Breaking News

ಗಂಗಾವತಿಯ ಜುಲೈನಗರದಲ್ಲಿರುವ ವಿಶಾಲ್ ವೈನ್‌ಶಾಪ್ ಲೈಸನ್ಸ್ ರದ್ದತಿಗೆ ಒತ್ತಾಯಿಸಿ,ಕರ್ನಾಟಕ ದಲಿತ ರಕ್ಷಣಾ ವೇದಿಕೆ ಒತ್ತಾಯ.ಕೆ. ಬಾಲಪ್ಪ

Demand cancellation of license of Vishal Wineshop in Julaynagar, Gangavati. Karnataka Dalit Defense Forum insists. K. Balappa

ಗಂಗಾವತಿ: ನಗರದ ಜುಲಾಯಿನಗರದಲ್ಲಿರುವ ಸಿ.ಎಲ್-೨ ವಿಶಾಲ್ ವೈನ್ ಶಾಪ್ ಸನ್ನದುದಾರರು ಎಲ್ಲಾ ಮಧ್ಯಗಳಿಗೆ ಸರ್ಕಾರ ನಿಗದಿಪಡಿಸಿರುವ ಮಧ್ಯದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಧ್ಯವನ್ನು ಮಾರಾಟ ಮಾಡುವ ಮೂಲಕ ಅಬಕಾರಿ ಕಾಯ್ದೆಗಳನ್ನು ಗಾಳಿಗೆ ತೂರಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಕೂಡಲೇ ಸದರಿ ವೈನ್‌ಶಾಪ್ ಲೈಸನ್ಸ್ನ್ನು ರದ್ದುಪಡಿಸಿ ಮಾಲಿಕರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಗಂಗಾವತಿ ತಾಲೂಕ ಅಧ್ಯಕ್ಷರಾದ ಕೆ. ಬಾಲಪ್ಪ ಆಗ್ರಹಿಸಿದರು.


ಅವರು ಇಂದು (ಮಾರ್ಚ್-೧೮) ಅಬಕಾರಿ ನಿರೀಕ್ಷಕರಿಗೆ ದೂರು ಪತ್ರ ನೀಡಿ ಮಾತನಾಡಿದರು. ವಿಶಾಲ್ ವೈನ್‌ಶಾಪ್‌ನವರು ತಮಗೆ ಇಷ್ಟಬಂದAತೆ, ಪ್ರತಿಯೊಂದು ಮಧ್ಯಕ್ಕೂ ರೂ. ೧೫ ರಿಂದ ೨೦ ಗಳನ್ನು ಹೆಚ್ಚುವರಿಯಾಗಿ ಗ್ರಾಹಕರಿಂದ ವಸೂಲಿ ಮಾಡುತ್ತಿದ್ದಾರೆ. ಇದು ಅಬಕಾರಿ ಕಾಯ್ದೆ, ಸರ್ಕಾರದ ಕಾಯ್ದೆ ಕಾನೂನುಗಳನ್ನು ಉಲ್ಲಂಘನೆ ಮಾಡಿದಂತಾಗಿದೆ. ಆ ಮೂಲಕ ಗ್ರಾಹಕರಿಗೆ ಮೋಸ ವಂಚನೆಯನ್ನು ಮಾಡುತ್ತಿದ್ದಾರೆ. ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಗೆ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಬಾಕ್ಸ್ ಗಟ್ಟಲೆ ಮಧ್ಯವನ್ನು ಸರಬರಾಜು ಮಾಡುತ್ತಾರೆ ಹಾಗೂ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದು, ಒಬ್ಬ ಗ್ರಾಹಕರಿಗೆ ೫ ಮಧ್ಯದ ವಾಟಲ್‌ಗಳನ್ನು ಮಾತ್ರ ನೀಡಬೇಕು ಎಂಬ ಆದೇಶವಿದ್ದರೂ, ಅಕ್ರಮವಾಗಿ ಬಾಕ್ಸ್ಗಟ್ಟಲೆ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯೂ ಆಗಿರುತ್ತದೆ. ಕರಣ ಅಬಕಾರಿ ಇಲಾಖೆಯವರು ಸದರಿ ಸನ್ನದುದಾರರ ಪರವಾನಿಗೆಯನ್ನು ತಕ್ಷಣವೇ ರದ್ದು ಮಾಡಬೇಕು ಮತ್ತು ಸನ್ನದಿನ ಮಾಲಿಕರ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ನಮ್ಮ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಒತ್ತಾಯಿಸಿದೆ ಎಂದು ತಿಳಿಸಿದರು, ಒಂದು ವೇಳೆ ಅಬಕಾರಿ ಇಲಾಖೆ ಮುಂದಿನ ೧೫ ದಿನದಲ್ಲಿ ಕ್ರಮ ಕೈಗೊಳ್ಳದೇ ಹೋದಲ್ಲಿ ನಮ್ಮ ವೇದಿಕೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.