Uncontested election of Chikkabenakal Gram President, Vice President
ಗಂಗಾವತಿ : ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಬುಧವಾರ ನಡೆಯಿತು.
ಅಧ್ಯಕ್ಷರಾಗಿ (ಸಾಮಾನ್ಯ) ಶಿವಮೂರ್ತಿ ಗೊಲ್ಲರ್, ಉಪಾಧ್ಯಕ್ಷರಾಗಿ (ಎಸ್ಸಿ ಮಹಿಳೆ) ಗುರಮ್ಮ ಲಿಂಗಪ್ಪ ಭೋವಿ ಅವರು ಆಯ್ಕೆಯಾದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗೊತ್ತುಪಡಿಸಿದ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಮಂಗಳವಾರ ಬೆಳಗ್ಗೆ 9 ರಿಂದ 1.30 ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಗ್ರಾಮ ಪಂಚಾಯತ್ ನ ಒಟ್ಟು 24 ಸದಸ್ಯರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆ ಮಾಡಿದ್ದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಉಪ್ಪಾರ, ತಾಪಂ ಸಿಬ್ಬಂದಿಗಳಾದ ಭೀಮಪ್ಪ ನಾಯಕ, ಸಂತೋಷ,
ಗ್ರಾಪಂ ಕಾರ್ಯದರ್ಶಿಗಳಾದ ಯಮನೂರಪ್ಪ, ಗ್ರಾಪಂ ಸರ್ವ ಸದಸ್ಯರು, ಗ್ರಾಪಂ ಸಿಬ್ಬಂದಿಗಳು ಇದ್ದರು.