Breaking News

ರೈತ ಸಂಘಟನೆಯ ಕ್ಷಮೆ ಕೋರಿದ ಶಾಸಕ ಎಮ್ ಆರ್ ಮಂಜುನಾಥ್

MLA MR Manjunath apologized to farmers’ organization


ಹನೂರು:ಸರ್ಕಾರದಿಂದ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಕುಂದುಕೊರತೆಗಳ ಸಭೆಯಲ್ಲಿ ರೈತರಿಗೂ ಶಾಸಕರ ಬೆಂಬಲಿಗರಿಗೂ ನಡೆದ ಮಾತಿನ ಚಕಮಕಿಯಿಂದ ರೈತ ಸಂಘವು ಸಭೆಯಿಂದ ದೂರುವುಳಿದಿದ್ದರು .ಇದನ್ನು ಮನಗಂಡ ಶಾಸಕರು ರೈತರಿಗೂ ತಮ್ಮ ಬೆಂಬಲಿಗರಿಗೂ ಯಾವುದೇ ಮನಸ್ಥಾಪಕ್ಕೆ ಅನುವು ಮಾಡದೆ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅಂತ್ಯವಾಡಿದರು . ಪಟ್ಟಣದಲ್ಲಿ ಶನಿವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರ ಬೆಂಬಲಿಗರು ಹಾಗೂ ರೈತ ಸಂಘದ ಪದಾಧಿಕಾರಿಗಳ ನಡುವೆ ನಡೆದ ವಾಗ್ವಾದಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಆ‌ರ್.ಮಂಜುನಾಥ್ ತಮ್ಮ ಬೆಂಬಲಿಗರ ಪರವಾಗಿ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಶನಿವಾರ ಪಟ್ಟಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಕರ್ನಾ ಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ರೈತರ ಸಮಸ್ಯೆಗಳನ್ನು ತಿಳಿಸುತ್ತಿದ್ದಾಗ ಶಾಸಕ ಮಂಜುನಾಥ್‌ರವರ ಬೆಂಬಲಿಗರು ಹಾಗೂ ರೈತ ಸಂಘದವರ ನಡುವೆ ಮಾತಿನ ಚಕಮಕಿ ನಡೆದು ರೈತ ಸಂಘದ ಸದಸ್ಯರು ಶಾಸಕರು ಹಾಗೂ ಅವರ ಬೆಂಬಲಿಗರಿಗೆ ಧಿಕ್ಕಾರ ಕೂಗಿ ಸಭೆ ಬಹಿಷ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ರೈತ ಸಂಘದವರು ಪತ್ರಿಕಾಗೋಷ್ಠಿ ಕರೆದಿದ್ದರು. ಬಳಿಕ ಶಾಸಕರು ರೈತ ಸಂಘದವರು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿ ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲಿಗರ ಪರವಾಗಿ ಕ್ಷಮೆಯಾಚಿಸುವ ಮೂಲಕ ವಿವಾದ ಬಗೆಹರಿಸಿದ್ದಾರೆ. ಇದೇ ಸಮಯದಲ್ಲಿ ಶಾಸಕರು ಮಾತನಾಡಿದ, ರೈತ ಸಂಘದ ಸದಸ್ಯರು ಯಾವುದೇ ಸಮಸ್ಯೆಗಳಿದ್ದರೂ ನನಗೆ ಲಿಖಿತವಾಗಿ ಮನವಿ ನೀಡಿ, ದ ಮನವಿಯನ್ನು ನೀಡದೆ ಸುಮ್ಮನೆ ಪ್ರತಿಭಟನೆ ನಡೆಸಿದರೆ ವಿಚಾರ ತಿಳಿಯುವುದಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ನನ್ನ = ಗಮನಕ್ಕೆ ತಂದು, ಸಮಸ್ಯೆ ಪರಿಹರಿಸದಿದ್ದರೆ ನೀವು ಹೋರಾಟ ಮಾಡಬಹುದು ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ತಿಳಿಸಿದರು.

ನಂತರ ರೈತ ಮುಖಂಡರು ಮಾತನಾಡಿ, ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಒಂದೇ ಸರ್ವೆ ನಂಬರ್‌ನಲ್ಲಿರುವ > ೨ ಜಮೀನುಗಳನ್ನು ಪ್ರತ್ಯೇಕವಾಗಿ ಪೋಡುಗಳನ್ನಾಗಿ ಮಾಡಿಕೊಡಬೇಕು ಎಂಬುದೂ ಸೇರಿದಂತೆ ಹಲವುಬೇಡಿಕೆಗಳನ್ನು ಶಾಸಕರ ಮುಂದಿಟ್ಟರು. ಇದಕ್ಕೆ ಸ್ಪಂದಿಸಿದ ಶಾಸಕರು ಸಮಸ್ಯೆಗಳನ್ನು ಬಗೆಹರಿಸಲು ಬದ್ಧನಾಗಿದ್ದು, ಹೆಚ್ಚಿನ ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಭಾಸ್ಕ‌ರ್, ಹನೂರು ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್ ಖಾನ್‌, ಉಪಾಧ್ಯಕ್ಷ ಪಳನಿ ಸ್ವಾಮಿ, ರೈತ ಮುಖಂಡರುಗಳಾದ ಶೈಲೇಂದ್ರ, ಕಾಂಚಳ್ಳಿ ಬಸವರಾಜು, ಶಕ್ತಿವೇಲು, ಕಾಚಿಗೌಡ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

About Mallikarjun

Check Also

ಹಿಂದೂ, ಮುಸ್ಲಿಂ ಓಲೈಕೆಯಲ್ಲಿ ದಲಿತರನ್ನು ಮರೆತ ಬಿಜೆಪಿ ಕಾಂಗ್ರೆಸ್

ಗಂಗಾವತಿ.ಮೇ.01: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಿಂದೂಗಳನ್ನು ಓಲೈಸಿದರೆ, ಕಾಂಗ್ರೆಸ್ ಮುಸ್ಲಿಮರ ಓಟುಗಳಿಗಾಗಿ ತುಚ್ಛ ರಾಜಕಾರಣ ಮಾಡುತ್ತಿವೆ. ದಲಿತ ಹಾಗೂ ಹಿಂದುಳಿದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.