
ವಾರದೊಳಗೆ ಕುಂದು ಕೊರತೆ ನೀಗಿಸಲು ದಿನಾಂಕ ನಿಗದಿ: ಡಾ ಸುರೇಶ್ ಇಟ್ನಾಳ್

Date set to resolve shortage within a week: Dr Suresh Itnal
ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಕೊಪ್ಪಳ ಜಿಲ್ಲಾ ಒಕ್ಕೂಟದ ಒಂದು ದಿನದ ಹೋರಾಟದ ಮನವಿ ಪತ್ರವನ್ನು ಜಿಲ್ಲಾ ಆಡಳಿತದ ಮುಂಬಾಗದಲ್ಲಿ ಜಿಲ್ಲಾಧಿಕಾರಿಗಳು ಮನವಿ ಪತ್ರ ಸ್ವೀಕರಿಸುತ್ತಿರುವದು.
ಕೊಪ್ಪಳ: ಜಿಲ್ಲಾ ವಿಕಲಚೇತನರ (ದಿವ್ಯಾಂಗರ) ಕುಂದು ಕೊರತೆಗಳ ಪರಿಶಿಲನಾ ಸಭೆಯನ್ನು ಒಂದು ವಾರದೊಳಗೆ ದಿನಾಂಕ ನಿಗದಿ ಪಡಿಸಿ, ವಿಶೇಷ ಚೇತನರ ಮೂಲಭೂತ ಸಮಸ್ಯಗಳ ಕುರಿತು ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಸುರೇಶ್ ಇಟ್ನಾಳ್ ಹೇಳಿದರು.
ಅವರು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಕೊಪ್ಪಳ ಜಿಲ್ಲಾ ಘಟಕದವರು ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಒಂದು ದಿನದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.
ಇದೆ ವೇಳೆ ಕರೋ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ಮಾತನಾಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿಶೇಷ ಚೇತನರ ಕುಂದು ಕೊರತೆ ಸಭೆಗಳು ಹತ್ತಾರು ವರ್ಷಗಳಿಂದ ನಡೆಯುತ್ತಿಲ್ಲ, ವಿಕಲಚೇತನ ನಿರುದ್ಯೋಗಿಗಳಿಗೆ ಸ್ಥಳೀಯ ಕಂಪನಿಗಳು ವಿಕಲಚೇತನರಿಗೆ ಉದ್ಯೋಗ ಮೀಸಲಾತಿ ನೀಡುತ್ತಿಲ್ಲ, ಸಮಸ್ಯೆ ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಬಳಿಕ ಒಕ್ಕೂಟದ ನಿರ್ದೇಶಕ ಮಂಜುನಾಥ ಹೊಸ್ಕೇರಾ ಮಾತನಾಡಿ ನಮಗೆ ಸಿಗಬೇಕಾದ ಸರಿಯಾಗಿ ಸಿಗುತ್ತಿಲ್ಲ, ಡಿಇಡಿ, ಬಿಇಡಿ ಉನ್ನತ ಶಿಕ್ಷಣ ಪಡೆದ ವಿಕಲಚೇತನ ವ್ಯಕ್ತಿಗಳು ಸಾಮಾನ್ಯ ಕೋಟಾದವರ ಜೊತೆ ಹೋರಾಡ ಬೇಕಾದ ಪರಿಸ್ಥಿತಿ ಇದೆ, ಇದನ್ನು ಪ್ರತ್ಯೇಕ ಮೀಸಲು ಪ್ರಮಾಣ ನಿಗದಿ ಮಾಡುವ ಮೂಲಕ ಪದವಿ ದಿವ್ಯಾಂಗರಿಗೆ ನ್ಯಾಯ ಒದಗಿಸಬೇಕು, ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಬೇಕು, ಮಾಸಿಕ ಪಿಂಚಣಿ ಮೊತ್ತವನ್ನು ಐದು ಸಾವಿರ ರೂಪಾಯಿ ಗೆ ಹೆಚ್ಚಳ ಮಾಡಬೇಕು ಎಂದರು.
ಮನವಿ ಆಲಿಸಿದ ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಹಾಗೂ ದಿವ್ಯಾಂಗರ ಸಮನ್ವಯ ಸಭೆ ಸೇರಿಸುವ ಮೂಲಕ ಜಿಲ್ಲಾ ಹಂತದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಕರೋ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅನ್ವರ್ ಪಾಟೀಲ್, ನಿರ್ದೇಶಕರಾದ ಆದಪ್ಪ ಮಾಲಿಪಾಟೀಲ, ಹುಲುಗಪ್ಪ ಕಾಗೇರಿ ,ಪ್ರದಾನ ಕಾರ್ಯದರ್ಶಿ ವಿರೇಶ ಅಳವಂಡಿ ಪ್ರಮುಖರಾದ ರಾಘವೇಂದ್ರ, ಈಶಪ್ಪ , ಶಾಮೀದ್ ಬಿ, ಹನುಮಾಕ್ಷಿ, ಬಸವರಾಜ ದೇವದುರ್ಗ, ಮಹಾಂತೇಶ ಪಾಟೀಲ, ಮಂಜುನಾಥ ಮಂತ್ರಿ ಸೇರಿದಂತೆ ಇತರರು ಇದ್ದರು.




