SC demands cancellation of false caste certificate
ವಿಜಯಪುರ: ರಾಜ್ಯದಲ್ಲಿ ಭೋವಿ (ವಡ್ಡರ್) ಸಮುದಾಯಕ್ಕೆ ಸೇರದ ಬೋವೇರ, ಭೋಯಿ, ರಾಜ ಭೋಯಿ ವರ್ಗದ ಜನರಿಗೆ ನೀಡಿರುವ ಮತ್ತು ನೀಡುತ್ತಿರುವ ಎಸ್ಸಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ರದ್ದು ಪಡಿಸಬೇಕು ಆಗಬೇಕೆಂದು ಅಂಬೇಡ್ಕರ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಡಾ. ಅರ್ಜುನ ಬಂಡಿ ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಪ್ರವರ್ಗ 1 ರಲ್ಲಿ ಬರುವ ಕೆಲ ಸಮುದಾಯದ ಜನರು ಸುಳ್ಳು ದಾಖಲೆ ಸೃಷ್ಟಿಸಿ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದು ಎಸ್ಸಿ ವರ್ಗದ ಜನರ ಹಕ್ಕುಗಳನ್ನು ಕಬಳಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಅದಕ್ಕಾಗಿ ಎಸ್ಸಿ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡುತ್ತಿರುವವರ ಮತ್ತು ಪಡೆಯುತ್ತಿರುವವರ ವಿರುದ್ಧ ಕಾನೂನು ಕಠಿಣ ಶಿಕ್ಷೆ ಕೊಡಬೇಕು ಹಾಗು ಸಮಾಜದಲ್ಲಿ ಆಗುತ್ತಿರುವ ಗೊಂದಲ ತಪ್ಪಿಸಬೇಕೆಂದು ಡಾ. ಅರ್ಜುನ ಬಂಡಿ ಸರಕಾರಕ್ಕೆ ಪತ್ರಿಕೆ ಮೂಲಕ ಮನವಿ ಮಾಡಿದರು.