ್ ಸಾಬ್ ಜಿನ್ನದ. ಚಂದ್ರಣ್ಣ ಕಲ್ಲಗುಡಿ, ವಿರೇಶಪ್ಪ ಲಕೋಟಿ. ಬೆಟ್ಟಪ್ಪ ನಾಯಕ್, ರಮೇಶ್ ಕುಲಕರ್ಣಿ, ವೀರಭದ್ರಪ್ಪ ಹೇಮಗುಡ್ಡ, ಲಿಂಗಪ್ಪ ತಿಪ್ಪಶೆಟ್ಟಿ, ದೊಡ್ಡ ನಾಯಕ, ಮಾರೆಪ್ಪ ಗಂಗಾಮತ, ಬುಡ್ಡ ಸಾಬ್, ರಾಮಕೃಷ್ಣ ಕಲ್ಗುಡಿ, ಶ್ರೀನಿವಾಸ್ ಕಲ್ಗುಡಿ , ಕೃಷ್ಣಮೂರ್ತಿ, ಬಸವರಾಜ್.ಎ, ದೇವಪ್ಪ ಹೂಗಾರ್ ಇನ್ನಿತರರು ಹಾಜರಿದ್ದರು