Breaking News

ಪೊಲೀಸರ ತಾರತಮ್ಯಕ್ಕೆ ಶ್ರೀಕಾಂತಖಂಡನೆಮಾಜಿ ಶಾಸಕರಿಗೆ ಎಸ್ಕಾರ್ಟ್: ಮೂರ್ತಿ ಕಳ್ಳತನಕ್ಕೆ ಮೌನ

Srikanta condemns police discrimination Escort for former MLA: Silence on idol theft


ಗಂಗಾವತಿ:ತಾಲೂಕಿನ ಪಂಪಾಸರೋವರ ಬಳಿ ಆಂಜನೇಯ ಮೂರ್ತಿ ಕಳ್ಳತನವಾಗಿ ನಾಲ್ಕು ದಿನವಾಗುತ್ತಿದ್ದರೂ ಗಂಗಾವತಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ. ಆದರೆ ಇಲಾಖೆಯ ನಿಯಮ ಉಲ್ಲಂಘಿಸಿ ಮಾಜಿ ಶಾಸಕರಿಗೆ ಎಸ್ಕಾರ್ಟ್ ವಾಹನದ ಮೂಲಕ ಭಾರಿ ಭದ್ರತೆ ನೀಡುತ್ತಾ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶನಿವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿರುವ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ಪೊಲೀಸ್ ಇಲಾಖೆಯ ನಿಯಮ ಉಲ್ಲಂಘಿಸಿ ಮತ್ತು ತಮ್ಮ ಅಧಿಕಾರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಗರ ಪಿಐ ಮತ್ತಿತರ ಪೊಲೀಸ್ ಅಧಿಕಾರಿಗಳು ಎಸ್ಕಾರ್ಟ್ ವಾಹನದ ಮೂಲಕ ಭದ್ರತೆ ನೀಡಿದ್ದಾರೆ. ಪೊಲೀಸ್ ಇಲಾಖೆಯ ನಿಯಮ ಉಲ್ಲಂಘಿಸಿದ್ದರೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಡಿವೈಎಸ್‌ಪಿ ಅವರು ಸಂಬAಧಿಸಿದ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಆದರೆ ನಗರದಲ್ಲಿ ಈ ಹಿಂದೆ ಹಿಂದುಗಳು ಶಾಂತರೀತಿಯಿAದ ಗಣಪತಿ ಹಬ್ಬ ಆಚರಿಸಿದ ಸಂದರ್ಭದಲ್ಲಿ ಆರತಿ ಮಾಡಿದ್ದಾರೆ ಎಂಬ ನೆಪ ಮಾಡಿಕೊಂಡು ಪ್ರಕರಣ ದಾಖಲಿಸಿದ್ದರಲ್ಲದೇ ಪೊಲೀಸ್ ಅಧಿಕಾರಿಯನ್ನು ತಪ್ಪಿತಸ್ಥರೆಂದು ಅಮಾನತ್ತು ಮಾಡಿದ್ದರು. ಈ ಎರಡು ಘಟನೆಯನ್ನು ಗಮನಿಸದರೆ ಎಸ್‌ಪಿ ಮತ್ತು ಡಿವೈಎಸ್‌ಪಿ ಅವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಜನರಿಗೆ ಭಾಸವಾಗುತ್ತಿದೆ. ಜೊತೆಗೆ ಕಳೆದ ನಾಲ್ಕೆöÊದು ದಿನಗಳ ಹಿಂದೆ ಹಿಂದುಗಳು ಪೂಜಿಸುವ ಆಂಜನೇಯ ಮೂರ್ತಿ ಕಳ್ಳತನವಾಗಿದೆ. ಈ ಘಟನೆಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಮೂರ್ತಿ ಕಳ್ಳತನವಾಗಿರುವ ಕುರಿತು ಒಂದು ಪ್ರಕರಣ ದಾಖಲಿಸಿಲ್ಲ. ಆದರೆ ಮಾಜಿ ಶಾಸಕರಿಗೆ ನಿಯಮ ಉಲ್ಲಂಘಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಾವಲು ವಾಹನ ಒದಗಿಸಿದ್ದಾರೆ. ಇಂತಹ ತಾರತಮ್ಯ ನೀತಿಯಿಂದ ಗಂಗಾವತಿ ಜನತೆಯಲ್ಲಿ ಪೊಲೀಸರ ಬಗ್ಗೆ ನಂಬಿಕೆ ಕಡಿಮೆಯಾಗುತ್ತದೆ. ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಎಸ್ಕಾರ್ಟ್ ನೀಡಿರುವುದು ಮತ್ತು ಮೂರ್ತಿ ಕಳ್ಳತನ ಘಟನೆ ನಿರ್ಲಕ್ಷ ಮಾಡಿರುವ ಎರಡು ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶ್ರೀಕಾಂತ ಹೊಸಕೇರಿ ಅಗ್ರಹಿಸಿದ್ದಾರೆ.

About Mallikarjun

Check Also

ಕನಕಗಿರಿ ವಿಧಾನಸಭಾ ಕ್ಷೇತ್ರದ ಗಾಳೆಮ್ಮಗುಡಿಕ್ಯಾಂಪ್ ನಿವಾಸಿಗಳಿಂದಮತದಾನ ಬಹಿಷ್ಕಾರ

From the residents of Galemmagudicamp of Kanakagiri Assembly ConstituencyBoycott ಗಂಗಾವತಿ: ತಾಲೂಕಿನ ಮರಳಿ ಹೋಬಳಿಯ ಭಟ್ಟರ ಹಂಚಿನಾಳ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.