ಅಂತರ್ಯಾಮಿ” ಚಿತ್ರದ “ ಹಕ್ಕಿ ನಾನು ಹಗಲಿನಲ್ಲಿ” ಹಾಡು ಬಿಡುಗಡೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Antaryami’s “Hakki Naun Hagalilli” song released

ಜಾಹೀರಾತು
antaryami cinema 2ne song bidugade (1)


ಬೆಂಗಳೂರು : ಗುರುರೇಣುಕಾ ಪ್ರೊಡಕ್ಷನ್ ತುಮಕೂರ ಅವರ “ಅಂತರ್ಯಾಮಿ” ಕನ್ನಡ ಚಲನಚಿತ್ರದ “ ಹಕ್ಕಿ ನಾನು ಹಗಲಿನಲ್ಲಿ” ಎರಡನೇ ಹಾಡನ್ನು ಜನಪ್ರಿಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ , ಚಿತ್ರಕಥೆಗಾರ, ಗೀತರಚನೆಕಾರರಾದ ಸಿಂಪಲ್‌ಸುನಿ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭಕೋರಿದರು.
ಸಿಂಪಲ್ ಸುನಿ ಅವರ ಆಫೀಸಿನಲ್ಲಿ ಲ್ಯಾಪಿಯಲ್ಲಿ ಬಟನ್ ಒತ್ತುವ ಮೂಲಕ ಬಿಡುಗಡೆ ಮಾಡಿ , ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಚಿತ್ರಗಳು ನಿಮ್ಮಿಂದ ನಿರ್ಮಾಣ ಆಗಲಿ ಎಂದರು. ಚಿತ್ರದ ಶೀರ್ಷಿಕೆಯನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಅನಾವರಣಗೊಳಿಸಿದ್ದರು, ಚಿತ್ರದ ಫಸ್ಟ್ಲುಕ್ ಅನ್ನು ಮಾನ್ಯ ಗೃಹಮಂತ್ರಿ ಜಿ ಪರಮೇಶ್ವರ್‌ರವರು ಅನಾವರಣ ಮಾಡಿದ್ದರು ಎಂದು ನಿರ್ಮಾಪಕ ನವೀನ್ ಎನ್.ಜಿ ಸಿಂಪಲ್‌ಸುನಿ ಅವರಿಗೆ ತಿಳಿಸಿದರು.

antaryami cinema 2ne song bidugade (2)

ಈ ಸಂದರ್ಭದಲ್ಲಿ ನಿರ್ದೇಶಕ ಧನಂಜಯ್,ನಾಯಕ ಪ್ರಣವ್, ನಾಯಕಿ ಮೊಹಿರಾಚಾರ್ಯ ಸಾಹಿತಿ ವಿನಯ್ ಕಾವ್ಯ ಕಾಂತಿ ಮತ್ತು ಅರವಿಂದ ಶೇಕ್ ಚಿತ್ರತಂಡದವರು ಉಪಸ್ಥಿತರಿದ್ದರು.
ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಈ ಚಿತ್ರದಲ್ಲಿ ನಾಯಕರಾಗಿ ಪ್ರಣವ್, ನಾಯಕಿಯಾಗಿ ಮೋಹಿರ ಆಚಾರ್ಯ, ಮಂಡ್ಯಸಿದ್ದು, ಕಾಮಿಡಿ ಕಿಲಾಡಿ ಉದಯ್, ಕಿಟ್ಟಿ, ಮಂಜಿವಾ, ಮುಗಿಲನ್, ಬೇಬಿ ಹಾನ್ಸಿ, ಬಾಲಕೃಷ್ಣ ಬರಗೂರು, ಹೇಮಾ ಮಾಲಿನಿ, ರೇಣುಕಾಂಬ , ರುದ್ರ ಮುನಿ,ಯೋಗೇಶ ಮೊದಲಾದವರಿದ್ದಾರೆ. ಛಾಯಾಗ್ರಹಣ ಎಸ್.ಬಾಲು, ವಿನಯ್ ಕಾವ್ಯ ಕಾಂತಿಯವರ ಸಾಹಿತ್ಯ , ನಾಲ್ಕು ಹಾಡುಗಳಿದ್ದು, ಪೃಥ್ವಿ ಭಟ್, ಮೇಘನಾ ಕುಲಕರ್ಣಿ, ದೇಸಿ ಮೋಹನ್ ರವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಸಂಗೀತ ದೇಸಿ ಮೋಹನ್ ಸಂಕಲನ ಅರವಿಂದ್ ರಾಜ್, ನೃತ್ಯ ನಿರ್ದೇಶನ ಬಾಲು ಮಾಸ್ಟರ್, ತಾಂತ್ರಿಕ ಸಲಹೆ ಶ್ರೀಕಾಂತ್ ಶ್ರಾಫ್, ಡಿಆಯ್ ಚೆನೈ ,ಬೆಂಗಳೂರ, ಪಿ.ಆರ್.ಓ ಎಂಜೆಎಸ್‌ಪಿಆರ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ನಿರ್ದೇಶನ ತಂಡದಲ್ಲಿÀ ರವಿ ಶಂಕರ್‌ನಾಗ್, ಶರತ್ ಘಾಟಿ, ಮಂಜುನಾಥ್ ಹೊಸ ರಂಗಾಪುರ, ಮುಕುಂದ, ರಾಣಾ, ವಸಂತ್ ಇದ್ದಾರೆ. ನವೀನ್ ಎನ್.ಜಿ ನಿರ್ಮಾಪಕರಾಗಿರುವ ಈ ಚಿತ್ರವನ್ನು ಕೆ. ಧನಂಜಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

Total Views: 0
Share This Article