Breaking News

ಆಮಿಷಕ್ಕೆಬಲಿಯಾಗದೇ ಮತ ಚಲಾಯಿಸಿಹಿರಿಯ ಸಿವಿಲ್ ನ್ಯಾಧೀಶರಾದ ಶ್ರೀ ರಮೇಶ ಗಾಣಿಗೇರ್

Mr. Ramesh Ganiger, Senior Civil Judge, cast his vote without being lured.

ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಸ್ವೀಪ್ ಕಾರ್ಯಕ್ರಮ

ಗಂಗಾವತಿ : ಸಮೀಪದ ಎಸ್ ಕೆಎನ್ ಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ -2024 ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರಮೇಶ ಗಾಣಿಗೇರ್ ಅವರು ಉದ್ಘಾಟಿಸಿದರು.

ನಂತರ ಮತದಾರರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರರಾದ ಶ್ರೀ ಯು.ನಾಗರಾಜ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಜೊತೆಗೆ ಸಾಂಕೇತಿಕವಾಗಿ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರಮೇಶ ಗಾಣಿಗೇರ್ ಅವರು ಮಾತನಾಡಿ, ಮತದಾನ ಎಂಬುದು ನಾಗರಿಕರ ಗುರುತರ ಜವಾಬ್ದಾರಿಯಾಗಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಎಲ್ಲರೂ ಮತ ಚಲಾಯಿಸಿದರೆ ದೇಶಕ್ಕೆ ಒಳ್ಳೆಯ ನಾಯಕ ಸಿಗುವುದರ ಜೊತೆಗೆ ಒಳ್ಳೆಯ ರಾಷ್ಟ್ರವು ನಿರ್ಮಾಣ ಆಗುತ್ತದೆ ಎಂದರು.

ರಾಜಕೀಯದ ದೊಡ್ಡ ಪಿಡುಗು ಎಂದರೆ ಚುನಾವಣೆ ಸಮಯದಲ್ಲಿ ಮತದಾರರು ಆಸೆ, ಆಮಿಷಗಳಿಗೆ ಬಲಿಯಾಗುವುದು. ಯಾರೂ ಕೂಡ ಆಮಿಷಕ್ಕೆ ಬಲಿಯಾಗದೇ ಉತ್ತಮ ಅಭ್ಯರ್ಥಿಗಳಿಗೆ ತಮ್ಮ ಹಕ್ಕು ಚಲಾಯಿಸುವಂತೆ ಸಲಹೆ ನೀಡಿದರು.

ತಹಸೀಲ್ದಾರರಾದ ಶ್ರೀ ಯು.ನಾಗರಾಜ ಅವರು ಮಾತನಾಡಿ, ಪ್ರತಿಯೊಬ್ಬರೂ ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮೀದೇವಿ ಅವರು ಮಾತನಾಡಿ, ಮತದಾನ ಪ್ರಮಾಣ ಹೆಚ್ಚಳಕ್ಕೆ ತಾಲೂಕು ಸ್ವೀಪ್ ಸಮಿತಿಯಿಂದ ಸ್ವೀಪ್ ಚಟುವಟಿಕೆಗಳನ್ನು ಮಾಡುತ್ತಿದ್ದು, ಸೆಕ್ಟರ್ ಅಧಿಕಾರಿಗಳು, ತಾಲೂಕು ತಂಡದಿಂದ ಇವಿಎಂ/ವಿವಿಪ್ಯಾಟ್ ಮಷಿನ್ ಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ, ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಚುನಾವಣೆಯಲ್ಲಿ ತಮ್ಮ ಕುಟುಂಬಸ್ಥರನ್ನು ಕಡ್ಡಾಯವಾಗಿ ಮತದಾನ ಮಾಡಿಸಬೇಕು. ಮತದಾನ ಹಬ್ಬದಲ್ಲಿ ಎಲ್ಲರೂ ಖುಷಿಯಿಂದ ಪಾಲ್ಗೊಳ್ಳಬೇಕು ಎಂದರು.

ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಶ್ರೀಮತಿ ಲಲಿತಾಬಾಯಿ ಅವರು ಮತದಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು.

ಪ್ರಾತ್ಯಕ್ಷಿಕೆ : ಪ್ರಾಧ್ಯಾಪಕರಾದ ಇಮ್ಯಾನಿವಲ್ ಎಸ್ ಹಾಗೂ ಸೆಲ್ವರಾಜ್ ಅವರು ಯುವ ಮತದಾರರಿಗೆ ಇವಿಎಂ/ವಿವಿಪ್ಯಾಟ್ ಮಷಿನ್ ನ ಪ್ರಾತ್ಯಾಕ್ಷಿಕೆ ನೀಡಿದರು. ಹೊಸ ಮತದಾರರು ಅಣಕು ಮತದಾನ ಮಾಡಿ ಖುಷಿಪಟ್ಟರು.

ಈ ವೇಳೆ, ನಗರಸಭೆ ಪೌರಾಯುಕ್ತರಾದ ಶ್ರೀ ಆರ್, ವಿರುಪಾಕ್ಷಮೂರ್ತಿ, ಬಿಇಓ ಶ್ರೀ ವೆಂಕಟೇಶ ರಾಮಚಂದ್ರಪ್ಪ, ಗ್ರೇಡ್ 2 ತಹಸೀಲ್ದಾರ್ ರಾದ ಶ್ರೀ ಮಹಾಂತಗೌಡ, ಸಿಡಿಪಿಓ ಶ್ರೀ ಪ್ರವೀಣ್ ಹೇರೂರು, ಪ್ರಾಚಾರ್ಯರಾದ ಶ್ರೀ ಡಾ.ಜಾಜಿ ದೇವೇಂದ್ರಪ್ಪ, ಉಪನ್ಯಾಸಕರಾದ ಶ್ರೀ ಕರಿಗೂಳಿ, ಚುನಾವಣಾ ವಿಭಾಗದ ಶಿರಸ್ತೇದಾರರಾದ ಶ್ರೀ ರವಿಕುಮಾರ್ ನಾಯಕವಾಡಿ, ಕಂದಾಯ ನಿರೀಕ್ಷಕರಾದ ಶ್ರೀ ಮಂಜುನಾಥ, ಕಂದಾಯ ಇಲಾಖೆ ಸಿಬ್ಬಂದಿಗಳು, ತಾಪಂ ಸಿಬ್ಬಂದಿಗಳು, ಕಾಲೇಜು ಉಪನ್ಯಾಸಕರು, ಬಿಎಲ್ ಓಗಳು, ಸೆಕ್ಟರ್ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.