Breaking News

ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ಸ್ಪರ್ಧೆಯ ಫಲಿತಾಂಶ

Results of the International Abacus and Mental Arithmetic Competition

ಜಾಹೀರಾತು

ಗಂಗಾವತಿ: ಇತ್ತೀಚೆಗೆ ಸಿಂಗಾಪುರದಲ್ಲಿ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ & ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ಕುಮಾರಿ ಸಹಸ್ರ ಹೆಚ್., ಕುಮಾರಿ ರೋಜಾ ಮತ್ತು ಖುಷಿತ್ ಆರಾಧ್ಯ ಈ ೦೩ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಅತ್ಯುತ್ತಮ ಫಲಿತಾಂಶ ಪಡೆದು ಸಂಸ್ಥೆಗೆ ಹಾಗೂ ಗಂಗಾವತಿ ನಗರಕ್ಕೆ ಕೀರ್ತಿಯನ್ನು ತಂದಿರುತ್ತಾರೆ.
ಈ ಫಲಿತಾಂಶಕ್ಕಾಗಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಒಡೆಯರ್ ಮತ್ತು ಆಡಳಿತಾಧಿಕಾರಿ ಬಿ.ಎಸ್ ಪ್ರಕಾಶ ಅವರಿಗೆ ಅಮೇಜಿಂಗ್ ಕೋಚ್ ಮೆಡಲ್‌ನ್ನು ಪ್ರದಾನ ಮಾಡಲಾಗಿದೆ.
ವಿದ್ಯಾರ್ಥಿಗಳ ಈ ಯಶಸ್ಸಿಗೆ ಕಾರಣೀಕರ್ತರಾದ ಪಾಲಕರಿಗೂ, ಶಿಕ್ಷಕ ವೃಂದದವರಿಗೂ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ತಿಳಿಸಲಾಯಿತು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *