Breaking News

ಆರೋಗ್ಯ ಸಲಹೆ ನೀಡಲು ಗಂಗಾವತಿ ಆಸ್ಪತ್ರೆ ಆಯ್ಕೆ:ದೇಶದ ಪ್ರಮುಖ 14 ಆಸ್ಪತ್ರೆಗಳಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಗಂಗಾವತಿ ಆಸ್ಪತ್ರೆ

Gangavati Hospital selected for health consultation: The only Gangavathi hospital in the state ranked among the top 14 hospitals of the country Gangavathi Hospital selected for health consultation: The only Gangavathi hospital ranked among the top 14 hospitals of the country

ಗಂಗಾವತಿ: 12;ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ನಾನಾ ಯೋಜನೆಗಳಿಗೆ ಸಲಹೆ ನೀಡಲು ರಾಜ್ಯದಿಂದ ಗಂಗಾವತಿಯ ಸರಕಾರಿ ಉಪ ವಿಭಾಗ ಆಸ್ಪತ್ರೆಯನ್ನು ಆಯ್ಕೆ ಮಾಡಲಾಗಿದೆ.ಆರೋಗ್ಯ ಇಲಾಖೆ ತಜ್ಞರ ಸಮಿತಿಗೆ ಸಲಹೆ ನೀಡಲು ಕೇಂದ್ರ ಆರೋಗ್ಯ ಇಲಾಖೆಯಿಂದ ಆಹ್ವಾನ ನೀಡಲಾಗಿದೆ, ಈ ರೀತಿ ಸರ್ಕಾರಿ ಆಸ್ಪತ್ರೆಗಳು ಕೇಂದ್ರ ಸರ್ಕಾರದ ಮಾಹಿತಿಗೆ ಆಯ್ಕೆಯಾಗುವುದು ಅಷ್ಟೊಂದು ಸುಲಭದ ವಿಷಯವಲ್ಲ ಇದರಲ್ಲಿ

ಆಸ್ಪತ್ರೆಯ ಸಿಬ್ಬಂದಿಗಳ ಒಗ್ಗಟ್ಟಿನಿಂದ ಇಂತಹ ಒಂದು ಸಾಧನೆ ಮಾಡಲು ಸಾಧ್ಯವಾಗಿದೆ, ಇದು ರಾಜ್ಯದ ಮತ್ತು ಗಂಗಾವತಿಯ ಜನತೆಯ ಹೆಮ್ಮೆಯ ವಿಷಯ.

ಈಗಾಗಲೇ ರಚನೆಯಾಗಿರುವ ಸಮಿತಿಗೆ, ಸೂಕ ಸಲಹೆ ನೀಡುವಂತೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಸರಕಾರಿ ಉಪ ವಿಭಾಗ ಆಸ್ಪತ್ರೆಗೆ ಕೇಂದ್ರದ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಜಂಟಿ ನಿರ್ದೇಶಕ ರೋಹಿತ್ ಡಿಯೋ ಪತ್ರ ಬರೆದು ಆಹ್ವಾನಿಸಿದ್ದಾರೆ.

ಕೇಂದ್ರದ ಸಮಿತಿಗೆ ಸೂಕ್ತ ಸಲಹೆ ನೀಡುವಂತೆ ನಾನಾ ರಾಜ್ಯಗಳ ವಿವಿಧ ಸರಕಾರಿ ಆಸ್ಪತ್ರೆಗಳಿಗೆ ಆಹ್ವಾನ ನೀಡಲಾಗಿತ್ತು. ಆದಾಗ್ಯೂ ಗಂಗಾವತಿ ಉಪ ವಿಭಾಗ ಆಸ್ಪತ್ರೆಯು, ಕರ್ನಾಟಕದಿಂದ ಆಯ್ಕೆ ಮಾಡಿಕೊಳ್ಳಲಾಗಿರುವ ಏಕೈಕ ಆಸ್ಪತ್ರೆಯಾಗಿ ಗಮನಸೆಳೆದಿದೆ. ಮೊದಲ ಹಂತದಲ್ಲಿ ಇ-ಮೇಲ್ ಮೂಲಕ ಮಾಹಿತಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು, ಬಳಿಕ ಏ.12ರಂದು ಬಂಗಾಳದ ಟೈರ್ಗ ಸೆಕ್ಟರ್‌ನಲ್ಲಿರುವ ನೀತಿ ಆಯೋಗದ ಕಚೇರಿಯಲ್ಲಿ ಸಂಜೆ 4ರಿಂದ 6ರವರೆಗೆ ಖುದ್ದು ಆಯಾ ಆಸ್ಪತ್ರೆಯ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು, ಮುಖ್ಯ ವೈದ್ಯಾಧಿಕಾರಿಗಳು ಭಾಗಿಯಾಗಿ ಮಾಹಿತಿ ನೀಡಬಹುದು ಎಂದು ಉಲ್ಲೇಖಿಸಲಾಗಿದೆ.

ದೆಹಲಿ, ಛತ್ತೀಸ್‌ಘಡ, ರಾಯಪುರ, ಉತ್ತರಖಂಡದ ರಿಷಿಕೇಶ ಏಮ್ಸ್ ಆಸ್ಪತ್ರೆಗಳು, ಜಮ್ಮು-ಕಾಶ್ಮೀರ ಬಾರಾಮುಲ್ಲದ ಜಿಲ್ಲಾ ಆಸ್ಪತ್ರೆ

ಗಂಗಾವತಿ ಉಪವಿಭಾಗ ಆಸ್ಪತ್ರೆ. ಈ ಆಸ್ಪತ್ರೆಗಳು ಸಲಹೆ ಮತ್ತು ಮಾಹಿತಿಯನ್ನು ನೀಡಬಹುದಾಗಿದೆ.

 *ಉದ್ದೇಶವೇನು* ..?

ಸಾರ್ವಜನಿಕ ಆರೋಗ್ಯಕ್ಕಾಗಿ ಕೇಂದ್ರ ಸರಕಾರ ಜಾರಿ ಮಾಡುತ್ತಿ ರುವ ಆರೋಗ್ಯ ಇಲಾಖೆಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಯೋಜನೆ ವಿನ್ಯಾಸ, ಅಗತ್ಯ ಸೌಲಭ್ಯಗಳ ವಿಸ್ತರಣೆ, ಫಲಾನುಭವಿ ರೋಗಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಲಹೆಗಳನ್ನು ಕೇಂದ್ರ ಆಹ್ವಾನಿಸಿದೆ.

 ಒಟ್ಟು 14 ಪ್ರಮುಖ ಆಸ್ಪತ್ರೆಗಳಿಗೆ ಆಹ್ವಾನ ನೀಡಲಾಗಿದ್ದು, ಇದರಲ್ಲಿ ಗಂಗಾವತಿಯ ಉಪ ವಿಭಾಗ ಆಸತ್ರೆಯೂ ಒಂದಾಗಿದೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಸ್ಪತ್ರೆಯಾಗಿ ಗಂಗಾವತಿ ಉಪ ವಿಭಾಗ ಆಸ್ಪತ್ರೆ ಗಮನ ಸೆಳೆದಿದೆ.

About Mallikarjun

Check Also

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬಲಿಷ್ಠವಾಗಿದೆಗ್ಯಾರಂಟಿ ಯೋಜನೆಗಳು ಆರ್ಥಿಕ ಶಕ್ತಿಗೆ ಪೂರಕ: ಮಾಜಿ ಸಂಸದ ಹೆಚ್.ಜಿ ರಾಮುಲು

Congress led by CM Siddaramaiah is strongGuarantee schemes complement economic power: Former MP HG Ramulu …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.