Breaking News

ಯಶಸ್ವಿಯಾಗಿ ನಡೆದ ಜನತದರ್ಶನಕಾರ್ಯಕ್ರಮ

A successful Janatadarshan program


ವರದಿ:ಬಂಗಾರಪ್ಪ ಸಿ ಹನೂರು .
ಹನೂರು : ಸರ್ಕಾರದಿಂದ ಚಂಗಡಿ ಗ್ರಾಮವನ್ನು ಸ್ಥಳಾಂತರ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಆದರೆ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಚೆಂಗಡಿ ಕರಿಯಪ್ಪ ತಿಳಿಸಿದರು . ಇದಕ್ಕೆ ಪ್ರತ್ಯುತ್ತರ ನೀಡಿದ .ಶಾಸಕರು ,ಜಿಲ್ಲಾಧಿಕಾರಿ ಹಾಗೂ ಡಿ ಸಿ ಎಫ್ ಸಂತೋಷ್ ಕುಮಾರ್ ಈ ಯೋಜನೆಯು ಈಗಾಗಲೇ ಪ್ರಗತಿಯಲ್ಲಿದೆ ಅಲ್ಲದೆ ಸರ್ಕಾರದಿಂದ ಅನುಧಾನ ಬಿಡುಗಡೆಗೆಗಾಗಿ ಕಾಯುತ್ತಿದ್ದೆವೆ , ಶಾಸಕರು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು .
ಹನೂರು ಪಟ್ಟಣದಲ್ಲಿನ ಅಂಬೇಡ್ಕರ್ ಭವನದಲ್ಲಿ ಅಯೋಜಿಸಲಾಗಿದ್ದ ಜನತಾ ದರ್ಶನ ಭಾಗವಹಿಸಿ ಮಾತನಾಡಿದ ಶಾಸಕ ಎಮ್ ಆರ್ ಮಂಜುನಾಥ್ ರವರು ಸರ್ಕಾರದ ಮಟ್ಟದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಂಡಿದ್ದು ರಸ್ತೆ ಡಾಂಬರಿಕರಣಕ್ಕೆ ಸರ್ಕಾರದಿಂದ ಹದಿನೆಂಟು ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ , ನಮ್ಮ ಭಾಗದ ಹಸುಗಳಿಗೆ ಟ್ಯಾಗ್ ನೀಡುತ್ತಿದ್ದೆವಿ . ಬೆಟ್ಟದ ಮೇಲಿನ ಊರುಗಳಿಗೆ ರಸ್ತೆ ಮಾಡಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ ವಿದ್ಯುತ್ ಗಳನ್ನು ಪೂರ್ಣ ಪ್ರಮಾಣದಲ್ಲಿ ನೀಡಲು ಸರ್ಕಾರದಿಂದ ಕ್ರಮವಹಿಸಲಾಗಿದೆ .ಪ್ರೂಟ್ಸ್ ನವೀಕರಣ ಕಾರ್ಯ ಮಾಡಲಾಗಿದೆ .ಗೃಹಲಕ್ಷ್ಮಿ ಯೋಜನೆಯನ್ನು ಮನೆಮನೆಗೆ ತೆರಳಿಪ್ರಾರಂಬಿಸಲಾಗುವುದು .ದನ ಕರುಗಳಿಗೂ ಸಹ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಪಟ್ಟಣದ ಆರ್ ಎಸ್ ದೊಡ್ಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮಾದಪ್ಪ ಎಂಬುವವರು ಮನವಿ ಮಾಡಿದರು .
ಹನೂರು ಪಟ್ಟಣದಲ್ಲಿ ಪೌರಕಾರ್ಮಿಕರು ಎಂದು ನಖಲಿ ಹಾಜರಾತಿ ಮಾಡಲಾಗಿದೆ ಸರ್ಕಾರದ ಅಧಿನ ಕಾರ್ಯದರ್ಶಿಗೆ ಪತ್ರ ಬರೆದಿದ್ದು ಇದರ ಜೊತೆಗೆ ಹಲವಾರು ಕಾರ್ಮಿಕರು ಬೋಗಸ್ ಕೆಲಸ ಮಾಡಿದ್ದು ಅನಾಮೆದೆಯ ಅರ್ಜಿಗಳಿಗೆ 2019 _ರಲ್ಲಿ ಮಾನ್ಯತೆ ಇಲ್ಲವೆಂದು .
ದಿನಗೂಲಿ ನೌಕರರಿಗೆ ನೀಡಿ ದ ಭತ್ಯೆ ನೀಡಿದ ಸರಕಾರಿ ಹಣ ಪೋಲಾಗಿದೆ ಎಂದು ಸಾಕಷ್ಟು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಮಾಹಿತಿನ್ನು ಪ್ರಕಾಶ್ ಎಂಬುವವರು ನೀಡಿದರು . ಇದಕ್ಕೆ ಪತ್ಯುತ್ತರ ನೀಡಿ ಜಿಲ್ಲಾಧಿಕಾರಿಗಳು ನೀವು ಕಛೇರಿಯಲ್ಲಿ ಬೇಟಿ ನಿಡಲು ಸಮಯ ಕೊಟ್ಟರು .

ಇದೇ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗ ಅಧಿಕಾರಿಗಳಾದ ಮಹೇಶ್ . ಪೋಲಿಸ್ ಅಧಿಕಾರಿಗಳು ,ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು,ತಹಾಸಿಲ್ದಾರ್ ಗುರುಪ್ರಸಾದ್ ,ಹಲವು ರೈತ ಸಂಘಗಳು ವಿವಿಧ ಸಂಘ ಸಂಸ್ಥೆಗಳು .ಸಾರ್ವಜನಿಕರು ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ಜ್ಞಾನ ವಿಕಾಸ ಸಂಯೋಜಕೀಯರು ಹಮ್ಮಿಕೊಂಡ ಸಭೆ ಯಶಸ್ವಿ

ಗಂಗಾವತಿ: ತಾಲೂಕಿನ ಜ್ಞಾನ ಸಂಯೋಜಕೀಯರ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯ  ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ  ಪ್ರಕಾಶ ರಾವ್ ದೀಪ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.