Breaking News

ಸ್ವಚ್ಚತಾ ಕಾರ್ಯವು ಮೊದಲು ತಮ್ಮ ಮನೆಯಿಂದಲೆ ಪ್ರಾರಂಭಿಸಿ ,ಅಧ್ಯಕ್ಷ ಮುತ್ತುರಾಜು ಸಲಹೆ

Cleanliness work should first start from your own home, advised President Muthuraju.

ಜಾಹೀರಾತು
ಜಾಹೀರಾತು


ವರದಿ : ಬಂಗಾರಪ್ಪ ಸಿ.
ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ
ಸುಳ್ಳೇರಿಪಾಳ್ಯ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತೆ ಕಾಪಾಡಲು ಪಿ ಡಿ ಒ ಮಾದೇಶ್ ಎಲ್ಲ ಗ್ರಾಮಗಳಲ್ಲೂ ಸಭೆ ಮಾಡಿ ಮಾಹಿತಿ ನೀಡಿದರು .
ಇದೇ ವಿಷಯವಾಗಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮುತ್ತುರಾಜು ಸರ್ಕಾರದ ಆದೇಶದಂತೆ ದಿನಾಂಕ 18 ಒಂಬತ್ತು 2024ರಂದು ಸಭೆಯನ್ನು ಕರೆಯಲಾಗಿದ್ದು ಸ್ವಚ್ಛತೆಯನ್ನ ನಮ್ಮ ಸದಸ್ಯರ ನೇತೃತ್ವದಲ್ಲಿ ಸಭೆಯನ್ನು ಕರೆದು ಪಂಚಾಯತಿ ವ್ಯಾಪ್ತಿಯ ಬಸಪ್ಪನ ದೊಡ್ಡಿ ಕಾಂಚಳ್ಳಿ ಪಚ್ಚೆದೊಡ್ಡಿ ಗುಂಡಪುರ ಮಂಚಾಪುರ ಸೇರಿದಂತೆ ಎಲ್ಲಾ ಗ್ರಾಮಗಳಲ್ಲೂ ವಿಶೇಷ ಸಭೆಯನ್ನು ಕರೆದು ಸ್ವಚ್ಛತೆಯನ್ನು ಕಾಪಾಡಬೇಕು ,ಕುಡಿಯುವ ನೀರಿನ ಟ್ಯಾಂಕ್ . ಜನ ಸೇರುವ ಸ್ಥಳ, ಶಾಲೆ ಮುಂಭಾಗ, ಊರಿನ ಮುಂಭಾಗದ ಚರಂಡಿಗಳು ಆಗಿರಬಹುದು ಇನ್ನೂ ಅನೇಕ ಜಾಗಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕೆಂದು ಎಲ್ಲಾ ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡಿದರೆ ಊರಿಗಳಲ್ಲಿ ಸುರಕ್ಷಿತವಾಗಿ ಆರೋಗ್ಯವಾಗಿ ಇರಬಹುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿಯ ಕಾರ್ಯದರ್ಶಿ ಪವನ್ ಕುಮಾರ್. ಉಪಾಧ್ಯಕ್ಷರಾದ ಶ್ರೀಮತಿ ಬೇಬಿ, ಸದಸ್ಯರುಗಳಾದ ಗುರು. ಸೋಮಣ್ಣ. ಬಿಲ್ ಕಲೆಕ್ಟರ್ ಮಾದೇವ್ .ಸೇರಿದಂತೆ ಸಿದ್ದರಾಜು ಜ್ಯೋತಿ ಸುಧಾ ಮಾದೇವಮ್ಮ ಚಂದ್ರಮ್ಮ ಮಾದೇಶ್ ಸ್ವಾಮಿ ಚೆನ್ನಯ್ಯ ಮೂರ್ತಿ ಮಾದೇವ ರಾಜೇಶ್ ಅಂಬಿಕಾ ರಾಜಶೇಖರ್ ಶಿವಣ್ಣ ಎಲ್ಲಾ ಗ್ರಾಮದ ಪಂಚಾಯಿತಿಯ ವಾಟರ್ ಮ್ಯಾನ್ ಗಳು ಗ್ರಾಮಸ್ಥರು ಹಾಜರಿದ್ದರು.

About Mallikarjun

Check Also

ಪುರುಷೋತ್ತಮ ದಾಸ್ ಹೆಗ್ಗಡೆ ಅವರ  “ಯಯಾತಿ” ಕಾದಂಬರಿ ಬಿಡುಗಡೆ 

Purushottam Das Heggade’s novel “Yayati” released ಅತಿ ಕಾಮ ಅತಿರೇಖವಾದ್ದು, ಮನಷ್ಯನ ಶ್ರೇಯಸ್ಸಿಗೆ ಪೂರಕವಲ್ಲ ; ಸಂಸ್ಕೃತಿ ಚಿಂತಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.