Appeal to Tehsildar Amaresh GK by All India Dalit Rights Movement
ಅಪ್ರಾಪ್ತ ಬಾಲಕಿಯ ಮೇಲೆಶಿಕ್ಷಕನಅತ್ಯಾಚಾರ ಖಂಡನೀಯ:ಕ್ರಮಕೈಗೊಳ್ಳಲಎ.ಐ.ಆರ್.ಡಿ.ಎಂ.ಒತ್ತಾಯ
ಕೊಟ್ಟೂರು : ಕಲಬುರಗಿ ಜಿಲ್ಲೆ, ಯಡ್ರಾಮಿ ಗ್ರಾಮದ ೫ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಖಾಸಗಿ ಶಿಕ್ಷಕನ ವಿರುದ್ಧ ಕಠಿಣ ಕ್ರಮಜರುಗಿಸುವಂತೆ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆಯು ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಒತ್ತಾಯಪೂರ್ವಕ ಮನವಿ ಸಲ್ಲಿಸಿತು.
ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾಧ್ಯಕ್ಷರಾದ ಕೆ. ಕೊಟ್ರೇಶ್ ಮಾತನಾಡಿದರು ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನವನ್ನು ನೀಡಿದ್ದು, ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ ಮಹಿಳೆಯರ, ಮೇಲೆ ಪದೇ ಪದೇ ಅತ್ಯಾಚಾರ, ಹಲ್ಲೆ ನಡೆಯುತ್ತಿರುವುದು ತೀವ್ರ ನೋವಿನ ಸಂಗತಿಯಾಗಿದ್ದು, ಕಲಬುರಗಿ ಜಿಲ್ಲೆ, ಯಡ್ರಾಮಿ ಗ್ರಾಮದ ೫ನೇ ತರಗತಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿರುವ ಈ ಘಟನೆಯು ಖಂಡನೀಯವಾಗಿದ್ದು, ಸದರಿ ಕೃತ್ಯವನ್ನು ಎಸಗಿದ ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಿ, ವಿದ್ಯಾರ್ಥಿನಿಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ನೀಡಬೇಕು ಹಾಗೂ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕೂಡಲೇ ರಾಜ್ಯದಲ್ಲಿ ಇರುವ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ತಾಲೂಕು ಮಂಡಳಿ, ಕೊಟ್ಟೂರು ಹಾಗೂ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಆಗ್ರಹಿಸುತ್ತದೆ.
ಹಾಗೂ ಈ ಕೃತ್ಯ ಎಸಗಿದ ಆರೋಪಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಮುಂದಿನ ದಿನಮಾನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮವಹಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ನಂತರ ಮಾತನಾಡಿದ ತಹಸೀಲ್ದಾರ್ ಅಮರೇಶ್ ಜಿಕೆ ಈ ಮನವಿಯನ್ನು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಗಳಿಗೆ ಕಳಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎ ಐ ಡಿ ಆರ್ ಎಂ ತಾಲ್ಲೂಕು ಅಧ್ಯಕ್ಷ ತೆಗ್ಗಿನಕೇರಿ ಕೊಟ್ರೇಶ್, ಎ ಐ ಡಿ ಆರ್ ಎಂ ಜಿಲ್ಲಾ ಸದಸ್ಯರಾದ ಪಿ ಚಂದ್ರಶೇಖರ್,ಎ ಐ ಡಿ ಆರ್ ಎಂ ಪ್ರಧಾನ ಕಾರ್ಯದರ್ಶಿ ಎಲ್ ಅಂಜನಿ,ಹರ್ಷ , ರಮೇಶ್,ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸದಸ್ಯರುಗಳಾದ ಜಿ ಕೋಟೆಪ್ಪ, ಗುಲಾಲಿ ಕಾರ್ತಿಕ್, ಪಿ ತರುಣ್, ಟಿ ರಾಜಶೇಖರ್, ಟಿ ಕೃಷ್ಣಮೂರ್ತಿ, ಕೆ ಮಣಿಕಂಠ, ಅಶೋಕ್, ಕರಿಬಸಮ್ಮ, ರೇಣುಕಮ್ಮ, ಸಂತೋಷ್, ದುರುಗಪ್ಪ ಇತರರು ಉಪಸ್ಥಿತರಿದ್ದರು.
ಕೋಟ್
ಮಹಿಳೆಯರು, ಬಾಲಕಿಯರ ಮೇಲೆ ಪದೇ ಪದೇ ಅತ್ಯಾಚಾರ ನಡೆಯುತ್ತಿರುವುದು ತೀವ್ರ ನೋವಿನ ಸಂಗತಿ ಅತ್ಯಾಚಾರ ಎಸೆಗಿರುವ ಶಿಕ್ಷಕನನ್ನು ಫೋಕಸ್ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವನಿಗೆ ಜೀವಾವಧಿ ಶಿಕ್ಷೆ ನೀಡಬೇಕು ಹಾಗೂ ಮತ್ತೆ ಇಂಥ ಘಟನೆ ನಡೆಯದಂತೆ ರಾಜ್ಯ ಸರ್ಕಾರವು ಕಠಿಣ ಕಾನೂನು ತರಬೇಕು.
-ತೆಗ್ಗಿನಕೇರಿ ಕೊಟ್ರೇಶ್
ಅಖಿಲ ದಲಿತ ಹಕ್ಕುಗಳ ಆಂದೋಲನ ತಾಲೂಕು ಅಧ್ಯಕ್ಷ ಕೊಟ್ಟೂರು.