Breaking News

ಗಣಿ ಇಲಾಖೆ ನೌರರ ಮೇಲೆ ಹಲ್ಲೆ: ಗಡಿಪಾರಿಗೆ ವಿರುಪಾಕ್ಷಿ ಗೌಡ ನಾಯಕ ಡಿಸಿಗೆ ಮನವಿ

Attack on Mines Department workers: Virupakshi Gowda leader appeals to DC for deportation

ಜಾಹೀರಾತು


ಕೊಪ್ಪಳ : ತಾಲೂಕಿನ ಗೌರಿ ಚಿಕ್ಕಸಿಂಧೋಗಿ ಹಿರೇಹಳ್ಳದಲ್ಲಿ ಅಕ್ರಮವಾಗಿ ಮರಳು ಕಳ್ಳಸಾಗಾಣೆ ತಡೆಯಲು ಮುಂದಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಸಚಿನ್ ಗೌರಿಪುರ ಹಾಗು ಸಿಬ್ಬಂದಿಗಳಿಗೆ ಮಾರಾಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದು ಅಮಾನವೀಯ ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಕೂಡಲೆ ಗಡಿಪಾರು ಮಾಡಬೇಕು ಮತ್ತು ಗಣಿ ಇಲಾಖೆಯ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಧೀರ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಧ್ಯಕ್ಷ ವಿರುಪಾಕ್ಷಗೌಡ ನಾಯಕ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸೌಕರರ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದು, ಪ್ರಮಾಣಿಕ ಕರ್ತವ್ಯ ನಿರ್ವಹಣೆಗೆ ಆತಂಕವುAಟಾಗಿದೆ. ಕಾರ್ಯಾಚರಣೆಗೆ ತೆರಳು ಸಿಬ್ಬಂದಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಆಗಬೇಕಿದ್ದು, ಪೊಲೀಸ್ ಮಾದರಿಯಲ್ಲಿ ಇಲಾಖೆಗೆ ಸಿಬ್ಬಂದಿಯನ್ನು ನೇಮಿಸಬೇಕು, ಇಲಾಖೆಯ ಸಿಬ್ಬಂದಿಗೆ ಧೈರ್ಯವೆ ಇಲ್ಲದಂತಾಗಿದೆ ನೈಜ ಕೆಲಸಕ್ಕೆ ಹಿಂಜರಿಕೆಯಾಗಿದೆ. ಸರಕಾರಕ್ಕೆ ಹೆಚ್ಚಿನ ಆದಾಯ ಗಣಿ ಇಲಾಖೆಯಿಂದ ಬರುತ್ತಿದ್ದು, ಅಕ್ರಮ ತಡೆದರೆ ದ್ವಿಗುಣಗೊಳ್ಳಲಿದೆ. ಕೊಪ್ಪಳ ಜಿಲ್ಲೆಯ ಹಲವಡೆ ಅಕ್ರಮ ನಡೆಯುತ್ತಿದ್ದು ಪರಿಶೀಲನೆಗೆ ತೆರಳಿದ ಸಿಬ್ಬಂದಿಯ ವಾಹನ ಸ್ಪೋಟಿಸಿ ಒರ್ವ ಸಿಬ್ಬಂದಿ ಸಾವು ಹಾಗು ಅನೇಕರಿಗೆ ಗಾಯವಾಗಿರುವ ಘಟನೆ ಇಲ್ಲಿನ ಯಲಬುರ್ಗಾ ತಾಲೂಕಿನಲ್ಲಿ ಜರುಗಿದ್ದು, ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ಆಶ್ಲೀಲ ಪದಗಳ ನಿಂದನೆ, ಹಲ್ಲೆ ಸೇರಿದಂತೆ ಇಂಥ ಪ್ರಕರಣಗಳು ಅತಿ ಹೆಚ್ಚು ಘಟಿಸುತ್ತಿದ್ದು, ಸರಕಾರ ಕೂಡಲೆ ನಿಗಾ ವಹಿಸಿ ರಕ್ಷಣೆಗೆ ಮುಂದಾಗಿ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಜರುಗಿಸಿ ಶಿಕ್ಷೆ ಆಗ್ರಹಿಸಿ
ವೈಜ್ಞಾನಿಕ ತಳಹದಿಯ ಮೇಲೆ ಗಣಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಿ, ರಕ್ಷಣೆಗಾಗಿ ಸಮವಸ್ತç, ಆತ್ಮರಕ್ಷಣೆಗಾಗಿ ಶಾಸ್ತçಸ್ತç, ವಾಹನ ಸೇರಿದಂತೆ ಅಗತ್ಯ ಸೌಲಭ್ಯ ಶೀಘ್ರ ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಲಕ್ಷೀಪತಿ ಇದ್ದರು.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *